ಉಡುಪಿ: ಈ ಬಾರಿ ತಲೆದೋರಿರುವ ಮತ್ಸ್ಯಕ್ಷಾಮದಿಂದಾಗಿ ಅದನ್ನೆ ನಂಬಿಕೊಂಡಿರುವ ಸಾವಿರಾರು ಕುಟುಂಬದ ಬದುಕು ದುಸ್ತರಕ್ಕೊಳಗಾಗಿದೆ. ಕಳೆದ ಎರಡು ತಿಂಗಳಿನಿಂದ ಮೀನುಗಾರಿಕೆಗೆ ತೆರಳಿರುವ ಯಾಂತ್ರಿಕೃತ ಬೋಟ್ ಗಳಿಗೆ ಮತ್ಸ್ಯಕ್ಷಾಮ ಎದುರಾಗಿದೆ.

ಈ ಬಾರಿ ಮಳೆಗಾಲದಲ್ಲಿ ಅತೀವೃಷ್ಟಿಯ ಕಾರಣ ಮತ್ತು ಬಿರುಗಾಳಿಯ ಕಾರಣ ನಾಡದೋಣಿಯನ್ನು ಬಳಸಿ ಮೀನುಗಾರಿಕೆ ನಡೆಸಲು ಅಸಾಧ್ಯವಾಗಿತ್ತು. ಇದೀಗ ಯಾಂತ್ರಿಕೃತ ಬೋಟ್ಗಳಿಗೆ ಆರಂಭದಲ್ಲಿ ಮೀನುಗಾರರಿಗೆ ಒಳ್ಳೆಯ ಲಾಭ ಒದಗಿಸುತ್ತಿತ್ತು. ಆದರೆ ಈ ಬಾರಿ ಮೀನಿನ ಕೊರತೆ ಆತಂಕ ಸೃಷ್ಟಿಸಿದೆ.

ಮಲ್ಪೆ ಪರ್ಸಿನ್ ಬೋಟ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಚಂದ್ರ ಸಾಲಿಯಾನ್ ಹೇಳುವ ಪ್ರಕಾರ, “ನಮಗೆ ಮೀನುಗಾರಿಕೆ ಬಿಟ್ಟು ಬೇರೆ ಕಸುಬು ತಿಳಿದಿಲ್ಲ. ತಲತಲಾಂತರದಿಂದ ಈ ಕಸುಬನ್ನು ನಂಬಿಕೊಂಡಿದ್ದೇವೆ. ಇದೀಗ ಮತ್ಸ್ಯಕ್ಷಾಮ ಎದುರಾಗಿರುವುದು ಆತಂಕ ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರ ಮಾನವೀಯ ನೆಲೆಯಲ್ಲಿ ಮೀನುಗಾರರಿಗೆ ಸಹಾಯ ಮಾಡಬೇಕು. ಈಗಾಗಲೇ ಮೀನುಗಾರರು ಸಾಲದಿಂದ ತತ್ತರಿಸಿದ್ದಾರೆ. ಅವರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ನಡುವೆ ಸಮುದ್ರದಲ್ಲಿ ಕಾರ್ಗಿಲ್ ಮೀನು ಕಾಣಿಸುತ್ತಿದ್ದು ಇದರಿಂದಾಗಿ ಇತರ ಮೀನುಗಳು ಕೂಡ ದೂರ ಸರಿಯುತ್ತಿದೆ. ಈ ಕಾರ್ಗಿಲ್ ಮೀನು ಇತರ ಮೀನುಗಳನ್ನು ಬೇಟೆಯಾಡುವುದರಿಂದ ಇತರ ಪ್ರಮುಖ ವಾಣಿಜ್ಯ ಮೀನುಗಳು ದೂರ ಸರಿಯುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.