ಕಾಶ್ಮೀರ: ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಸೋಮವಾರದಿಂದ ಕಾಶ್ಮೀರದಲ್ಲಿ ಶಾಲೆ ಮತ್ತು ಸರಕಾರಿ ಕಚೇರಿಗಳು ಪುನರಾರಂಭವಾಗಲಿದೆಯೆಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ಮೂಲಗಳು ತಿಳಿಸಿವೆ.

ವಿಧಿ 370 ರದ್ದಾದ ನಂತರ ಇಡೀ ಕಾಶ್ಮೀರದಲ್ಲಿ ಬೂದಿ ಮುಚ್ಚಿದ ಕೆಂಡದ ವಾತವರಣವಿದ್ದು ಸಂಪೂರ್ಣವಾಗಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಇದರ ಹೊರತಾಗಿ ಹತ್ತು ಸಾವಿರ ಮಂದಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ನಡೆಯ ವಿರುದ್ಧ ಧ್ವನಿಯೆತ್ತಿದ್ದರು. ಎಲ್ಲರೂ ವಿಧಿ ರದ್ದತಿಯಿಂದ ಖುಷಿಯಾಗಿದ್ದರೆ ಎಂಬ ಕೇಂದ್ರದ ಹೇಳಿಕೆ ಈ ಪ್ರತಿಭಟನೆ ಇರುಸು ಮುರುಸು ಉಂಟು ಮಾಡಿತ್ತು.

ಕಾಶ್ಮೀರ ಟೈಮ್ಸ್ ನ ಸಂಪಾದಕ ಅನುರಾಧ ಬಾಸಿನ್ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕದೆ ಸ್ವತಂತ್ರವಾಗಿ ಕಾರ್ಯಚರಿಸಲು ಬಿಡುವಂತೆ ಕೋರಿ ಕೊಂಡಿದ್ದರು. ಈ ಬಗ್ಗೆ ಸರ್ವೊಚ್ಚ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಈಗಾಗಲೇ ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಸಂಪರ್ಕಕ್ಕೆ ಯಾವುದೇ ಮಾರ್ಗೊಪಾಯವಿಲ್ಲದೆ ಜನ ಮತ್ತು ಮಾಧ್ಯಮ ಇಕ್ಕಟ್ಟಿಗೆ ಸಿಲುಕಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.