ತುಮಕೂರು:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಡಿ.ಕೆ ಶಿವಕುಮಾರ್ ಮೇಲೆ ಪ್ರೀತಿ ಇಲ್ಲ. ಪ್ರೀತಿ ಇದ್ದಿದ್ದರೆ ಅವರು ನನ್ನ ಹೋರಾಟಕ್ಕೆ ಬರುತ್ತಿದ್ದರು ಎಂದು ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಕುಮಾರಸ್ವಾಮಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕುಮಾರಸ್ವಾಮಿಯವರು ಪ್ರತಿಭಟನೆಗೆ ಬರಬೇಕು ಎಂದೇನಿಲ್ಲ. ನಮಗೆಲ್ಲ ಡಿ.ಕೆ.ಶಿವಕುಮಾರ್ ಮೇಲೆ ಪ್ರೀತಿ ಇದ್ದಿದ್ದರಿಂದ ನಾವು ಹೋಗಿದ್ದೆವು. ನಮ್ಮ ಸಮುದಾಯದ ಮುಖಂಡನಿಗೆ ಅನ್ಯಾಯವಾದಾಗ ಪ್ರತಿಭಟಿಸುವುದು ನಮ್ಮ ಭಾವನೆ. ಆದರೆ ಕುಮಾರಸ್ವಾಮಿಯವರಿಗೆ ಆ ಭಾವನೆ ಇರಲಿಲ್ಲ. ಇದ್ದಿದ್ದರೆ ಖಂಡಿತ ನಮ್ಮ ಹೋರಾಟಕ್ಕೆ ಬರುತ್ತಿದ್ದರು. ಆಮಂತ್ರಣ ಕೊಟ್ಟು ಕರೆದರೆ ಮಾತ್ರ ಬರಬೇಕೆಂದಿಲ್ಲ. ಸಮುದಾಯದ ಕಾರ್ಯಕ್ರಮ ನಡೆಯುವಾಗ ಆಮಂತ್ರಣ ಕೊಡುವಂಥದ್ದು ಎಲ್ಲೂ ಇಲ್ಲ. ಹೋರಾಟಕ್ಕೆ ಬಂದಿದ್ದ 25 ಸಾವಿರ ಜನರಿಗೆ ಯಾರು ಆಮಂತ್ರಣ ಕೊಟ್ಟಿರಲಿಲ್ಲ.ಅವರೆಲ್ಲ ಡಿಕೆಶಿ ಮೇಲಿನ ಪ್ರೀತಿಯಿಂದ ಬಂದಿದ್ದರು ಎಂದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.