ಕುಂದಾಪುರ : ಕಾರ್ಮಿಕ ವರ್ಗದ ಕಾನೂನು ಕಾಪಾಡಿಕೊಳ್ಳಲು ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಯೂ ಆಗಬೇಕಾಗಿದೆ.ಸಂಘ ಕಟ್ಟುವ ಹಕ್ಕು ಹೋರಾಟ ನಡೆಸುವ ಹಕ್ಕುಗಳ ಮೇಲೆ ಸರಕಾರ ಪ್ರಾಯೋಜಿತ ದಾಳಿಗಳನ್ನು ಇಂದಿನ ಕೇಂದ್ರ ಸರಕಾರ ನಡೆಸಲು ಮುಂದಾಗುತ್ತಿದ್ದು ಪ್ರಜಾಸತ್ತಾತ್ಮಕ ಹಕ್ಕುಗಳು ಅಪಾಯದಲ್ಲಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಕೆ.ಶಂಕರ್ ಹೇಳಿದರು. ಅವರು ಕುಂದಾಪುರ ಹಂಚುಕಾರ್ಮಿಕ ಭವನದಲ್ಲಿ ನಡೆದ ಕುಂದಾಪುರ ಸಿಐಟಿಯು 4ನೇ ಸಮ್ಮೇಳನ ಉಧ್ಘಾಟಿಸಿ ಮಾತನಾಡಿದರು.

ಕೇಂದ್ರ ಸರಕಾರವು ತನ್ನ ಲಾಭಕ್ಕಾಗಿ ಕೆಲವೇ ಕೆಲವು ಬೆರಳೆಣಿಕೆಯ ಉದ್ಯಮಪತಿಗಳಿಗೆ ತನ್ನ ಒಪ್ಪಂದದಂತೆ ವಿಪರೀತ ಲಾಭ ಮಾಡಿಕೊಡುತ್ತಿದೆ.ನೋಟ್ ಬ್ಯಾನ್ ಧೀರ್ಘ ಪರಿಣಾಮವು ದೇಶದ ಬಹಳಷ್ಟು ಕೈಗಾರಿಕೆಗಳು ಅವನತಿಯತ್ತ ಸಾಗುತ್ತಿದ್ದು ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ.ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶವು ಮುಂದಿನ ದಿನಗಳಲ್ಲಿ ಬಾರಿ ಬೆಲೆ ತೆರಬೇಕಾದ ಪರಿಸ್ಥಿತಿ ಬರಲಿದೆ ಎಂದು ಅವರು ಹೇಳಿದರು.

ಸರಕಾರವು ತನ್ನ ಆಡಳಿತ ವೈಪಲ್ಯ ಮರೆಮಾಚಲು ಭಾವನಾತ್ಮಕ ವಿಚಾರ ಮುನ್ನಲೆಗೆ ತರುತ್ತಿದೆ.ಅಧಿಕಾರ ರಕ್ಷಣೆಗೆ ಮುಂದೆ ಎಲ್ಲಾ ರೀತಿಯ ತಂತ್ರಗಳನ್ನು ಅದು ಅನುಸರಿಸಲಿದೆ.ದೇಶದ ಕಾರ್ಮಿಕ ವರ್ಗ ತನ್ನ ಸೌಲಭ್ಯ ಜೊತೆ ಜನತೆಯನ್ನು ರಕ್ಷಿಸಲು ತೀವ್ರ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.

ಸಮ್ಮೇಳನದ ಧ್ವಜಾರೋಹಣ ಹಿರಿಯ ಕಾರ್ಮಿಕ ಮುಖಂಡರಾದ ವಿ.ನರಸಿಂಹ ನೆರವೇರಿಸಿದರು.ಅಧ್ಯಕ್ಷತೆಯನ್ನು ಸಿಐಟಿಯು ಮುಖಂಡರಾದ ಎಚ್ ನರಸಿಂಹ ವಹಿಸಿದ್ದರು.ವೇದಿಕೆಯಲ್ಲಿ ಸುರೇಶ್ ಕಲ್ಲಾಗರ,ಮಹಾಬಲ ವಡೇರಹೋಬಳಿ,ರಾಜೀವ ಪಡುಕೋಣೆ,ಜಿ.ಡಿ ಪಂಜು,ಗಣೇಶ ತೊಂಡೆಮಕ್ಕಿ,ಜಯಶ್ರೀ,ಸುಶೀಲನಾಡ,ಉಪಸ್ಥಿತರಿದ್ದರು.ಸಿಐಟಿಯು ತಾಲೂಕು ಕಾರ್ಯದರ್ಶಿ ವೆಂಕಟೇಶ್ ಕೋಣಿ ಸಂಘಟನ ಕರಡು ವರದಿ ಮಂಡಿಸಿದರು.ಕೋಶಾಧಿಕಾರಿ ಶೀಲಾವತಿ ಲೆಕ್ಕಪತ್ರ ಮಂಡಿಸಿದರು.ಪ್ರತಿನಿಧಿಗಳು ಚರ್ಚೆ ನಡೆಸಿ ಅಂಗೀಕರಿಸಿದರು.ಸಮ್ಮೇಳನವು ಬೈಂದೂರು ಮತ್ತು ಕುಂದಾಪುರ ತಾಲೂಕುಗಳಿಗೆ ಸಮಿತಿ ರಚಿಸಿತು.ಕುಂದಾಪುರ 17 ಜನರ ಸಮಿತಿಗೆ ಸಂಚಾಲಕರಾಗಿ ಎಚ್ ನರಸಿಂಹ,ಸಹಸಂಚಾಲಕರಾಗಿ ಮಹಾಬಲವಡೇರಹೋಬಳಿ,ಸಂತೋಷಹೆಮ್ಮಾಡಿ ಅವರನ್ನು ಆಯ್ಕೆ ಮಾಡಿತು.15 ಜನರ ಬೈಂದೂರು ತಾಲೂಕು ಸಮಿತಿಗೆ ಸಂಚಾಲಕರಾಗಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಸಹ ಸಂಚಾಲಕರಾಗಿ ಉದಯ ಮೊಗೇರಿ,ಸಿಂಗಾರಿ ಆಯ್ಕೆಯಾದರು.

ಸಮ್ಮೇಳನವು ಮರಳುಗಾರಿಕೆ ಶೀಘ್ರ ಆರಂಬಿಸಲು ನಿರ್ಣಯ, ಹಂಚುಕೈಗಾರಿಕೆಗೆ ಸರಕಾರದ ಬೆಂಬಲಕ್ಕೆ ಆಗ್ರಹ, ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ನೀಡಲು ನಿರ್ಣಯ,ಕಟ್ಟಡ ಕಾರ್ಮಿಕರ ಸೆಸ್ ಕಾನೂನು ರದ್ದತಿ ವಿರುದ್ಧ ನಿರ್ಣಯ.ಅಕ್ಷರ ದಾಸೋಹ ನೌಕರರಿಗೆ ಸರಕಾರಿ ನೌಕರರೆಂದು ಪರಿಗಣಿಸಲು,ಅಂಗನವಾಡಿಯಲ್ಲಿಯೇ ಎಲ್ ಕೆ ಜಿ ಯಕೆಜಿ ತೆರೆಯಲು ಆಗ್ರಹ ಮಾಡಿ ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.