ಲಾಠಿ ಏಟು

0
177

ಸಂವಿಧಾನದ ರಕ್ಷಣೆಗಾಗಿ ಹೋರಾಡಿ ನೋವುಂಡ ಎಲ್ಲ ದೇಶ ಪ್ರೇಮಿ ಪ್ರಜೆಗಳಿಗೆ ಅರ್ಪಣೆ

ಅಧಿಕಾರದ ದರ್ಪದಿಂದ
ನೀನು ಬೀಸಿದ ಲಾಠಿ
ನಮ್ಮ ಚರ್ಮ ಸೀಳಿ ರಕ್ತ ಹರಿಸಿದೆ
ಮಾಂಸ ಚೆಲ್ಲಿದೆ
ಮೂಳೆ ಮುರಿದಿದೆ
ಆದರೇನು…?
ನೋವ ನುಂಗಿ ಹೃದಯ ಮಿಡಿಯುತ್ತಿದೆ
ಹೋರಾಟದ ಕಿಚ್ಚು ಉರಿಯುತ್ತಿದೆ

ಹೊಡೆದು ಬಡಿದು ನಿಮಗೆ
ಕೊಲ್ಲಲಷ್ಟೇ ಸಾಧ್ಯ
ಸೋಲಿಸಲಾಗದು
ಸೊಲಲಾರೆವು ನಾವೆಂದು
ಹೆತ್ತ ನಾಡಿಗಾಗಿ ಸತ್ತು ಬೀಳಲು
ಭಯವು ನಮಗಿಲ್ಲ

ಸಾವಿಗೆ ಹೆದರುವ ಹೇಡಿಗಳಲ್ಲ
ಹೆದರಿದ ಇತಿಹಾಸವೂ ನಮದಲ್ಲ
ಸತ್ತು ಬಿದ್ದವರ ಗೋರಿಯ ಮೇಲೆ
ಚೆಲ್ಲಿದ ರಕ್ತದ ಮಡುವಿನಲ್ಲೂ
ಸ್ವಾತಂತ್ರ್ಯದ ಕಿಡಿ ಚಿಗುರೊಡೆಯುವುದು
ಹೋರಾಟದ ದ್ವನಿ ಪ್ರತಿದ್ವನಿಸುತ್ತಿದೆ
ನಾಲ್ಕು ದಿಕ್ಕಿನಲ್ಲಿಯೂ
ಶಾಂತಿಗಾಗಿ…
ಸಮರಸದ ನಾಡಿಗಾಗಿ

ಧರ್ಮ ವಿಭಜಿಸಿ ದೇಶ ಒಡೆದು
ಗಡಿ ಗೋಡೆಗಳ ಕಟ್ಟಿದಿರಿ
ಮಾನವತೆಯ ಮನಸು ಜೋಡಿಸಿ
ಸೌಹಾರ್ದದ ಸೇತುವೆ ಕಟ್ಟುವೆವು ನಾವು
ಭಾರತ ಮಾತೆಯ ಮಡಿಲಲ್ಲಿ
ಬಹುತ್ವ ಭಾರತ ಕಟ್ಟುವೆವು
ನಾವು ಕಟ್ಟುವೆವು

ಎಂ. ಅಶೀರುದ್ದಿನ್ ಆಲಿಯಾ, ಮಂಜನಾಡಿ

LEAVE A REPLY

Please enter your comment!
Please enter your name here