ಕುಖ್ಯಾತ ಸರ ಕಳ್ಳರು ಕಾಪು ಪೊಲೀಸರ ಬಲೆಗೆ

624

ವರದಿ: ಶಫಿ ಉಚ್ಚಿಲ

ಕಾಪು : ಇನ್ನಂಜೆ ಗ್ರಾಮದ ಮೂಡುಮನೆಯಲ್ಲಿ ಮಹಿಳೆಯೊರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಳಿಗೆ ಮಾಡಿ ಪರಾರಿಯಾದ ಇಬ್ಬರು ಕಳ್ಳರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಮೂಲದ ಕೃಷ್ಣ ನರಸಿಂಹ ಶಾಸ್ತ್ರಿ (27), ಬಾಗಲಕೋಟೆ ಮೂಲದ ವಿಜಯ ಕುಮಾರ್(21) ಬಂಧಿತರಾಗಿದ್ದಾರೆ.ಇತ್ತೀಚೆಗೆ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಗೋಳಿಕಟ್ಟೆ ಬಳಿಯ ಮೂಡುಮನೆ ನಿವಾಸಿ ಶಾಂತ ಆಚಾರ್ಯ ಎಂಬವರು ತೋಟದಿಂದ ದನಗಳಿಗೆ ಹುಲ್ಲು ತರಲೆಂದ ಹೋದಾಗ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ
ಪರಾರಿಯಾಗಿದ್ದರು. ಈ ಕುರಿತು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ ಇವರು,ಕಾಪು ಸಿಪಿಐ ಮಹೇಶ್ ಪ್ರಸಾದ್ ಇವರ ನೇತ್ರತ್ವದಲ್ಲಿ ತಂಡವನ್ನು ರಚಿಸಲಾಗಿದ್ದು, ಕಟಪಾಡಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಕೃಷ್ಣ ನರಸಿಂಹ ಶಾಸ್ತ್ರಿ ಮಟ್ಟು ಗ್ರಾಮದ ಪಳ್ಲಿಗುಡ್ಡೆಯಲ್ಲಿ ವಾಸವಾಗಿದ್ದು, ಮೂಲತಃ ರಾಯಚೂರು ಜಿಲ್ಲೆಯವನಾಗಿದ್ದಾನೆ. ವಿಜಯ್ ಕುಮಾರ್ ಬಾಗಲಕೋಟೆ ಮೂಲದವನಾಗಿದ್ದು,ಬೆಂಗಳೂರಿನಲ್ಲಿ ವಾಸವಾಗಿರುವುದಾಗಿ ತಿಳಿದುಬಂದಿದೆ.
ಆರೋಪಿಗಳು ಕದ್ದಿದ್ದ 50 ಸಾವಿರ ಮೌಲ್ಯದ ಚಿನ್ನದ ಸರ,30 ಸಾವಿರ ಮೌಲ್ಯದ ಹೊಂಡಾ ಶೈನ್ ಬೈಕ್,3 ಸಾವಿರ ಮೌಲ್ಯದ ಎರಡು ಮೊಬೈಲ್ ಪೋನು, ಹತ್ತು ಸಾವಿರ ನಗದು ಸೇರಿದಂತೆ 93 ಸಾವಿರ ಮೌಲ್ಯದ ಸುತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.