• ಕೋರಿಕೆಯ ವರ್ಗಾವಣೆ ಬಯಸುವ ಶಿಕ್ಷಕರು / ಅಧಿಕಾರಿಗಳು ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು. ಕೆಲವು ಮಾಹಿತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಗಣಕ ಯಂತ್ರ ನೀಡುವ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು ಹಾಗೂ ಮುಂಧಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ.ಐ.ಡಿ ಸಂಖ್ಯೆಯ ಜೊತೆಯಲ್ಲಿ ಅರ್ಜಿ ಸ0ಖ್ಯೆಯನ್ನು ಬಳಸುವುದು.

• ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರು / ಅಧಿಕಾರಿಗಳು ಕ್ಲಿಕ್ ಮಾಡುವುದರ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು. ಕೆಲವು ಮಾಹಿತಿಗಳನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಗಣಕ ಯಂತ್ರ ನೀಡುವ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು ಹಾಗೂ ಮುಂಧಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ.ಐ.ಡಿ ಸಂಖ್ಯೆಯ ಜೊತೆಯಲ್ಲಿ ಅರ್ಜಿ ಸ0ಖ್ಯೆಯನ್ನು ಬಳಸುವುದು.

• ವರ್ಗಾವಣೆಗೆ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಪಡೆಯಲು ಕ್ಲಿಕ್ ಮಾಡಿ ಅರ್ಜಿ ಸಂಖ್ಯೆ ಹಾಗೂ ಕೆ.ಜಿ.ಐ.ಡಿ ಸಂಖ್ಯೆ ದಾಖಲಿಸಿ ಪಡೆಯಬಹುದಾಗಿದೆ.

• ತಂತ್ರಾಂಶದಲ್ಲಿ ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಕ್ಲಿಕ್ ಮಾಡಿ ಸಂಬಂದಿಸಿದ ಅಧಿಕಾರಿಯವರನ್ನು ಸಂಪರ್ಕಿಸಬಹುದು. ಕೋರಿಕೆ / ಪರಸ್ಪರ ವರ್ಗಾವಣೆಯ ಅರ್ಜಿಯನ್ನು ಭರ್ತಿಮಾಡುವಾಗ ಗಮನಿಸಬೇಕಾದ ಅಂಶಗಳು ಕೆ.ಜಿ.ಐ.ಡಿ ಪ್ರಥಮ ಪಾಲಿಸಿ ಸಂಖ್ಯೆ : ಕಡ್ಡಾಯವಾಗಿ ಕೆ.ಜಿ.ಐ.ಡಿ ಪ್ರಥಮ ವಿಮಾ ಪಾಲಿಸಿ ಸಂಖ್ಯೆಯನ್ನು ನಮೂದಿಸುವುದು. ಹಾಗೂ ಕೆ.ಜಿ.ಐ.ಡಿ ಪಾಲಿಸಿ ಅವಧಿ ಪೂರ್ಣಗೊಂಡಿದ್ದಲ್ಲಿ ಹಿಂದಿನ ಪ್ರಥಮ ಪಾಲಿಸಿ ಸಂಖ್ಯೆಯನ್ನು ನಮೂದಿಸುವುದು. .

ಅರ್ಜಿ ಸಂಖ್ಯೆ : ಕಂಪ್ಯೂಟರ್ ಜನರೇಟೆಡ್ ಸಂಖ್ಯೆ ಆಗಿದ್ದು ಮುಂದಿನ ಎಲ್ಲಾ ವ್ಯವಹಾರಗಳಿಗೆ ಕೆ.ಜಿ.ಐ.ಡಿ ಸಂಖ್ಯೆಯ ಜೊತೆಯಲ್ಲಿ ಇದನ್ನು ಬಳಸುವುದು.

