ಕ್ರಿಕೆಟ್; ಕರುಣ್ ನಾಯರ್ ಕರ್ನಾಟಕ ತಂಡದ ನಾಯಕ

0
468

ಬೆಂಗಳೂರು: ಅನುಭವಿ ಬ್ಯಾಟ್ಸ್​ಮನ್ ಕರುಣ್ ನಾಯರ್ ಡಿಸೆಂಬರ್ 9ರಿಂದ ನಡೆಯಲಿರುವ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿ ಮೊದಲ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ ಮುನ್ನಡೆಸಲಿದ್ದಾರೆ. 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ದಿಂಡಿಗಲ್​ನಲ್ಲಿ ಆತಿಥೇಯ ತಮಿಳುನಾಡು ತಂಡವನ್ನು ಎದುರಿಸಲಿದೆ.

ತವರಿನಲ್ಲಿ ನಡೆಯಲಿರುವ ವಿಂಡೀಸ್ ವಿರುದ್ಧದ ಸರಣಿಗೆ ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದರಿಂದ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಮನೀಷ್ ಪಾಂಡೆ ನಾಯಕತ್ವದಲ್ಲಿಯೇ ಕರ್ನಾಟಕ ತಂಡ ವಿಜಯ್ ಹಜಾರೆ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸಿತ್ತು. ಅನುಭವಿ ವೇಗಿ ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿದ್ದು, ರೋನಿತ್ ಮೋರೆ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿ ನಿಭಾಯಿಸಲಿದ್ದಾರೆ. ಆರಂಭಿಕ ಆರ್. ಸಮರ್ಥ್, ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ತಂಡಕ್ಕೆ ವಾಪಸಾದರೆ, ವೇಗಿ ಕೆಎಸ್ ದೇವಯ್ಯ ತಂಡದಲ್ಲಿ ಸ್ಥಾನ ಪಡೆದಿರುವ ಹೊಸಮುಖ.

ತಂಡ: ಕರುಣ್ ನಾಯರ್ (ನಾಯಕ), ಮಯಾಂಕ್ ಅಗರ್ವಾಲ್, ದೇವದತ್ ಪಡಿಕಲ್, ನಿಶ್ಚಲ್ ಡಿ, ಆರ್. ಸಮರ್ಥ್, ಪವನ್ ದೇಶಪಾಂಡೆ, ಕೆ.ಗೌತಮ್ ಶ್ರೇಯಸ್ ಗೋಪಾಲ್ (ಉಪನಾಯಕ), ಜೆ.ಸುಚಿತ್, ಬಿಆರ್ ಶರತ್ (ವಿಕೀ), ಶರತ್ ಶ್ರೀನಿವಾಸ್ (ವಿಕೀ), ರೋನಿತ್ ಮೋರೆ, ಡೇವಿಡ್ ಮಥಾಯಿಸ್, ಕೌಶಿಕ್ ವಿ, ದೇವಯ್ಯ ಕೆಎಸ್. ಕೋಚ್: ಯರೇಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್, ಫೀಲ್ಡಿಂಗ್ ಕೋಚ್: ಶಬರೀಷ್ ಪಿ ಮೋಹನ್, ಮ್ಯಾನೇಜರ್: ಅನುತೋಷ್ ಪೌಲ್.

LEAVE A REPLY

Please enter your comment!
Please enter your name here