ಕೊಡಗು : ಮೂರು ವರ್ಷದ ಮಗುವೊಂದು ಚಲಿಸುತ್ತಿದ್ದ ಕಾರಿನಿಂದ ಕೆಳಗೆ ಬಿದ್ದಿದೆ ಅದೃಷ್ಟ ಎಂಬಂತೆ ಪ್ರಾಣಾಪಾಯದಿಂದ ಪಾರಾದ ಬಗ್ಗೆ ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನಡೆದಿದೆ. ಈ ಘಟನೆ ಅಕ್ಟೋಬರ್​ 7ರಂದು ನಡೆದಿದ್ದು ಇದೀಗ ಸಿ ಸಿ ಕ್ಯಾಮರಾದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಾರಿನ ಬಾಗಿಲು ತೆರೆದುಕೊಂಡ ಪರಿಣಾಮ ಮಗು ರಸ್ತೆಯ ಮೇಲೆ ಬಿದ್ದಿದ್ದು, ಮಗುವಿನ ಕೈಯಲ್ಲಿ ಬಲೂನ್ ಇದ್ದಿದ್ದರಿಂದ ಹೆಚ್ಚಿನ ಗಾಯಗಳಾಗದಂತೆ ತಡೆದಿದೆ.

ಕಳೆದ ತಿಂಗಳಷ್ಟೇ ಕೇರಳದ ಮುನ್ನಾರ್​​ನಲ್ಲಿ ರಾತ್ರಿ ಹೊತ್ತು, ಚಲಿಸುತ್ತಿದ್ದ ಕಾರಿನಿಂದ 1 ವರ್ಷದ ಮಗು ರಸ್ತೆ ಮೇಲೆ ಬಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.