– ಆರೆಮ್ ಸಿದ್ದೀಕ್ಉಡುಪಿ

ಕುರಾನ್ ಪ್ರತಿಪಾದಿಸುವ  ಇಸ್ಲಾಮ್  ಕೇವಲಸಂಕುಚಿತ ಕಲ್ಪನೆಯ ಮತ ಅಥವ ಧರ್ಮ(Religion) ಅಲ್ಲ,   ಅತಿ ವಿಶಾಲ ಮತ್ತುಒಂದು ಸಮಗ್ರ  ಜೀವನ ವ್ಯವಸ್ಥೆ;   ಅಖಂಡಭೂಮಂಡಲದ ಮತ್ತು ನಮ್ಮೆಲ್ಲರ ಒಡೆಯನುನಮಗಾಗಿಯೇ  ನೀಡಿರುವ  ಜೀವನಪದ್ಧತಿಯಾಗಿದೆ.  ಅದರ  ಶಿಕ್ಷಣಗಳನ್ನು ಅನುಷ್ಠಾನಿಸಿದರೆ,  ಭೂಮಿಯಲ್ಲಿ ಶಾಂತಿ,ಮಾನವೀಯತೆ,  ನ್ಯಾಯ, ಅಭಿವೃದ್ಧಿ  ಮತ್ತುಯಶಸ್ವಿ ಪಡೆಯಬಹುದೆಂದು ಕುರಾನ್ಹೇಳುತ್ತದೆ.

ಕುರಾನ್  ನೀಡುವ ಕಲ್ಪನೆಯಂತೆ  ನಮಾಝ್ ಮತ್ತು ಉಪವಾಸಗಳೂ ಕೇವಲ ಆರಾಧನೆ ಮಾತ್ರವಲ್ಲ, ಸತ್ಯ ವಿಶ್ವಾಸಿಗಳಿಗೆ ತನ್ನ ಒಡೆಯನಸಾನಿಧ್ಯ, ಆ ಮೂಲಕ ದೇವನಿಷ್ಠೆಗಳಿಸಲಿಕ್ಕಾಗಿಕಡ್ಡಾಯ  ಕಾರ್ಯಗಳಾಗಿವೆ.      ದೈನಂದಿನಎಲ್ಲಾ ವ್ಯವಹಾರಗಳೂಸತ್ಯಸಂದವಾಬೇಕೆನ್ನುವುದೇ ಇದರ ಉದ್ದೇಶ;   ಅದು   ಕುರಾನ್ ಮಾರ್ಗದರ್ಶನದಂತೆ ನಡೆಯಬೇಕು. ಅದಕ್ಕಾಗಿ ದೇವನನ್ನುಮರೆಯದಂತೆ ಆಗಾಗ ಅಂದರೆ 5 ಹೊತ್ತುನಮಾಝ್ ಕಡ್ಡಾಯಗೊಳಿಸಿದೆ.

ನಮಾಝಿನ ಹೊತ್ತಾದಾಗ ಮಸ್ಜಿದ್ ಗಳಿಂದಅಝಾನ್ ಕರೆಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳುತ್ತಿರುತ್ತೇವೆ. ಅದರಲ್ಲಿ ಪ್ರಥಮವಾಗಿ ಅಖಂಡ ಭೂಮಂಡಲದ ಒಡೆಯನೇ ಅತಿದೊಡ್ಡವನೆಂದು ನೆನಪಿಸಲಾಗುತ್ತದೆ. ಮತ್ತು ಆ ಏಕ ದೇವನಲ್ಲದೆ ಬೇರಾರೂ ಆರಾಧನೆಗೆಅರ್ಹರಿಲ್ಲ ಹಾಗೂ ಮುಹಮ್ಮದ್  ದೇವನ  ಪೈಗಂಬರರೆಂದು ಸಾಕ್ಷ್ಯವಹಿಸುತ್ತೇನೆಯೆನ್ನಲಾಗುತ್ತಿದೆ. ಆಮೇಲೆ ನಮಾಝ್ ಗಾಗಿ ಬನ್ನಿರಿ, ಯಶಸ್ವಿಗಾಗಿಬನ್ನಿರಿಯೆಂದು ಕರೆಯಲಾಗುತ್ತದೆ.

