ಬೆಂಗಳೂರು: ಈ ವರ್ಷದ ಜೂನ್ ತಿಂಗಳು 100 ವರ್ಷಗಳ ಇತಿಹಾಸದಲ್ಲೇ ಅತಿ ಕಡಿಮೆ ಮಳೆಯಾದ ತಿಂಗಳಾಗಿ ದಾಖಲಾಗಿದೆ.

ದೇಶಾದ್ಯಂತ ಜೂನ್‌ನಲ್ಲಿ ಬಿದ್ದಿರುವ ಮಳೆ ಸಾಮಾನ್ಯಕ್ಕಿಂತ ಶೇ 35ರಷ್ಟು ಕಡಿಮೆಯಿದೆ. ಈ ತಿಂಗಳಲ್ಲಿ ಇನ್ನೆರಡೇ ದಿನಗಳು ಉಳಿದಿದ್ದು ಈ ಕೊರತೆ ತುಂಬುವಂತೆ ಮಳೆಯಾಗುವ ಸಾಧ್ಯತೆ ಕಾಣಿಸುತ್ತಿಲ್ಲ.

ದೇಶಾದ್ಯಂತ ಜೂನ್‌ ತಿಂಗಳಲ್ಲಿ ಇದುವರೆಗೆ 87.9 ಮಿಲಿಮೀಟರ್ ಮಳೆಯಾಗಿದೆ. ಸಾಮಾನ್ಯ ಮಳೆ ಪ್ರಮಾಣವೆಂದರೆ 151.1 ಮಿಲಿಮೀಟರ್ ಮಳೆ ಬೀಳಬೇಕಿತ್ತು. ಇನ್ನು ಉಳಿದಿರುವ ಎರಡು ದಿನಗಳಲ್ಲಿ ಬೀಳುವ ಮಳೆಯನ್ನೂ ಗಣನೆಗೆ ತೆಗೆದುಕೊಂಡರೆ ಅಂದಾಜು 106 ರಿಂದ 112 ಎಂಎಂ ಮಳೆ ನಿರೀಕ್ಷಿಸಬಹುದು.

1920ರ ಬಳಿಕ ಜೂನ್ ತಿಂಗಳಲ್ಲಿ ಅತಿ ಕಡಿಮೆ ಮಳೆಯಾದ ವರ್ಷಗಳೆಂದರೆ 2009 (85.7 ಎಂಎಂ), 2014 (95.4 ಎಂಎಂ), 1926 (98.7 ಎಂಎಂ) ಮತ್ತು 1923 (102 ಎಂಎಂ).
2009 ಮತ್ತು 2014ರಲ್ಲಿ ಎಲ್‌ನಿನೋ ಕಾರಣಕ್ಕೆ ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲವಾಗಿತ್ತು. ಈ ವರ್ಷದಂತೆ ಆಗಲೂ ಪೂರ್ವ ಮತ್ತು ಮಧ್ಯ ಪೆಸಿಫಿಕ್ ಸಮುದ್ರದಲ್ಲಿ ತಾಪಮಾನ ಹೆಚ್ಚಿದ್ದರಿಂದ ಎಲ್‌ನಿನೋ ಉಂಟಾಗಿತ್ತು. ಇದರಿಂದಾಗಿ ಭಾರತದ ಮುಂಗಾರು ಮಾರುತಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜುಲೈ ತಿಂಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.