ಚಿತ್ರ: ಸಾಂಕೇತಿಕವಾಗಿ ನಕಲಿ ರಕ್ತದಲ್ಲಿ ಬಿದ್ದು ಪ್ರತಿಭಟನೆ

ಪ್ಯಾರಿಸ್; ಪರಿಸರ ಸಂರಕ್ಷಣಾ ಕಾರ್ಯಕರ್ತರು ಲಕ್ಷಾಂತರ ಜೀವಿಗಳ ಸಾಮೂಹಿಕ ಅಳಿವನ್ನು ವಿರೋಧಿಸಿ ನಕಲಿ ರಕ್ತವನ್ನು ಎಫಿಲ್ ಟವರ್ ಬಳಿಯಿರುವ ಮೆಟ್ಟಿಲುಗಳ ಮೇಲೆ ಚೆಲ್ಲಿ ಪ್ರತಿಭಟಿಸಿದ ಘಟನೆ ಸಂಭವಿಸಿದೆ.

ಜೈವಿಕ ವೈವಿಧ್ಯತೆ ನಾಶವಾಗುತ್ತಿರುವುದನ್ನು ವಿರೋಧಿಸಿ ಮತ್ತು ಪರಿಸರ ಸಂರಕ್ಷಣೆಗೆ ಒತ್ತುಕೊಟ್ಟು ಸುಮಾರು ಮುನ್ನೂರು ಲೀಟರ್ ನಕಲಿ ರಕ್ತ ಚೆಲ್ಲಿ ಪರಿಸರವಾದಿಗಳು ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ. ಈ ಸಂಬಂಧ ಆರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಯುನೈಟೆಡ್ ನೇಷನ್ಸ್ ನ ಕಳೆದ ವಾರ ಬಿಡುಗಡೆ ಮಾಡಿದ ವರದಿಯಲ್ಲಿ ಸುಮಾರು 8 ಮಿಲಿಯನ್ ಜೀವಿಗಳು ಸಾಮೂಹಿಕ ಅಳಿವಿನ ಅಪಾಯದಲ್ಲಿದೆ ಎಂದು ತಿಳಿಸಿದೆ.

ಜೀವಿಗಳ ಸಾಮೂಹಿಕ ಅಳಿವನ್ನು ವಿರೋಧಿಸಿ ವಿಶ್ವದಾದ್ಯಂತ ಅಂದೋಲನಗಳು ಪ್ರತಿಧ್ವನಿಸುತ್ತಿದ್ದು, ಪರಿಸರ ರಕ್ಷಣೆಗಾಗಿ ಪಣತೊಟ್ಟಿದ್ದು ಸರಕಾರಗಳಿಗೆ ಪರಿಸರ ವಿಜ್ಞಾನದ ತುರ್ತು ಪರಿಸ್ಥಿತಿ ಘೋಷಣೆಗೆ ಒತ್ತಾಯಿಸುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.