ಕಾಶ್ಮೀರ: ಕಳೆದ ಎರಡು ತಿಂಗಳಿನಿಂದ ಕಾಶ್ಮೀರದ ಪ್ರವಾಸ ತಾಣಗಳಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ನಿರ್ಬಂಧ ತೆರವುಗೊಳಿಸಿದ್ದು ಪ್ರವಾಸಿಗರಿಗೆ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.

ವಿಧಿ 370 ರದ್ದತಿಯ ನಂತರ ರಾಜಕೀಯ ಮುಖಂಡರನ್ನು, ಹಲವು ನಾಗರಿಕರನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದುಕೊಂಡಿತ್ತು. ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ ಇನ್ನು ಕೂಡ ಕಾಶ್ಮೀರದಲ್ಲಿ ಬೂದಿ ಮುಚ್ಚಿದ ವಾತಾವರಣ ಮುಂದುವರಿದಿದ್ದು ಭದ್ರತೆ ಬಿಗಿಯಾಗಿದೆ.

ಈ ನಡುವೆ ಈಗ ಪ್ರವಾಸಿಗರು ಭೇಟಿ ನೀಡಲು ಪ್ರಸಕ್ತ ಸಮಯವಾಗಿದ್ದರಿಂದ ಪ್ರಸ್ತುತ ಕಣಿವೆ ಪ್ರದೇಶದಲ್ಲಿ 20ರಿಂದ 25 ಸಾವಿರ ಪ್ರವಾಸಿಗರು ಭೇಟಿ ನೀಡಿರುವುದಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.