ನವದೆಹಲಿ; ಗುಂಪು ಹತ್ಯೆ ಹೊರಗಿನಿಂದ ಭಾರತಕ್ಕೆ ಆಗಮಿಸಿದ್ದು, ಅದು ಪಾಶ್ಚಾತ್ಯರ ಕೊಡುಗೆಯೆಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.

ನಾವು ಸಂವಿಧಾನ ಬಾಹಿರವಾಗಿ ವರ್ತಿಸಬಾರದು. ಎಷ್ಟೇ ಭಿನ್ನಾಭಿಪ್ರಾಯ ಅಥವಾ ಉದ್ರೇಕಿತ ವಾತವರಣವಿದ್ದರೂ ಸಂವಿಧಾನ ಬದ್ಧರಾಗಿರಬೇಕೆಂದು ಮೋಹನ್ ಭಾಗವತ್ ಕರೆ ನೀಡಿದ್ದಾರೆ.

ಸಮುದಾಯದ ವ್ಯಕ್ತಿಗಳು ಇತರ ಸಮುದಾಯದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುವ ಬಗ್ಗೆ ವರದಿಯಾಗುತ್ತದೆ. ಆದರೆ ಅವರು ಕೂಡ ನಮ್ಮವರ ಮೇಲೆ ಹಲ್ಲೆ ನಡೆಸುತ್ತಾರೆ. ‌ಆದರೆ ತಿರುಚಿ ವರದಿ ಮಾಡಲಾಗುತ್ತದೆಂದು ಹೇಳಿದ್ದಾರೆ. ಸಮಾಜದಲ್ಲಿ ನಡೆಯುವ ಕೆಲವೊಂದು ಅಹಿತಕರ ಘಟನೆಯನ್ನು ಗುಂಪು ಹತ್ಯೆಯೊಂದಿಗೆ ಹೋಲಿಸಲಾಗುತ್ತದೆಂದು ಹೇಳಿದರು. ‌

ಭಾರತದಲ್ಲಿ ಇತ್ತೀಚಿಗೆ ಬಲಪಂಥೀಯ ವಿಚಾರಧಾರೆಯ ವ್ಯಕ್ತಿಗಳು ಅರಾಜಕತೆ ಸೃಷ್ಟಿಸಿ ಅಮಾಯಕರನ್ನು ಥಳಿಸುವ, ಕೆಲವರನ್ನು ಹತ್ಯೆ ಮಾಡಿದ ಘಟನೆ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.