ಕುಂದಾಪುರ: ಕುಂದಾಪುರದಲ್ಲಿ ನಡೆಯುತ್ತಿರುವ ಪರಿವರ್ತನಾ ಸಮಾವೇಶದಲ್ಲಿ ಹೈಡ್ರಾಮವೊಂದು ನಡೆದು ಹೋಗಿದೆ. ಕುಂದಾಪುರದಲ್ಲಿ ಬಿಜೆಪಿಗಳ ನಡುವಿನ ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ.  ಇದು ಹೊಡೆದಾಟದ ಮಟ್ಟಕ್ಕೇರಿದಾಗ ಪೊಲೀಸರು ಲಘ ಲಾಠಿ ಚಾರ್ಜ್ ನಡೆದಿರುವ ಬಗ್ಗೆ ವರದಿಯಾಗಿದೆ. ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಿಜೆಪಿ ಸೇರ್ಪಡೆಯ ವಿರುದ್ದ ಒಂದು ಬಣ ವಿರೋಧ ವ್ಯಕ್ತಪಡಿಸಿದಾಗ ಈ ಘಟನೆ ನಡೆದಿದೆ.

ಲಾಠಿ ಚಾರ್ಜ್ ಆಗಿಲ್ಲ ಸ್ಪಷ್ಟನೆ: ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷ ಲಾಠಿ ಚಾರ್ಜ್ ನಡೆದಿಲ್ಲ, ಎರಡು ಬಣಗಳ ನಡುವೆ ಸ್ವಲ್ಪ ಮಟ್ಟಿನ ಅಸಮಾಧನ ಉಂಟಾಗಿರುವುದು ನಿಜ, ಇದು ಎಲ್ಲ ಪಕ್ಷಗಳಲ್ಲಿ ಸಾಮಾನ್ಯ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.