ಬೆಂಗಳೂರು: ಇಂದು ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದು ಬಹುಮತ ಸಾಬೀತಾದರೆ ಸರಕಾರ ಉಳಿಯಲಿದ್ದು ಇಲ್ಲದಿದ್ದ ಪಕ್ಷದಲ್ಲಿ ಮೈತ್ರಿ ಸರಕಾರ ಪತನವಾಗಲಿದೆ.

ಅತೃಪ್ತ ಶಾಸಕರ ರಾಜೀನಾಮೆ ಪ್ರಸಂಗ ಸರಕಾರವನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದು ಈಗ ಇತಿಹಾಸ. ಒಂದು ವೇಳೆ ಇಂದು ಮೈತ್ರಿ ಸರಕಾರ ರಾಜೀನಾಮೆ ನೀಡಿರುವ ಕೆಲವರು ಶಾಸಕರನ್ನು ಒಲಿಸುವಲ್ಲಿ ಸಫಲವಾಗಿದ್ದೆಯಾದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಲಿದೆ.

ನಂಬರ್ ಗೇಮ್ ಲೆಕ್ಕಾಚಾರದಂತೆ ಸರ್ಕಾರಕ್ಕೆ ಆರು ಶಾಸಕರ ಕೊರತೆ ಇದೆ. ಮುಂಬೈನಲ್ಲಿರುವ ನಾಲ್ಕು ಶಾಸಕರಾದರೂ ಮುನಿಸುಬಿಟ್ಟು ವಾಪಸಾದರೆ ಸರ್ಕಾರ ಸೇಫ್. ಅತೃಪ್ತರ ಪೈಕಿ ಒಂದಿಬ್ಬರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದಲ್ಲಿ ಉಳಿದವರು ಹೆದರಿ ವಾಪಸ್ ಬರಬಹುದೆಂದು ಮೈತ್ರಿ ನಾಯಕರು ನಿರೀಕ್ಷಿಸಿದ್ದಾರೆ. ಇಲ್ಲವಾದರೆ ರಿವರ್ಸ್ ಆಪರೇಷನ್ ಮೂಲಕ ಬಿಜೆಪಿ ಸಂಖ್ಯೆಯನ್ನು ಕಡಿಮೆ ಮಾಡಿದರೆ ಮಾತ್ರ ವಿಶ್ವಾಸ ಗೆಲ್ಲಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.