ರಾಮನಗರ: ನನ್ನ ಬಳಿ ಪಾಪದ ದುಡ್ಡು ಇದ್ದಿದ್ದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದೆ. ನಾನು ಪಾಪದ ದುಡ್ಡು ಸಂಪಾದನೆ ಮಾಡಿಲ್ಲ. ಹಾಗಾಗಿ ನಾನು ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಆದಾಯ ತೆರಿಗೆ ಇಲಾಖೆ ದಾಳಿಗೆ ಹೆದರುವ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ತಿಳಿಸಿದರು.

ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ” ನಾನು ಸಿಎಂ ಆಗಿದ್ದು ಕೆಲವರಿಗೆ ಸಹಿಸಲು ಅಗಲಿಲ್ಲ. ಮುಖ್ಯಮಂತ್ರಿ ಹುದ್ದೆ ನನಗೆ ಮುಳ್ಳಿನ ಹಾಸಿಗೆ ಆಗಿತ್ತು. ಪ್ರಸ್ತುತ ರಾಜಕಾರಣ ನನಗೆ ಸಾಕಷ್ಟು ಬೇಸರ ತಂದಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ನನಗೆ ರಾಜಕೀಯವೇ ಬೇಡ ಅನಿಸುತ್ತಿದೆ. ಆದರೆ, ಬಡವರ ನೋವಿಗೆ ಸ್ಪಂದಿಸಲು ನಾನಿನ್ನೂ ರಾಜಕೀಯದಲ್ಲಿದ್ದೇನೆ ಎಂದು ತಿಳಿಸಿದರು.ಕರ್ನಾಟಕಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂದು ಹೋಗಿದ್ದಾರೆ, ಆದರೂ ನೆರೆ ಪರಿಹಾರವಾಗಿ ಒಂದು ಬಿಡಿಗಾಸೂ ನೀಡಿಲ್ಲ . ಅವರ ಅಪ್ಪನ ಮನೆಯಿಂದ ದುಡ್ಡು ಕೊಡುತ್ತಾರಾ? ನಮ್ಮ ತೆರಿಗೆ ಹಣವನ್ನೂ ನಮಗೆ ಕೊಡುತ್ತಿಲ್ಲ. ಜತೆಗೆ ಯಡಿಯೂರಪ್ಪ ಅವರ ಭೇಟಿಗೂ ಮೋದಿ ಅವಕಾಶ ಕೊಡುತ್ತಿಲ್ಲ “ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.