ರಿಯಾದ್ : ಕರ್ನಾಟಕ ವೆಲ್ಫೇರ್ ಸೊಸೈಟಿ ವತಿಯಿಂದ ಶಾಂತಿ ಮತ್ತು ಸೌಹಾರ್ದ ಸಂದೇಶ ಕಾರ್ಯಕ್ರಮ

1
102

ಗಲ್ಫ್ ನ್ಯೂಸ್ : ಕರ್ನಾಟಕ ವಲ್ಫೇರ್ ಎಸೋಶಿಯೇಷನ್ ರಿಯಾದ್ ಇದರ ವತಿಯಿಂದ ಇತ್ತೀಚೆಗೆ “ಶಾಂತಿ ಮತ್ತು ಸೌಹಾರ್ದ ಸಂದೇಶ” ಎಂಬ ವಿಷಯದಲ್ಲಿ ರಿಯಾದ್ ನ ಅಲ್ ಮಾಸ್ ರೆಸ್ಟೋರೆಂಟ್ ಹಾಲ್ ನಲ್ಲಿ ವಿಶೇಷ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸಹೋದರ ಇಸ್ಮಾಯೀಲ್ ಖಲೀಲ್ ಅಹ್ಮದ್ ರವರು ಕುರ್ ಆನ್ ಪಠಿಸಿದರು. ಸಂಘಟನೆಯ ಉಪಾಧ್ಯಕ್ಷರಾದ ಮುಹಮ್ಮದ್ ಶಮೀಮ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ ಅತಿಥಿಗಳನ್ನು ಸ್ವಾಗತಿಸಿದರು.


ಈ ಕಾರ್ಯಕ್ರಮದ ಮುಖ್ಯ ಭಾಷಣಕರ್ತರಾಗಿ ಬ್ರ. ಆಬಿದ್ ಸುಹೈಲ್ ರವರು ಪ್ರಸಕ್ತ ಸನ್ನಿವೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜನರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಜೀವನವನ್ನು ಸಾಗಿಸಬೇಕಾದ ಅಗತ್ಯವಿದೆ. ಎಲ್ಲಾ ಮಾನವರು ಏಕದೇವನ ದಾಸರು ಎಂದು ತಿಳಿದುಕೊಂಡು ಪರಸ್ಪರ ಸಹಬಾಳ್ವೆಯ ಜೀವನ ನಡೆಸುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸುಭೀಕ್ಷೆಯನ್ನು ಸಾಧಿಸಬಹುದು ಎಂದು ತಮ್ಮ ವಿಚಾರವನ್ನು ಮಂಡಿಸಿದರು.


ವೇದಿಕೆಯಲ್ಲಿ ಗಣ್ಯರಾದ ಸಹೋದರ ಸಂತೋಷ್ ಶೆಟ್ಟಿ , ನಝೀರ್ ಅಹ್ಮದ್ , ಡಾ. ಶಫೀ ಅಹ್ಮದ್ ಸತ್ತಾರ್, ಮುಹಮ್ಮದ್ ಯೂನುಸ್ ಹಸನ್ ಮತ್ತು ಡಾ. ಸಲ್ಮಾನ್ ಅತ್ತರ್ ಉಪಸ್ಥಿತರಿದ್ದು ಎಲ್ಲರೂ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಂಘಟನೆಯ ಅಧ್ಯಕ್ಷರಾದ ಕೆ. ಮುಹಮ್ಮದ್ ರವರು ಸಮಾರೋಪ ಭಾಷಣವನ್ನು ಮಾಡುತ್ತಾ ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮಾನವನು ಮಾನವೀಯತೆಯೊಂದಿಗೆ ತಮ್ಮ ಜೀವನವನ್ನು ಸಾಗಿಸುತ್ತಾ ಪರಸ್ಪರ ಹೃದಯವನ್ನು ಜೋಡಿಸುವ ಕೆಲಸವನ್ನು ಮಾಡಬೇಕಾದ ಅಗತ್ಯವಿದೆ ಎಂದು ತಮ್ಮ ವಿಚಾರವನ್ನು ಪ್ರತಿಪಾದಿಸಿದರು.
ಬ್ರ. ಮುಹಮ್ಮದ್ ರಿಯಾಝ್ ಧನ್ಯವಾದವಿತ್ತರು. ಮಹ್ ಫೂಝುರ್ರಹ್ಮಾನ್ ರವರು ಸೌಹಾರ್ದ ಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ದೇಶಬಾಂಧವರು ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

1 COMMENT

LEAVE A REPLY

Please enter your comment!
Please enter your name here