ಕುಂದಾಪುರ: ಕೆಲವು ದಿನಗಳ ಮೊದಲು ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಮುಂಜಾನೆ 4 ಗಂಟೆಗೆ ಮುಸುಕುಧಾರಿ ದುಷ್ಕರ್ಮಿಗಳು ಅಪಹರಿಸಿದ್ದರ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಮಗುವಿನ ಶವ ಕುಬ್ಜ ನದಿಯಲ್ಲಿ ಪತ್ತೆಯಾಗಿದ್ದು ಅಪಹರಣವಾದ ಮಗು ಇದುವೆಯಾ ಎಂಬ ಬಗ್ಗೆ ತನಿಖೆ ಮುಂದುವರಿದೆ.

 

ಈ ಬಗ್ಗೆ ಕೊಸ್ಟಲ್ ಮಿರರ್ ನೊಂದಿಗೆ ಮಾತನಾಡಿರುವ ಪೊಲೀಸರು ಶವ ಸಿಕ್ಕಿದ್ದು ಹೌದು ಆದರೆ ಮಗುವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಡೇ ಲಭ್ಯವಾಗಬೇಕಾಗಿದೆ ಎಂದು ತಿಳಿಸಿದ್ದಾರೆ.

ಕುಮ್ತಿ ಬೀರು ಸಂತೋಷ ನಾಯ್ಕ್ ಅವರ ಮಗಳು ಎರಡು ವರ್ಷದ ಮಗುವನ್ನು ಯಾವ ಕಾರಣಕ್ಕಾಗಿ ಅಪಹರಿಸಲಾಗಿದೆ. ಅಥವಾ ಇನ್ನೆನಾದರೂ ಕಥೆ ಇದದರ ಹಿಂದೆ ಇದೆಯಾ ಎಂಬುದು ಪೊಲೀಸರ ತನಿಖೆಯ ನಂತರವಷ್ಟೇ ಹೊರ ಬರಬೇಕಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.