ಅಭ್ಯರ್ಥಿಯ ಹೆಸರು : ಸೇವಾ ಪುಸ್ತಕದಲ್ಲಿರುವ ಹಾಗೆ ಖಾತ್ರಿ ಪಡಿಸಿಕೊಳ್ಳುವುದು . ಹುದ್ದೆ : ಅಭ್ಯರ್ಥಿಯು ಸಂಬಂದಿಸಿದ ಹುದ್ದೆಯನ್ನು ಖಾತ್ರಿ ಪಡಿಸಿಕೊಳ್ಳುವುದು.

ವಿಷಯ : ನೇಮಕಗೊಂಡ ವಿಷಯವನ್ನು ಖಾತ್ರಿ ಪಡಿಸಿಕೊಳ್ಳುವುದು. ಶಾಲಾ / ಕಛೇರಿಯ ಗ್ರೂಪ್ (Category) ಪ್ರಾಥಮಿಕ ಶಾಲಾ ಶಿಕ್ಷಕರು – ‘ಪ್ರಾಥಮಿಕ’ ಎಂದು , ಪ್ರೌಢ ಶಾಲಾ ಶಿಕ್ಷಕರು,-“ ಪ್ರೌಢ ” ಎಂದು, ಟಿ.ಜಿ.ಟಿ ಶಿಕ್ಷಕರು ಟಿ.ಜಿ.ಟಿ ಎಂದು ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕ / ಗ್ರೂಪ್ ಬಿ ರವರು – ‘ಗ್ರೂಪ್ ಬಿ’ ಎಂದು ನಮೂದಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.

ಲಿಂಗ : ಪುರುಷ/ಸ್ತ್ರೀ ಎಂದು ಖಾತ್ರಿ ಪಡಿಸಿಕೊಳ್ಳುವುದು.

ವಿವಾಹಿತರೇ : ಹೌದು/ಇಲ್ಲ ಎಂದು ಖಾತ್ರಿ ಪಡಿಸಿಕೊಳ್ಳುವುದು.

ಮೊಬೈಲ್ ಸಂಖ್ಯೆ : ಮೊಬೈಲ್ ಸಂಖ್ಯೆಯನ್ನು ಖಾತ್ರಿ ಪಡಿಸಿಕೊಳ್ಳುವುದು.

ಹುಟ್ಟಿದ ದಿನಾಂಕ: ಸೇವಾ ಪುಸ್ತಕದಲ್ಲಿರುವಂತೆ ಖಾತ್ರಿ ಪಡಿಸಿಕೊಳ್ಳುವುದು.

ಸೇವೆಗೆ ಸೇರಿದ ದಿನಾಂಕ : ಸೇವಾ ಪುಸ್ತಕದಲ್ಲಿದ್ದಂತೆ ಖಾತ್ರಿ ಪಡಿಸಿಕೊಳ್ಳುವುದು.

ಖಾಯಂ ಪೂರ್ವ ಸೇವಾವಧಿ ಘೋಷಣೆಯಾದ ದಿನಾಂಕ : ಸೇವಾ ಪುಸ್ತಕದಲ್ಲಿದ್ದಂತೆ ನಮೂದಿಸುವುದು. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಶಾಲೆ/ ಕಾಲೇಜು/ ಕಚೇರಿಯ ಪೂರ್ಣ ವಿಳಾಸವನ್ನು ಈ ಕೆಳಕಂಡಂತೆ ಖಾತ್ರಿ ಪಡಿಸಿಕೊಳ್ಳುವುದು. ಜಿಲ್ಲೆ/ಕಛೇರಿಯ ಹೆಸರು. ತಾಲ್ಲೂಕು/ಕಛೇರಿಯ ಹೆಸರು. ಶಾಲೆ/ ಕಛೇರಿಯ ಹೆಸರು. ಶಿಸ್ತು ಪ್ರಕರಣ ಇದೆಯೇ? : ಹೌದು / ಇಲ್ಲ ಎಂದು ಖಾತ್ರಿ ಪಡಿಸಿಕೊಳ್ಳುವುದು. ಹೆಚ್ಚುವರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರೇ ? ಹೌದು / ಇಲ್ಲ (ಪ್ರಾಥಮಿಕ / ಪ್ರೌಢ ಶಿಕ್ಷಕರಿಗೆ ಮಾತ್ರ) .

