ಲಕ್ನೋ: ಮಾಯವತಿ ಕಾಲೋನಿಯಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಆರು ತಿಂಗಳ ಮಗು ಸೇರಿ ಐವರು ಬಲಿಯಾಗಿದ್ದಾರೆ.

ಪ್ರತಾಪಗಢ ನಿವಾಸಿ ಟಿಎನ್ ಸಿಂಗ್ ಅವರು ತಮ್ಮ ಮನೆಯಲ್ಲಿಯೇ ಗ್ಯಾಸ್ ಸ್ಟೌವ್ ಗೋದಾಮು ಹೊಂದಿದ್ದು, ಎಲ್ಲರೂ ಮಲಗಿದ್ದಾಗ ರಾತ್ರಿ 1.30ರ ಸುಮಾರಿಗೆ ಮನೆಯ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇಂದಿರಾ ನಗರ ಪೊಲೀಸ್ ಠಾಣೆಯ ಅಧಿಕಾರಿ ಅಮರನಾಥ್ ವಿಶ್ವಕರ್ಮ ಅವರು ತಿಳಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ಕಾರಣ ಬೆಂಕಿ ವ್ಯಾಪಿಸಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಮೃತರನ್ನು ಸುಮಿತ್ ಸಿಂಗ್, ಆತನ ಪತ್ನಿ ಜ್ಯೂಲಿ, ಅವರ ಆರು ತಿಂಗಳ ಮಗಳು, ದಬ್ಲು ಸಿಂಗ್ ಹಾಗೂ ವಂದನಾ ಸಿಂಗ್ ಎಂದು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.