ಅಹಾರದ ಗುಣಮಟ್ಟ ಪ್ರಶ್ನಿಸಿದಕ್ಕೆ ಹೊಡೆದು ಕೊಂದರು!

ನವದೆಹಲಿ:  ದಾಬವೊಂದರ ಕೆಲಸಗಾರರು ಸೇರಿಕೊಂಡು ಆಹಾರದ ಗುಣಮಟ್ಟ ಪ್ರಶ್ನಿಸಿದ 30 ವರ್ಷದ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾರೆ.

ಪವನ್ ಎಂಬುವವರು ಕಮಲ್ ದಾಬಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ಕೊಟ್ಟ ಆಹಾರದ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟುಕೊಂಡ ದಾಬಾ ಸಿಬ್ಬಂದಿಗಳು ಬರ್ಬರ್ವಾಗಿ ಹಲ್ಲೆ ಮಾಡಿ ಕೊಂದು ಹಾಕಿದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಕ್ಷುಲ್ಲಕ ವಿಚಾರದಲ್ಲಿ ಒರ್ವ ಅಮಾಯಕನನ್ನು ಕೊಂದ ಸಚಿನ್, ಗೋವಿಂದ್ ಮತ್ತು ಕರನ್ ನನ್ನು ಬಂಧಿಸಲಾಗಿದೆ. ಹಲ್ಲೆಯಾದ ಕೂಡಲೇ ಪವನ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ.