ವರದಿ : ಶಫೀ ಉಚ್ಚಿಲ

ಕಾಪು: ಅಸಹಾಯಕ ಬಡ ಮಹಿಳೆಯೊರ್ವರ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ‌ “ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಸನ್” ಮಾನವೀಯತೆ ಮೆರೆದಿದೆ.

ಮಣಿಪಾಲ ಸಮೀಪದ ಮಂಚಿ ಎಂಬಲ್ಲಿ ಪುಟ್ಟ ಮನೆಯೊಂದರಲ್ಲಿ ಸುಮಾರು (60) ವರ್ಷ ಪ್ರಯಾದ ಖತೀಜ ಎಂಬವರು ನಾಲ್ಕು ಮಕ್ಕಳೊಂದಿಗೆ ಕಷ್ಟ ಜೀವನ ಸಾಗಿಸುತ್ತಿದ್ದರು. ಗಂಡನನ್ನು ಕಳೆದುಕೊಂಡಿರುವ ಖತೀಜ ಹೊಟ್ಟೆಪಾಡಿಗಾಗಿ ಮನೆ ಕೆಲಸ ಮಾಡುವೆನೆಂದರೆ,ದೇವರು ಕೊಟ್ಟ ನಾಲ್ಕು ಗಂಡು ಮಕ್ಕಳಲ್ಲಿ ಮೂವರು ಅಂಗವಿಕಲರಾಗಿದ್ದು ಇವರನ್ನು ಮನೆಯಲ್ಲಿ ಬಿಟ್ಟು ಎಲ್ಲಿಯೂ ತೆರಳುವಂತಿರಲಿಲ್ಲ.ಒಬ್ಬ ಮಗ ಶಾಲೆಗೆ ಹೋಗುತ್ತಿದ್ದರೆ,ಕುಟುಂಬಕ್ಕೆ ಅಂಟಿಕೊಂಡಿರುವ ಬಡತನಕ್ಕೆ ಆತನ ವಿದ್ಯಾಭ್ಯಾಸ ಹೊರೆಯಾಗಿದೆ.

ಮೂವರು ಅಂಗವೈಕಲ್ಯ ಹೊಂದಿರುವ ಮಕ್ಕಳಲ್ಲಿ ಓರ್ವ ತೀರಾ ಸಮಸ್ಯೆಗೊಳಗಾಗಿದ್ದು,ಆತನನ್ನು ನೋಡಿಕೊಳ್ಳಲಾಗದೆ ಆಶ್ರಮಕ್ಕೆ ಸೇರಿಸಲಾಗಿದೆ.
ಅಷ್ಟಕ್ಕೂ ಮುಗಿದ ಮಹಿಳೆಯ ಕಣ್ಣೀರಿನ ಕಥೆ ,ಮಹಿಳೆ ರಸ್ತೆ ಅಪಘಾತಕ್ಕೀಡಾಗಿ ಗಾಯಗೊಂಡು ಚಾಪೆ ಹಿಡಿಯುವಂತಾಯಿತು.ಅತ್ತ ಅಸಹಾಯಕ ಮಕ್ಕಳು ಇತ್ತ ಅನಾರೋಗ್ಯ ಪೀಡಿತ ತಾಯಿ .ಮುಂದೆ ಸಾಗದ ಖತಿಜಾಳ ಕುಟುಂಬದ ಬದುಕು ನಿಂತ ನಿರಾಗಿತ್ತು.ಈ ಸಂದರ್ಭದಲ್ಲಿ ದೃಷ್ಯ ವಾಹಿನಿಯೊಂದು ಅತ್ತ ಕಣ್ಣಾಹಿಸಿ ವರದಿ ಮಾಡಿತ್ತು. ಇದನ್ನು ಗಮನಿಸಿದ ,ಉಚ್ಚಿಲ ಕಟಪಾಡಿ ಕಾಪು ಮೂಳೂರು ಮಣಿಪುರ ಪರಿಸರದ ಯುವಕರನ್ನೊಳಗೊಂಡ ಕುವೈತ್ ಮುಸ್ಲಿಂ ಅಸೋಸಿಯೇಷನ್ ಸಂಸ್ಥೆಯು ಎಚ್ಚೆತ್ತು ಸಂಸ್ಥೆಯ ಗೌರವಾಧ್ಯಕ್ಷರಾದ ಸಯ್ಯದ್ ಹಸನ್,
ಸದಸ್ಯರಾದ ಕರೀಂ ಹಸನ್ ಬಿರಾಲಿ ಪೊಲ್ಯ ಮತ್ತು ಜಮಾಲ್ ಮಣಿಪುರ ಇವರ ನೇತ್ರತ್ವದಲ್ಲಿ

ಖತೀಜರವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರ ಕೈಯ ಶಸ್ತ್ರಚಿಕಿತ್ಸೆ ಮಾಡಿಸಿ ತಿಂಗಳ ದಿನಬಳಕೆಯ ಆಹಾರ ಸಾಮಾಗ್ರಿಗಳನ್ನು ನೀಡಿದ್ದಲ್ಲದೆ,ಇನ್ನಿತರ ಖರ್ಚಿಗಾಗಿ ಅರ್ಥಿಕ ನೆರವು ನೀಡಿದೆ.ಈ ಸಂದರ್ಭದಲ್ಲಿ ಮಾತನಾಡಿದ ಕರೀಂ ಹಸನ್ ಪೊಲ್ಯ, ನಮ್ಮ ಸಂಸ್ಥೆಯ ಹಲವಾರು ಯುವಕರು ವಿದೇಶದಲ್ಲಿ ದುಡಿಯುತ್ತಿದ್ದಾರೆ.ನಾವು ದುಡಿದ ಒಂದಂಶವನ್ನು ಬಡವರ ನೆರವಿಗಾಗಿ ಖರ್ಚು ಮಾಡುತ್ತೇವೆ.ಖತೀಜರವರ ಕುಟುಂಬಕ್ಕೆ ಈಗಾಗಲೇ ನಮ್ಮಿದಾದ ಸಹಾಯವನ್ನು ಮಾಡಿದ್ದೇವೆ ಅಗತ್ಯವಿದ್ದಲ್ಲಿ ಇನ್ನಷ್ಟು ನೆರವು ನೀಡುವುದಾಗಿ ಹೇಳಿದರು.

1 COMMENT

  1. ما شاء الله
    ಅಲ್ಲಾಹನು ಸ್ವೀಕರಿಸಲಿ,
    ಅಕಿರಾತ್‌ನಲ್ಲಿ ಅಲ್ಲಾಹನು ಪ್ರತಿಫಲ ನೀಡಲಿ..

    ಅಲ್ಲಾಹು ಅವರಿಗೆ ಆಫಿಯತ್ ಆರೋಗ್ಯ ನೀಡಿ ಆನುಗ್ರಹಿಸಲಿ…

    ಆಮೀನ್…

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.