ಉಡುಪಿ – ಮಂಗಳೂರು ಜಿಲ್ಲೆಯಲ್ಲಿ ಬನ್ಸ್ ಒಂದು ಜನಪ್ರಿಯವಾದ ಬೆಳಗ್ಗಿನ ಉಪಹಾರ ಅಥವಾ ಚಹಾ ಸಮಯದ ತಿಂಡಿಯಾಗಿದೆ.ಇದನ್ನು ಸಾಂಬಾರ್ ಜೊತೆಗೆ ತಿನ್ನುತ್ತಾರೆ.ಹಾಗೆ ತಿನ್ನಲು ಸಹ ರುಚಿಕರವಾಗಿರುತ್ತದೆ.ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಇದನ್ನು ತುಂಬಾ ಇಷ್ಟ ಪಡುತ್ತಾರೆ.

ಬನ್ಸ್ ತಯಾರಿಸುವ ವಿಧಾನ:

ಬೇಕಾಗುವ ಪದಾರ್ಥಗಳು :

2 ಕಪ್ ಮೈದಾ
1 ಚೆನ್ನಾಗಿ ಹಣ್ಣಾದ ಬಾಳೆಹಣ್ಣು
5 ಟೀಸ್ಪೂನ್ ಸಕ್ಕರೆ
1/4 ಟೀಸ್ಪೂನ್ ಅಡುಗೆ ಸೋಡಾ
5 ಟೀಸ್ಪೂನ್ ಮೊಸರು
1 ಟೀಸ್ಪೂನ್ ಜೀರಿಗೆ
ಉಪ್ಪು ರುಚಿಗೆ ತಕ್ಕಷ್ಟು.

ಮಂಗಳೂರ್ ಬನ್ಸ್ ಮಾಡುವ ವಿಧಾನ:
ಬಾಳೆಹಣ್ಣು ಸಿಪ್ಪೆ ಸುಲಿದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಹಿಚುಕಿ . ನಂತರ ಅದೇ ಬಟ್ಟಲಿಗೆ ಮೊಸರು, ಸಕ್ಕರೆ ಅಡುಗೆ ಸೋಡಾ ಉಪ್ಪು ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.

ಈಗ ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮುಚ್ಚಳ ಮುಚ್ಚಿ ಒಂದು ರಾತ್ರಿ ಹಿಟ್ಟು ಹುದುಗಲು ಬಿಡಿ.ಮರುದಿನ ಹಿಟ್ಟು ತುಂಬಾ ಮೃದು ಎನಿಸಿದರೆ 1 ಅಥವಾ 2 ಟೀಸ್ಪೂನ್ ಮೈದಾ ಹಿಟ್ಟು ಸೇರಿಸಿ ಪುನಃ ಚೆನ್ನಾಗಿ ಕಲಸಿ. ಒಂದು ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಸಣ್ಣ ಪೂರಿ ಗಾತ್ರಕ್ಕೆ ಲಟ್ಟಿಸಿ.

ಈಗ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಲಟ್ಟಿಸಿಕೊಂಡ ಪೂರಿಯನ್ನು ಒಂದೊಂದಾಗಿ ಚಿನ್ನದ ಹೊಂಬಣ್ಣ ಬರುವವರೆಗೆ ಹುರಿಯಿರಿ.ಈಗ ಬಿಸಿ ಬಿಸಿ ಬೂನ್ಸ್ ತಿನ್ನಲು ರೆಡಿ ಬಿಸಿ ಬಿಸಿ ಯಾಗಿರುವಾಗಲೇ ಬಡಿಸಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.