ಬೆಂಗಳೂರು : ಯುಗಾದಿ ಹಬ್ಬದ ಕೊಡುಗೆಯಾಗಿ ಶಿವರಾಜ್​​ಕುಮಾರ್ ನಟನೆಯ ಬಹುನಿರೀಕ್ಷಿತ ಕವಚ ಸಿನಿಮಾ ಇಂದಿನಿಂದ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ತೆರೆಕಾಣಲಿದೆ. ಮೊದಲ ಬಾರಿಗೆ ಶಿವಣ್ಣ ಅಂಧನ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದು ಚಿತ್ರದ ನಿರೀಕ್ಷೆ ಹೆಚ್ಚಿಸಿದೆ. ವಿಶೇಷ ಅಂದರೆ ಇಂದು ಸ್ಟಾರ್ ನಟರು ಹಾಗೂ ನಿರ್ದೇಶಕರೊಂದಿಗೆ ಕುಳಿತು ಶಿವಣ್ಣ ಕೂಡ ಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಕವಚ ಸಿನಿಮಾ ಮಲಯಾಳಂನ ಒಪ್ಪಂ ಸಿನಿಮಾದ ರೀಮೇಕ್. ಮೋಹನ್ಲಾಲ್ನಟಿಸಿದ್ದ ಪಾತ್ರಕ್ಕೆ ಶಿವಣ್ಣ ಬಣ್ಣ ಹಚ್ಚಿದ್ದಾರೆ. ಇದೊಂದು ಅಪ್ಪ ಮಗಳ ಬಾಂಧವ್ಯದ ಕಥೆಯನ್ನ ಹೊಂದಿದ್ದು ಜಿವಿಆರ್ವಾಸು ಚೊಚ್ಚಲ ನಿರ್ದೇಶನ ಮಾಡಿದ್ದಾರೆ. ಕವಚ ಚಿತ್ರ ಹಲವು ಕಾರಣಗಳಿಂದ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಒಂದೆಡೆ ಶಿವಣ್ಣ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸುತ್ತಿದ್ದು ಶಿವಣ್ಣನ ಅಭಿನಯ ಹೇಗಿರಲಿದೆ ಅನ್ನೋ ಕುತೂಹಲ ಹೆಚ್ಚಿಸಿದೆ. ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಬಾಯಲ್ಲೂ ಗುನುಗುನಿಸುತ್ತಿವೆ. ಇಶಾ ಕೊಪ್ಪಿಕರ್‌, ವಸಿಷ್ಠ ಸಿಂಹ ಸೇರಿದಂತೆ ನುರಿತ ಕಲಾವಿದರ ತಾರಾಗಣವೇ ಸಿನಿಮಾದಲ್ಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.