ಬೆಂಗಳೂರು: ಪರಿಸರ ಬಿಕ್ಕಟ್ಟನ್ನು ನಿವಾರಿಸುವುದು ಮತ್ತು ಹವಾಮಾನ ಬದಲಾವಣೆಯ ಪ್ರಭಾವವನ್ನು ಇಸ್ಲಾಮಿನ ದೃಷ್ಟಿಕೋನದಿಂದ ವಿಶ್ವಾಸಿಗರಾಗಿ ಮತ್ತು ಮೇಲ್ವಿಚಾರಕರಾಗಿ ಪರಿಸರದ ರಕ್ಷಣೆಯಲ್ಲಿ ಮನುಷ್ಯರ ಪಾತ್ರವನ್ನು ವ್ಯಾಖ್ಯಾನಿಸುವುದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಬೆಂಗಳೂರು ಘಟಕ ವೈಟ್ ಮೆನರ್ ನಲ್ಲಿ ಹಮ್ಮಿಕೊಂಡ ಪರಿಸರ ಕಾಳಜಿಯುಕ್ತ ವಿಶೇಷ ಈದ್ ಮಿಲನ್ ಕಾರ್ಯಕ್ರಮದ ಸಂದೇಶವಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿ  ಪರಿಸರ ಕಾರ್ಯಕರ್ತರಾದ ಮತ್ತು ಇಎಸ್ಜಿಯಲ್ಲಿ ಸರಕಾರೇತರ ಪರಿಸರ ಸಂರಕ್ಷಣಾ ಸಂಸ್ಥೆಯ ಸಂಯೋಜಕರಾದ ಲಿಯೋ ಸಲ್ಡಾನ್ಹಾ ಮಾತನಾಡಿ,
ಸಂಪನ್ಮೂಲಗಳ ಅತೀಯಾದ ಬಳಕೆಯ ಕಾರಣದಿಂದಾಗಿ ಪರಿಸರದ ಮೇಲೆ ಅತಿಯಾದ ಶೋಷಣೆ ನಡೆಯುತ್ತಿದೆ. ಆ ಶೋಷಣೆಯಿಂದ ನಮ್ಮ ಭೂಮಿಯನ್ನು ರಕ್ಷಿಸುವ ಬಗ್ಗೆ ಚಿಂತಿಸಬೇಕೆಂದರು.

ನಮ್ಮನ್ನು ಆವರಿಸಿರುವ ಪ್ರಸ್ತುತ ಪರಿಸರ ಬಿಕ್ಕಟ್ಟಿನ ಬಗ್ಗೆ ಬೆಳಕು ಚೆಲ್ಲಿದರು. ಹವಾಮಾನ ಬದಲಾವಣೆಯು ನಮಗೆ ತಿಳಿದಿರುವಂತೆ ಮಾನವೀಯತೆ ಮತ್ತು ಜೀವನದ ಅಂತ್ಯವನ್ನು ಸೂಚಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಾಮಾಜಿಕ ಉದ್ಯಮಿ ಮತ್ತು ಗ್ರಿನ್ ವರ್ಮ್ ಸಂಸ್ಥೆಯ ಸಿಇಒಯಾಗಿರುವ ಜಬೀರ್ ಕರತ್ ಅವರು ಯುವಕರಿಗೆ ಪರಿಸರದ ಸವಾಲುಗಳನ್ನು ಕೈಗೆತ್ತಿಕೊಳ್ಳಲು ಮತ್ತು ಅಂತಹ ಸವಾಲುಗಳನ್ನು ಅವಕಾಶಗಳಾಗಿ ಬದಲಾಯಿಸಲು ಕರೆ ನೀಡಿದರು. ಇಂದು ದೇಶದ ಅತಿ ದೊಡ್ಡ ಸವಾಲು ಘನ ತ್ಯಾಜ್ಯ ನಿರ್ವಹಣೆ ಈ ಬಗ್ಗೆ ಯುವಕರು ಆಸಕ್ತಿ ವಹಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುತ್ತ ಇದನ್ನು ಸಮಾಜಿಕ ಉದ್ದಿಮೆಯಾಗಿ ಪರಿಗಣಿಸಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಸಾದ್ ಬೆಳಗಾಮಿ ಇಸ್ಲಾಂನಲ್ಲಿ ಹಬ್ಬದ ಪರಿಕಲ್ಪನೆ ಮತ್ತು ಈದ್-ಉಲ್-ಫಿತ್ರ್ ಮಹತ್ವವನ್ನು ಪ್ರಸ್ತುತಪಡಿಸಿದರು. ಅವರು ಪರಿಸರ ಮತ್ತು ಸುಸ್ಥಿರತೆಯ ಇಸ್ಲಾಮಿಕ್ ಪರಿಕಲ್ಪನೆಯ ಬಗ್ಗೆ ಮತ್ತು ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಇಸ್ಲಾಮ್ ಯಾವ ರೀತಿ ಮಾರ್ಗೋಪಾಯಗಳನ್ನು ತಿಳಿಸಿದೆ. ಅದನ್ನು ಸೂಕ್ತವಾಗಿ ಬಳಸುವ ನಿಟ್ಟಿನಲ್ಲಿ ಮುಂದುವರಿಯಬೇಕಾಗಿದೆಯೆಂದರು.

ಕೊನೆಯಲ್ಲಿ ಹಿರಿಯ ಪತ್ರಕರ್ತ ಬಿ ಎಂ ಹನೀಫ್ ಮಾತನಾಡಿ, ದೇಶದಲ್ಲಿ ಕಸದಂತೆ ತುಂಬಿರುವ ದ್ವೇಷವನ್ನು ದೂರೀಕರಿಸಿ ಒಂದಾಗಿ ಬಾಳಲು ನಾವು ಪ್ರಯತ್ನಿಸಬೇಕು. ಪರಿಸರ ರಕ್ಷಣೆಯಷ್ಟೇ ಇವತ್ತು ಹಬ್ಬುತ್ತಿರುವ ದ್ವೇಷದಿಂದ ಮನುಷ್ಯರ ರಕ್ಷಣೆ ಮಾಡಬೇಕಾಗಿದೆ ಅದಕ್ಕಾಗಿ ಎಲ್ಲರೂ ಪ್ರೀತಿ, ಸೌಹರ್ದತೆ ವ್ಯಾಪಕಗೊಳಿಸಲು ಕರೆ ನೀಡಿದರು.

ಎಸ್.ಐ.ಓ ರಾಜ್ಯಾಧ್ಯಕ್ಷರಾದ ನಿಹಾಲ್ ಕಿದಿಯೂರು ಪ್ರಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಮುಜಾಹಿದ್ ಕಾರ್ಯಕ್ರಮ ನಿರೂಪಿಸಿದರು. ಮುಜ್ತಬಾ ಹಸನ್ ರಿಝ್ವಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.