ಜಗದೊಡೆಯನ ಮುಂದೆ ಕೈಕಟ್ಟಿ ನಿಲ್ಲುವಾಗಪರಿಶುದ್ಧನಾಗಬೇಕೆಂದು ಶೃದ್ಧೆಯಿಂದ ಕೈ ಬಾಯಿ,ಮೂಗು, ಮುಖ, ಕಿವಿ,  ಪಾದಗಳಂತಹಅಂಗಗಳನ್ನು ಶುದ್ಧ  ನೀರಿನಿಂದ ವಿಶಿಷ್ಟರೀತಿಯಲ್ಲಿ ಶುದ್ಧಗೊಳಿಸುವುದಕ್ಕೆ ಉಝುಎನ್ನಲಾಗುತ್ತದೆ.  ಇದು ಪಾಲಕ, ಪ್ರಭುವನ್ನು ಸ್ಮರಿಸುವಾಗ,  ನೇರ ಮಾರ್ಗ  ತೋರಿಸೆಂದುಬೇಡುವಾಗ ಮತ್ತು ಕುರಾನ್ ನ್ನು ಶೃದ್ಧೆಯಿಂದಪಠಿಸಿ ಅರಿಯಲೂ ಸಾಧ್ಯವಾಗುವಂತೆ ಒಂದುಮಾನಸಿಕ ಸಿದ್ಧತೆಯೂ ಆಗಿದೆ. ನಮಾಝನ್ನುಪೂರ್ಣ ಏಕಾಗ್ರತೆಯಿಂದ ನಿರ್ವಹಿಸಲಿಕ್ಕೂಸಹಕಾರಿಯಾಗುವುದು.ವುಝುವಿನ ಇತರಅಪಾರವಾದ ಪ್ರಯೋಜನಗಳನ್ನು ವಿವರಿಸಲುಇಲ್ಲಿ ಅವಕಾಶವಿಲ್ಲ.

ನಮಾಝಿಗಾಗಿ  ಶಿಸ್ತುಬದ್ಧವಾಗಿ,  ಗಂಭೀರವಾಗಿನಿಲ್ಲುವಾಗ,  ಅಲ್ಲಾಹು ಅಕ್ಬರ್(ದೇವನೇಅತಿದೊಡ್ಡವನು) ಯೆಂದು ಕೈಗಳನ್ನು ಎರಡೂಕಿವಿಗಳವರೆಗೆ ಎತ್ತಿ ಕಟ್ಟಲಾಗುತ್ತದೆ. ನಮಾಝಿನಪ್ರತಿ ಪ್ರಾರ್ಥನೆಯ ನಂತರ ಬಾಗುವುದಕ್ಕೂಸಾಷ್ಟಾಂಗ ವೆರಗುವುದಕ್ಕೂ ಕುಳಿತುಕೊಳ್ಳುವಪ್ರತಿಯೊಂದು ಭಂಗಿಗಾಗಿ ನಾಯಕ   ಅಲ್ಲಾಹುಅಕ್ಬರ್ ಹೇಳುವುದರ ಮೂಲಕವೇ ಆಜ್ಞೆನೀಡುತ್ತಾರೆ.

ಕುರಾನ್ ಮತ್ತು ನಮಾಝ್ ನ ಸಂಬಂಧ ಅತಿಗಾಢದ್ದಾಗಿದೆ. ಎರಡೂ  ದಾಸನ ಸಂಬಂಧಸೃಷ್ಟಿಕರ್ತನೊಂದಿಗೆ ವೃದ್ದಿಸುವ ಕೆಲಸವನ್ನುಮಾಡುತ್ತವೆ. ಕುರಾನ್ ಓದದೆ ನಮಾಝ್ಸಿಂಧುವೇ ಇಲ್ಲ.

