ನವದೆಹಲಿ: ಭಯೋತ್ಪಾದನೆಗೆ ಪ್ರಚೋದಿಸಿದ ಆರೋಪ ಹೊತ್ತಿರುವ ಝಾಕಿರ್ ನಾಯ್ಕ್ ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ವಾಸಿಸುತ್ತಿದ್ದು, ಕಳೆದ ಬಾರಿ ಅವರಿಗೆ ಮಲೇಷ್ಯಾದ ಶಾಶ್ವತ ಪೌರತ್ವ ನೀಡಲಾಗಿತ್ತು. ಮೋದಿ ಮಲೇಷ್ಯಾದ ಪ್ರಧಾನಿ ಬಳಿ ಝಾಕಿರ್ ನಾಯ್ಕ್ ರನ್ನು ಹಸ್ತಾಂತರಿಸಲು ಕೋರಿ ಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೀಗ ಸ್ಪಷ್ಟನೆ ನೀಡಿರುವ ಮಲೇಷ್ಯಾ ಪ್ರಧಾನಿ ಮಹಾತೀರ್, ನರೇಂದ್ರ ಮೋದಿ ಝಾಕೀರ್ ನಾಯ್ಕ್ ಅವರನ್ನು ಹಸ್ತಾಂತರಿಸಲು ಹೇಳಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

“ನಾನು ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದೆ ಆದರೆ ಅವರು ಝಾಕೀರ್ ನಾಯ್ಕ್ ರನ್ನು ವಾಪಸು ಕಳುಹಿಸಿಕೊಡಿ ಎಂದು ಹೇಳಿಕೊಂಡಿಲ್ಲವೆಂದು” ಹೇಳಿದ್ದಾರೆ.

ಝಾಕೀರ್ ನಾಯ್ಕ್ ರಿಗೆ ಮಲೇಷ್ಯಾದಲ್ಲೂ ಕಾರ್ಯಕ್ರಮ ನಡೆಸಲು ನಿರ್ಬಂಧ ಇದ್ದು, ಅವರು ಒಮ್ಮೆ ಮಾತನಾಡುತ್ತ ಮಲೇಷ್ಯಾದಲ್ಲಿರುವ ಚೀನಾದ ಜನರನ್ನು ವಾಪಸು ಕಳುಹಿಸುವ ತಾರತಮ್ಯದ ಮಾತುಗಳನ್ನು ಆಡಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.