4000 ಕೋಟಿ ಘೋಷಿತ ಆಸ್ತಿ :ಮಹೇಂದ್ರ ಪ್ರಸಾದ್ ದೇಶದ ಅತ್ಯಂತ ಶ್ರೀಮಂತ ರಾಜ್ಯ ಸಭಾ ಅಭ್ಯರ್ಥಿ!

ಪಟ್ನಾ: ಈ ಬಾರಿ ನಡೆಯಲಿರುವ ರಾಜ್ಯ ಸಭೆಯ ಚುನಾವಣೆಗೆ ಸ್ಪರ್ಧಿಸಲಿರುವ ಮಹೇಂದ್ರ ಪ್ರಸಾದ್ ಇದುವರೆಗೆ ಹೆಸರು ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿದಾವಿತ್ ನಲ್ಲಿ ಚಿರಾಸ್ತಿ 4010 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಅದರೊಂದಿಗೆ ಚರಾಸ್ತಿ ಸುಮಾರು 29.1 ಕೋಟಿ ಎಂದು ಅಫಿದಾವಿತ್ ನಲ್ಲಿ ತಿಳಿಸಿದ್ದಾರೆ. ಸುಮಾರು 40 ಲಕ್ಷಗಳ ಚಿನ್ನಾಭರಣವನ್ನು ಹೊಂದಿದ್ದಾರೆ.

2016-17 ರಲ್ಲಿ 300 ಕೋಟಿ ಆದಾಯ ಪಡೆದಿದ್ದು ಅದರ ಆದಾಯ ತೆರಿಗೆ ಕಟ್ಟಿರುವ ದಾಖಲೆ ಪತ್ರಗಳನ್ನು ಕೂಡ ನೀಡಿದ್ದಾರೆ.