ಕೈ ಕಟ್ಟಿನಿಂತು ಪ್ರಥಮವಾಗಿ ನಮಾಝಿನಲ್ಲಿಕುರಾನಿನ ಪ್ರಥಮ ಸೂಕ್ತವನ್ನೇ ಪಠಿಸಲಾಗುತ್ತದೆ,ಅದು; ಪರಮ ದಯಾಮಯನೂಕರುಣಾಳುವೂ ಆದ ಅಲ್ಲಾಹನ ನಾಮದಿಂದ.  ಸರ್ವಸ್ತುತಿ ಕೃತಜ್ಞತೆಗಳೂ ಸಕಲ ವಿಶ್ವದಒಡೆಯನಿಗೇ. ನಿರ್ಣಾಯಕ ದಿನದ ಅಧಿಪತಿ,ನಿನಗೆ ಮಾತ್ರ ಆರಾಧಿಸುತ್ತೇವೆ,,ನಿನ್ನೋರ್ವನಿಂದಲೇ  ಸಹಾಯ ಬೇಡುತ್ತೇವೆ.ನೇರ ಮಾರ್ಗತೋರುಯೆಂದು ಒಡೆಯನಮುಂದೆ ನಿಂತು ಬೇಡಿದಾಗ ಪೂರ್ಣ ಕುರಾನನ್ನುಸೃಷ್ಟಿಕರ್ತನು ನೀಡುವುದಾಗಿದೆಯೆನುತ್ತಾರೆ ಎಲ್ಲಾಕುರಾನ್ ವ್ಯಾಖ್ಯಾನಕಾರರು.  ನಮಾಝ್ ನಲ್ಲಿನಿಂತಲ್ಲಿಂದಲೇ ಆ ಒಡೆಯ ಅಧಿಪತಿಗೆ   ಹಾಗೂಆತ ನೀಡುವ ಕುರಾನ್ ನ ಪೂರ್ಣ ಶಿಕ್ಷಣಗಳಿಗೇಸಾಷ್ಟಾಂಗವೆರಗುವುದಾಗಿದೆ ಸಜ್ದ.

ಸೃಷ್ಟಿಕರ್ತನೊಂದಿಗಿನ ನೇರ ಸಂಪರ್ಕ,ಮನುಷ್ಯನ ಮಟ್ಟಿಗೆ  ಮಹಾ ಭಾಗ್ಯವೇ ಸರಿ.ತನ್ನನ್ನು ಸಮರ್ಪಿಸುವುದು ಮತ್ತು ಯಾವುದೇಆಜ್ಞೆಯ ಪಾಲನೆಗೆ ಸಿದ್ಧವೆಂದುಅಭಿವ್ಯಕ್ತಿಸುವುದು. ಆ ಏಕ ಪರಮಾತ್ಮನೇನಮಗೆ ಅಸ್ತಿತ್ವ  ನೀಡಿರುತ್ತಾನೆ ಮತ್ತು ನಮ್ಮಜೀವನದ ಯಶಸ್ವಿ ಆತನಿಂದಲೇ ಸಾಧ್ಯವೆಂಬಸಂದೇಶವೂ ಇದರಲ್ಲಿದೆ.

ಕುರಾನ್ ನೀಡುವ ಮಾನವೀಯ ಜೀವನಪದ್ದತಿಯನ್ನು ಸಮಾಜದಲ್ಲಿ ಸ್ಥಾಪಿಸಲುಶ್ರಮಿಸುವಾಗ ಬರುವ ಸಂಕಷ್ಟಗಳನ್ನುಎದುರಿಸಲು ಐಚ್ಛಿಕ ನಮಾಝ್ ಗಳು ಸಹಾಯಮಾಡುವುದೆಂದು ಕುರಾನ್ ಹೇಳುತ್ತದೆ.  ನಾವುನಮಾಝ್ ಉಪವಾಸ ಎಷ್ಟುಆಚರಿಸುತ್ತೇವೆಯೆಂಬುವುದು ಸಾಧನೆಯಲ್ಲ; ಅವುಗಳಿಂದ  ಜೀವನದಲ್ಲಿ   ಆಗುವಪರಿವರ್ತನೆಯಿಂದ.  ವ್ಯಕ್ತಿತ್ವದ ನಿರ್ಮಾಣದಿಂದಸಮಾಜ ಜೀವನದಲ್ಲಿ ಎಷ್ಟು ಸತ್ಯಸಂಧ ಮತ್ತುಸಮಾಜ  ಮುಖೀಯಾಗಿದ್ದಾನೆಯೆಂಬುದು; ಇದುವೇ ಆರಾಧನೆ/ ಉಪಾಸನೆಯಾಗಿದೆ.

