ತೆರೆಮರೆಯಲ್ಲಿದ್ದುಕೊಂಡೇ ಹಲವಾರು ಸಮಾಜಸೇವೇ ಕಾರ್ಯಗಳು ಮತ್ತು ವಿದೇಶದಲ್ಲಿ ತಮ್ಮ ಉದ್ಯಮವನ್ನು ನಡೆಸುತ್ತಿದ್ದರೂ ತಮ್ಮ ಹುಟ್ಟೂರಿಗಾಗಿ ಗಮನಾರ್ಹ ಸೇವೆ ಸಲ್ಲಿದ ದುಬೈಯ ಖ್ಯಾತ ಉದ್ಯಮಿ ಮುಹಮ್ಮದ್ ಇಬ್ರಾಹೀಂ ನವೀದ್ ರವರು ಇದೀಗ ತುಳುನಾಡ ರಕ್ಷಣಾ ವೇದಿಕೆಯು ನೀಡುತ್ತಿರುವ ವಿಶ್ವ ತೌಳವ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸಮಾಜಸೇವೆ ಕ್ಷೇತ್ರದಲಲಿ ನವೀದ್ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಂಗಳೂರಿನ ಪುರಭವನದಲ್ಲಿ ನಿನ್ನೆ ಕರ್ನಾಟಕ ರಕ್ಷಣಾ ವೇದಿಕೆ (ರಿ)ಯಿಂದ ಮೂರು ದಿನಗಳ ಕಾಲ ತೌಳವ ಉಚ್ಚಯ ( ವಿಶ್ವ ತುಳುವರ ಸಮ್ಮೇಳನ) ಕಾರ್ಯಕ್ರಮವು ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಮುಹಮ್ಮದ್ ನವೀದ್ ಮಾಗುಂಡಿ ಬಹುಕೋಟಿ ಕಂಪೆನಿಯೊಂದರ ಸಿಇಒ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಪ್ರಚಾರವಿಲ್ಲದೇ ಸಮಾಜಸೇವೆಗಳನ್ನು ಕೈಗೊಳ್ಳುತ್ತಿದ್ದರು. ಗಣ್ಯರ ಸಮ್ಮುಖದಲ್ಲಿ ಮಂಗಳೂರಿನ ಪುರಭವನದಲ್ಲಿ ಮುಹಮ್ಮದ್ ನವೀದ್ ಮಾಗುಂಡಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.