ಸೌಥಾಂಪ್ಟನ್: ಇಲ್ಲಿನ ದಿ ರೋಸ್ ಬೌಲ್​ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್​ಇಂಡೀಸ್​ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ವಿಶ್ವಕಪ್​ನ 15ನೇ ಪಂದ್ಯ ಮಳೆಗೆ ಆಹುತಿಯಾಗಿದೆ. ಪಂದ್ಯ ಮಳೆಯಿಂದ ರದ್ದಾಗಿದ್ದು ಎರಡೂ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಂಡಿವೆ.

ಟಾಸ್​ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ವೆಸ್ಟ್​ ಇಂಡೀಸ್​ ತಂಡ ಆರಂಭದಲ್ಲಿ ಉತ್ತಮ ಬೌಲಿಂಗ್​ ದಾಳಿ ನಡೆಸಿ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿತ್ತು. 7.3 ಓವರ್​ಗಳಲ್ಲಿ 29ಕ್ಕೆ 2 ವಿಕೆಟ್​ ಕಳೆದುಕೊಂಡು ದಕ್ಷಿಣ ಆಫ್ರಿಕಾ ತಂಡ ಒತ್ತಡಕ್ಕೆ ಸಿಲುಕಿತ್ತು. ಆದರೆ ಈ ವೇಳೆ ಮಳೆ ಆರಂಭವಾದ್ದರಿಂದ ಪಂದ್ಯವನ್ನು ಅಲ್ಪ ಸಮಯದವರೆಗೆ ಸ್ಥಗಿತ ಗೊಳಿಸಲಾಯಿತು. ಕೆಲವು ಗಂಟೆ ಕಾದರೂ ಮಳೆ ಕಡಿಮೆಯಾಗದ ಹಿನ್ನೆಲೆ ಪಂದ್ಯ ರದ್ದುಗೊಳಿಸಲಾಯಿತು.

ಇದರೊಂದಿಗೆ ವಿಶ್ವಕಪ್​​ ಅಂಕಪಟ್ಟಿಯಲ್ಲಿ ವೆಸ್ಟ್ ​ಇಂಡೀಸ್​ ತಂಡ ಮೂರು ಅಂಕ ಪಡೆದು ಐದನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ತಂಡ 9ನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ ಈ ವರೆಗೂ 4 ಪಂದ್ಯಗಳನ್ನಾಡಿದ್ದು ಮೊದಲ ಮೂರರಲ್ಲೂ ಸೋಲುಕಂಡಿದೆ. ಇಂದಿನ ಪಂದ್ಯ ಗೆಲ್ಲುವುದು ಈ ತಂಡಕ್ಕೆ ಅನಿವಾರ್ಯ ಕೂಡ ಆಗಿತ್ತು. ಪಂದ್ಯ ರದ್ದಾಗಿರುವುದರಿಂದ ತಂಡಕ್ಕೆ 1 ಅಂಕ ದೊರೆತಿದೆ. ಆದರೂ ತಂಡ ಸಂಕಷ್ಟಕ್ಕೆ ಸಿಲುಕಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.