ವರ್ಗಾವಣೆ ಬಯಸುವ ಘಟಕ: ಪ್ರಾಥಮಿಕ ಶಾಲಾ ಶಿಕ್ಷಕರು

1. ಕಾರ್ಯಾ ನಿರ್ವಹಿಸುತ್ತಿರುವ ಜಿಲ್ಲೆಯ ಒಳಗೆ ವರ್ಗಾವಣೆ ಬಯಸಿದ್ದಲ್ಲಿ ಘಟಕದೊಳಗೆ / Within Unit ಎಂದು ನಮೂದಿಸುವುದು

2. ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಹೊರಗೆ (ಘಟಕದ ಹೊರಗೆ) ವರ್ಗಾವಣೆಗೆ ಬಯಸಿದ್ದಲ್ಲಿ ಘಟದ ಹೊರಗೆ/Out of Unit ಎ0ದು ನಮೂದಿಸುವುದು

3. ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಹೊರಗೆ ಹಾಗೂ ಕಾರ್ಯನಿರ್ವಹಿಸುತ್ತಿರುವ ವಿಭಾಗದ ಒಳಗೆ ವರ್ಗಾವಣೆ ಬಯಸಿದ್ದಲ್ಲಿ “ಘಟಕದ ಹೊರಗೆ /Out of Unit within Division ವಿಭಾಗದ ಒಳಗೆ ಎಂದು ನಮೂದಿಸುವುದು”.

** ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಸಂದರ್ಭಕ್ಕೆ ಮಾತ್ರ ಅನ್ವಯವಾಗುವಂತೆ, ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಸಂಬಂಧಪಟ್ಟಂತೆ, ‘ಜ್ಯೇಷ್ಠತಾ ಘಟಕ’ ಎಂದರೆ ಆಯಾ ಜಿಲ್ಲೆ ಎಂಬುದಾಗಿ ಪರಿಗಣಿಸತಕ್ಕದ್ದು. ಅಂತರ ಘಟಕ /Out of Unit ವರ್ಗಾವಣೆ ಬಯಸುವ ಶಿಕ್ಷಕರು/ಅಧಿಕಾರಿಗಳು ಯಾವ ವಿಭಾಗದಲ್ಲಿ ವರ್ಗಾವಣೆ ಕೌನ್ಸಿಲಿಂಗ್‌ಗೆ ಹಾಜರಾಗಬೇಕೆಂಬ ಬಗ್ಗೆ ವಿಭಾಗವನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು ಪ್ರೌಢ ಶಾಲಾ ಶಿಕ್ಷಕರು

