ತಿರುವನಂತಪುರ/ಮಂಗಳೂರು : ಕೇರಳಕ್ಕೆ ಮುಂಗಾರು ಸೋಮವಾರವೇ ಪ್ರವೇಶಿಸಿದೆ ಎಂದು ಹವಾಮಾನ ಮುನ್ಸೂಚನೆಯ ಖಾಸಗಿ ಸಂಸ್ಥೆ ಸ್ಕೈಮೆಟ್‌ ಹೇಳಿದೆ. ಆದರೆ, ಈ ಹಿಂದೆ ಅಂದಾಜಿಸಿದಂತೆ ಮಂಗಳವಾರವೇ (ಮೇ 29) ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಮುಂಗಾರು ಪ್ರವೇಶವಾಗಿದೆ ಎಂಬುದನ್ನು ಘೋಷಿಸಲು ಬೇಕಿರುವ ಎಲ್ಲ ಮಾನದಂಡಗಳೂ ಪೂರೈಕೆಯಾಗಿವೆ. ಮೇ 10ರ ಬಳಿಕ, ಲಭ್ಯ ಇರುವ 14 ಮಳೆ ಮಾಪನ ಕೇಂದ್ರಗಳ ಪೈಕಿ ಶೇ 60ರಷ್ಟಲ್ಲಿ 2.55 ಮಿ.ಮೀ.ಗಿಂತ ಹೆಚ್ಚು ಮಳೆ ದಾಖಲಾದರೆ ಮುಂಗಾರು ಆರಂಭವಾಗಿದೆ ಎಂದೇ ಅರ್ಥ ಎಂದು ಸ್ಕೈಮೆಟ್‌ ಹೇಳಿದೆ.

ಕೇರಳಕ್ಕೆ ಮುಂಗಾರು ಪ್ರವೇಶವನ್ನು ನಿರ್ಧರಿಸುವ 14 ಮಾಪನ ಕೇಂದ್ರಗಳಲ್ಲಿ ಮಂಗಳೂರು ಕೂಡ ಒಂದು. ಮಂಗಳೂರಿನಲ್ಲಿ ಮುಂಗಾರು ಆಗಮನದೊಂದಿಗೆ ಉತ್ತಮ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ನೆರೆಯ ವಾತವರಣ ನಿರ್ಮಾಣವಾಗಿದೆ.

ಉತ್ತರ ಭಾರತದಲ್ಲೂ ಸುರಿಯುತ್ತಿರುವ ವ್ಯಾಪಕ ಮಳೆಯ ಕಾರಣ ಉತ್ತರ ಪ್ರದೇಶ, ಬಿಹಾರ,ಝರ್ಕಾಂಡಿನಲ್ಲಿ 40 ಜನರು ಮೃತರಾದ ಬಗ್ಗೆ ವರದಿಯಾಗಿದೆ.

ಕರ್ನಾಟಕದಲ್ಲೂ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.