ಯಾವುದೇ ಕಾರ್ಯವು ಪ್ರಭಾವಪೂರ್ಣವೂ,ಹೆಚ್ಚು ಫಲಪ್ರದವೂ ಆಗಬೇಕಾದರೆ ಅದುಸಾಮೂಹಿಕವಾಗಿ ಆಗಬೇಕೆಂದು ಇಸ್ಲಾಮ್ಕಲಿಸುತ್ತದೆ. ಸಮಾಜದಲ್ಲಿ ಇರುವ ಇತರರಭಾಗತ್ವದಿಂದ ಸಮಗ್ರತೆ ಸಾಧ್ಯ  ಸಾಮೂಹಿಕಕಾರ್ಯಗಳಿಗೆ ಇಸ್ಲಾಮ್ ಅತಿ ಮಹತ್ವಕೊಡುವುದನ್ನು ಗಮನಿಸಬಹುದು. ಎರಡುವ್ಯಕ್ತಿಗಳೂ   ಯಾವುದೇ ಕೆಲಸ   ಕೈಗೊಳ್ಳುವುದಾದರೂ ಒಬ್ಬನನ್ನುನಾಯಕನನ್ನಾಗಿ ಮಾಡಿರೆಂದು ಆಜ್ಞಾಪಿಸುತ್ತದೆ.ಯುದ್ಧ ಭೂಮಿಯಲ್ಲೂ ಸಾಮೂಹಿಕ ನಮಾಝ ಮತ್ತು ಅದು ಹೇಗಿರಬೇಕೆಂದು ಕುರಾನ ನಲ್ಲೇ ತಿಳಿಸಲಾಗಿದೆ. ಯಾವುದೇ ಉದ್ದೇಶ ಸಾಧನೆಗೆ,ಒಗ್ಗಟ್ಟು ಮತ್ತು ನಾಯಕನ ಅನುಸರಣೆ ದೊಡ್ಡಶಕ್ತಿಯೆಂದು ಇಲ್ಲೇ ಕಲಿಸಲಾಗುತ್ತದೆ.ನಮಾಝಿನ ಮುಖ್ಯ ಉದ್ದೇಶವೇ ದೇವನಿಷ್ಠೆವೃದ್ಧಿಸಿ  ಸುಭಿಕ್ಷ ಸಮಾಜ ನಿರ್ಮಾಣ ಆಗಿದೆ.

ಮಸ್ಜಿದ್ ನ  ಕಲ್ಪನೆಯೂ  ಮೂಲವಾಗಿಸಾಮೂಹಿಕ ನಮಾಝ್  ನದ್ದೇ ಆಗಿರುತ್ತದೆ.’ಮಸ್ಜಿದ್’ ಶಬ್ದ ಅರ್ಥವೂ ಸಜ್ದ ಮಾಡುವ ಸ್ಥಳ ಅರ್ಥಾತ್   ಸಾಷ್ಟಾಂಗವೆರಗುವಸ್ಥಳವೆಂದಾಗಿದೆ. ಇದರ ಹೊರತಾಗಿ ಮಸ್ಜಿದ್ಸರ್ವರೂಪವಾಗಿ ಸಮುದಾಯದ ಎಲ್ಲಾಸಾಮೂಹಿಕ ಚಟುವಟಿಕೆಗಳ ಕೇಂದ್ರವೂಆಗಿರುತ್ತದೆ.

 5 ಹೊತ್ತಿನ ಸಾಮೂಹಿಕ ನಮಾಝ್ ಅಲ್ಲದೆಶುಕ್ರವಾರದ ವಿಶೇಷ  ನಮಾಝ್ ಗಾಗಿ ಅಕ್ಕಪಕ್ಕದ ಪ್ರದೇಶದ ಸರ್ವ ಮುಸ್ಲಿಮರುಒಟ್ಟುಗೂಡುತ್ತಾರೆ. ಮಸ್ಜಿದ್ ನ  ವಿನಹ ಶುಕ್ರವಾರದ  ನಮಾಝ್ ನ ಕಲ್ಪನೆಯೇ ಇಲ್ಲ. ಇಮಾಮ( ನಾಯಕ)ರು ವೇದಿಕೆ ಮೇಲಿಂದ ಕುರಾನ್ ನ ಶಿಕ್ಷಣವನ್ನು ಜನರಿಗೆ ತಿಳಿಸಿ,ಸಮಾಜದ  ನಿರ್ಮಾಣ ಕಾರ್ಯಕ್ಕಾಗಿಪ್ರೇರೇಪಿಸುತ್ತಾರೆ.  ಕುರಾನ್ ಪ್ರತಿಪಾದಿಸುವ ಮಾನವೀಯತೆ, ಶಾಂತಿ ಮತ್ತು ನ್ಯಾಯದವ್ಯವಸ್ಥೆಯ  ಶಿಕ್ಷಣಗಳಿಂದ  ಸಮಾಜದಸುಧಾರಣೆ ಮತ್ತು ರಾಷ್ಟ್ರದ ನಿರ್ಮಾಣಕ್ಕಾಗಿವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂಶ್ರಮಿಸುವುದು ಕುರಾನ್ ಪಡೆದುಕೊಂಡವರಬಾಧ್ಯತೆಯಾಗಿದೆಯೆಂಬುದರ ಕಡೆಗೆ ಗಮನಕೊಡಿಸಲಾಗುತ್ತದೆ.

ಮಸೀದಿಯ ಇನ್ನೊಂದು ವೈಷಿಷ್ಟ್ಯಯೆಂದರೆತೀರಾ ಸರಳ, ವಿಶಾಲ,  ಪ್ರಶಾಂತ ಮತ್ತುಪರಿಶುದ್ಧ  ಗಂಬೀರ ಹಾಗೂ ಘನತೆಯವಾತಾವರಣ ಅದರದಾಗಿದೆ. ಏಕ ನಾಯಕನಹಿಂದೆ ಎಲ್ಲಾ ವಿಧದ ಜನರೂ ಪರಸ್ಪರಭುಜತಾಗಿಸಿ  ಪಂಕ್ತಿಯಲ್ಲಿ  ನಿಂತು  ಯಾವುದೇಭೇದವಿಲ್ಲದೇ ನಾಯಕನನ್ನು ಅನುಸರಿಸಿ  ನಮಾಝ್ ಮಾಡುವುದರ ಮೂಲಕಸಮಾನತೆಯನ್ನು  ಕಲಿಸುತ್ತದೆ.

 ಒಟ್ಟಿನಲ್ಲಿ ಮಸ್ಜಿದ್ ಮುಸ್ಲಿಮರಿಗೆ, ಶೈಕ್ಷಣಿಕ,ಸಾಮಾಜಿಕ ಮತ್ತು ಸಾಮೂಹಿಕವಾಗಿ ಎಲ್ಲಾವಿಷಯಗಳಿಗೆ ಸಂಬಂಧ ಪಟ್ಟ ಕೇಂದ್ರವಾಗಿದೆ.   ಮಸ್ಜಿದ್  ಅತಿ ಪ್ರಧಾನವಾದ ಕೇಂದ್ರವಷ್ಟೇ ಅಲ್ಲಇಸ್ಲಾಮ್ ನ ಲಾಂಛನವೂ ಆಗಿದೆ

ನಿನ್ನ ಆರಾಧನೆಯನ್ನೇ ಮಾಡುತೇವೆ,ನಿನ್ನೋರ್ವನಿಂದಲೇ ಸಹಾಯ ಯಾಚಿಸುತ್ತೇವೆ.ಸನ್ಮಾರ್ಗವನ್ನು ತೋರಿಸು – ಕುರಾನ್.

ಪ್ರಜಾಪ್ರಭುತ್ವವನ್ನು ಬೋಧಿಸಿ ಆಚರಣೆಗೆ ತಂದಪ್ರಪ್ರಥಮ ಧರ್ಮ ಇಸ್ಲಾಮ್.  ಮಸೀದಿಯಿಂದ ಪ್ರಾರ್ಥನೆಗೆ ಕರೆದಾಗ ಭಕ್ತರೆಲ್ಲರೂ ಸಾಲು ಸಾಲಾಗಿ ರೈತ-ರಾಜನೆಂಬ ಭೇದವಿಲ್ಲದೆಭುಜಕ್ಕೆ  ಭುಜ ತಾಗಿಸಿ ನಿಂತು, ದೇವನೊಬ್ಬನೇದೊಡ್ಡವನು ಎನ್ನುವಾಗ ಇಸ್ಲಾಮಿನಪ್ರಜಾಪ್ರಭುತ್ವ ದಿನಕ್ಕೆ 5 ಬಾರಿ ಗೋಚರಿಸುತ್ತದೆ.ಮನುಷ್ಯನು ಜನ್ಮತಃ ಸಹೋದರನೆಂದುಪರಿಗಣಿಸುವ ಇಸ್ಲಾಮಿನ ಈ ಅವಿಭಾಜತೆಯಐಕ್ಯತೆಯು  ಬಾರಿಬಾರಿಗೂ ನನ್ನನ್ನು ದಿಗ್ಭ್ರಮೆ ಗೊಳಿಸಿದೆ.            –ಸರೋಜಿನಿ ನಾಯಿಡು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.