ರಾಮನಗರ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.ಇನ್ನು ಮುಂದಿನ ಟಾರ್ಗೆಟ್ ಕುಮಾರಸ್ವಾಮಿ ಎಂದು ಹೇಳುತ್ತಿದ್ದಾರೆ.ಆದರೆ ನನ್ನನ್ನು ಯಾರು ಏನೂ ಮಾಡೋಕಾಗಲ್ಲ. ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬಿಜೆಪಿ ಮುಖಂಡರಿಗೆ ಬಿಸಿ ಮುಟ್ಟಿಸಿದ್ದಾರೆ.

ಡಿ.ಕೆ ಶಿವಕುಮಾರ್ ಬಂಧನ ಹಿನ್ನಲೆ ಇಂದು ಬೆಂಗಳೂರಿನಲ್ಲಿ ಒಕ್ಕಲಿಗರಿಂದ ನಡೆದ ಬ್ರಹತ್ ಪ್ರತಿಭಟನೆ ಕುರಿತು ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ “ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಈ ಮೊದಲೇ ನಿಗಧಿಯಾಗಿತ್ತು. ಹಾಗಾಗಿ ಬೆಂಗಳೂರಿನ ಪ್ರತಿಭಟನೆಗೆ ನನಗೆ ಆಹ್ವಾನವಿರಲಿಲ್ಲ. ಆದರೂ ಕೂಡ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದಾರೆ. ನನಗೆ ಮೊದಲೇ ಆಹ್ವಾನ ನೀಡಿದ್ದರೆ ನಾನು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೆ.ಮುಂದೆ ಕುಮಾರಸ್ವಾಮಿಯನ್ನು ಬಂಧಿಸುತ್ತಾರೆಂದು ಕಾರ್ಯಕ್ರಮದ ಜಾಹಿರಾತಿನಲ್ಲಿ ನನ್ನ ಫೋಟೋ ಕೂಡ ಹಾಕಿದ್ದಾರಂತೆ.ಆದರೆ ನನ್ನನ್ನು ಬಂಧಿಸುವುದು ಅಷ್ಟು ಸುಲಭವಲ್ಲ.ಅಷ್ಟು ಸುಲಭವಾಗಿ ನನ್ನನ್ನು ಯಾರು ಏನು ಮಾಡೋಕಾಗಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಆದರಿಂದ ನನ್ನನ್ನ ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ”ಎಂದಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.