ಶ್ರೀಲಂಕಾ: ಮಾಲ್ಡೀವ್ಸ್ ನಿಂದ ಶ್ರೀಲಂಕಾಕ್ಕೆ ಹೊರಟಿರುವ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತ ಲಭಿಸಿದೆ.

ದ್ವೀಪ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಮೋದಿಯವರ ಈ ಭೇಟಿಯಾಗಿದ್ದು ಭಾರತ ನೆರೆ ದೇಶಗಳೊಂದಿಗೆ ಹೊಂದಲು ಉದ್ದೇಶಿಸಿರುವ ಬಾಂಧವ್ಯ ನೀತಿಯನ್ನು ಇದು ಸಾರುತ್ತದೆ.

ಶ್ರೀಲಂಕಾಗೆ ಬಂದಿಳಿದ ಮೋದಿಯವರನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವವಾಗಿ ಸ್ವಾಗತಿಸಿದರು. ತಮ್ಮ ಭೇಟಿಯಲ್ಲಿ ಮೋದಿಯವರು ಇಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಅಲ್ಲಿನ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಕೊಲಂಬೊ ರಾಜಧಾನಿಗೆ ಬಂದಿಳಿದ ಮೋದಿಯವರು ಕಳೆದ ಏಪ್ರಿಲ್ ನಲ್ಲಿ ಈಸ್ಟರ್ ಸಂಡೆ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.