1. ಕಾರ್ಯಾ ನಿರ್ವಹಿಸುತ್ತಿರುವ ವಿಭಾಗದ ಒಳಗೆ ವರ್ಗಾವಣೆ ಬಯಸಿದ್ದಲ್ಲಿ ಘಟಕದೊಳಗೆ / Within Unit ಎಂದು ನಮೂದಿಸುವುದು 2. ಕಾರ್ಯ ನಿರ್ವಹಿಸುತ್ತಿರುವ ವಿಭಾಗದ ಹೊರಗೆ ವರ್ಗಾವಣೆ ಬಯಸಿದ್ದಲ್ಲಿ ಘಟದ ಹೊರಗೆ ಎಂದು ನಮೂದಿಸುವುದು. ಅಂತರ ಘಟಕ/Out of Unit ವರ್ಗಾವಣೆ ಬಯಸುವ ಶಿಕ್ಷಕರು/ಅಧಿಕಾರಿಗಳು ಯಾವ ವಿಭಾಗದಲ್ಲಿ ವರ್ಗಾವಣೆ ಕೌನ್ಸಿಲಿಂಗ್‌ಗೆ ಹಾಜರಾಗಬೇಕೆಂಬ ಬಗ್ಗೆ ವಿಭಾಗವನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು . ವರ್ಗಾವಣೆ ಬಯಸಿದ ಆಧ್ಯತೆ : ಶಿಕ್ಷಕರು ವರ್ಗಾವಣೆ ಬಯಸುವ ಆದ್ಯತೆಯನ್ನು ಪಟ್ಟಿಯಿಂದ ಆಯ್ಕೆ ಮಾಡುವುದು ಹಾಗೂ ಆದ್ಯತೆ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು PDF ನಮೂನೆಯಲ್ಲಿ Upload/ಅಪ್ಲೋಡ್ ಮಾಡುವುದು. ಆದ್ಯತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ/ಟಿ.ಜಿ.ಟಿ ಶಿಕ್ಷಕರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರ್ಜಿ ಪರಿಶೀಲನೆಯ ಸಂದರ್ಭದಲ್ಲಿ ನೀಡುವುದು. ಪ್ರೌಢ ಶಾಲಾ ಮುಖ್ಯ ಶಿಕ್ಷಕರ ವೃಂದಕ್ಕೆ ಹಾಗೂ ದೈಹಿಕ ಶಿಕ್ಷಕ ಪರಿವೀಕ್ಷರು ವೃತ್ತಿ ಶಿಕ್ಷಣ ಪರಿವೀಕ್ಷಕ ವೃಂದಕ್ಕೆ ಸಂಬಂಧಿಸಿದಂತೆ ಆದ್ಯತೆಯ ಮೂಲ ದಾಖಲೆಗಳನ್ನು ಸಂಬಂಧಿಸಿದ ಉಪನಿರ್ದೇಶಕರಿಗೆ ಅರ್ಜಿ ಪರಿಶೀಲನೆಯ ಸಂದರ್ಭದಲ್ಲಿ ನೀಡುವುದು. ಸೇವಾ ವಿವರ : ಶಿಕ್ಷಕರು ಸೇವಾ ವಿವರವನ್ನು ಕಾರ್ಯ ನಿರ್ವಹಿಸುತ್ತಿರುವ ವೃಂದದಲ್ಲಿ ಮತ್ತು ಈ ವೃಂದಗಳಲ್ಲಿ ಎಲ್ಲಾ ಸ್ಥಳಗಳಲ್ಲಿ ಸಲ್ಲಿಸಿದ ಸೇವೆಯ ವಿವರವನ್ನು ಶಾಲಾವಾರು / ಕಛೇರಿವಾರು ಅನುಕ್ರಮವಾಗಿ ನಮೂದಿಸಲಾಗಿದೆ.

ಶಾಲೆಗಳನ್ನು ಸರ್ಕಾರದ ಆದೇಶ ದಿನಾಂಕ: 14.11.2007 ರಂತೆ ಎ,ಬಿ, ಮತ್ತು ಸಿ ವಲಯಗಳಾಗಿ ವರ್ಗೀಕರಿಸಿದ್ದು, ಈ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ನಲ್ಲಿ ಅಳವಡಿಸಲಾಗಿದೆ. ಹಾಗೂ ಉಪನಿರ್ದೇಶಕರು (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಈ ಮಾಹಿತಿಯನ್ನು ಪಡೆದು ಶಾಲೆಯು ಯಾವ ವಲಯಕ್ಕೆ ಸೇರುತ್ತದೆ ಎಂಬ ಮಾಹಿತಿಯನ್ನು ಖಾತ್ರಿ ಪಡಿಸಿಕೊಳ್ಳುವುದು. ಪೂರ್ಣಗೊಂಡ ವರ್ಷಗಳು : ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ವೃಂದದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿದ ಅವಧಿಯನ್ನು ಪೂರ್ಣಗೊಂಡ ವರ್ಷಗಳಲ್ಲಿ ಪರಿಗಣಿಸಲಾಗುವುದು. ಶಿಕ್ಷಕರು/ಅಧಿಕಾರಿಗಳು ಪ್ರಸುತ್ತ ಕಾರ್ಯನಿರ್ವಹಿಸುತ್ತಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.