ಲೇಖಕಿ-ಚೈತ್ರಿಕಾ ನಾಯ್ಕ ಹರ್ಗಿ

ಪ್ರಧಾನಿ ಮೋದಿ Statue of Unity ಯನ್ನು ಅನಾವರಣಗೊಳಿಸಲು ಅಷ್ಟು ಎತ್ತರಕ್ಕೆ ಹೋದಾಗ ಸರ್ದಾರ್ ಸರೋವರ್ ಡ್ಯಾಂನ ವಿಶಾಲ ಪ್ರದೇಶದಲ್ಲಿ ಬದುಕುಕಳೆದುಕೊಂಡವರು ಮನೆ ಹೊಲ ಮುಳುಗಿ ಬದುಕೆ ದುರ್ಬರವಾದವರು ಈಗಾದರೂ ಕಂಡರೆ? ಏಕತೆಯ ಮೂರ್ತಿಗಾದರೂ ನರ್ಮದೆಯಡಿ ಮಸಣವಾದ ಬದುಕುಗಳ ಪರಿಚಯ ಸಿಗಬಹುದೇನೊ.

ಸರ್ದಾರ್ ಸರೋವರ್ ಡ್ಯಾಂ 121 ಮೀಟರ್ ನಿಂದ 138.68 ಮೀಟರ್ ಗೆ ಡ್ಯಾಂ ನ ಎತ್ತರವನ್ನು ಹೆಚ್ಚಿಸಿ ಕಳೆದ ವರ್ಷ ತಮ್ಮ ಹುಟ್ಟುಹಬ್ಬದಂದು ಲೋಕಾರ್ಪಣೆ ಮಾಡಿದರು. ಆಗ ಮಾತನಾಡುತ್ತಾ I don’t like thinking small and doing small. When i have support of 1.25 billion people the country, i have ni right to dream small. Hence I decided to build the world’s largest statue in the memory of Sardar Patel which will be twice in the size of the Statue of the Liberty in the US’’ ಮೋದಿಜಿ ಮೂಲಭೂತ ಸೌಕರ್ಯವೆ ಸಿಗದಿರುವಾಗ ‘ಎತ್ತರ ಅಗಲ ದೊಡ್ಡ ಎಲ್ಲೂ ಇಲ್ಲದ’ ಇವೆಲ್ಲ ಇಟ್ಟುಕೊಂಡು ಏನುಮಾಡೋಣ?

ನರ್ಮದಾ ಯೋಜನೆ
1.ಯೋಜನೆಯ ಪ್ರಮುಖ ಉದ್ಧೇಶ ಕೃಷಿ ಮತ್ತು ಕುಡಿಯುವ ನೀರು ಒದಗಿಸುವುದು ಆದರೆ ಸೌರಾಷ್ಟ್ರದ ಕೃಷಿ ಭೂಮಿ ಇಂದಿಗೂ ಒಣಗಿ ನಿಂತಿವೆ. 17,92 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೇವಲ 2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಿದೆ. ಇನ್ನು ರಾಜಸ್ಥಾನಕ್ಕೆ ಎಷ್ಟು ನೀರು ಒದಗಿಸಿದ್ದಾರೆ ಮೋದಿ ಹೇಳಬೇಕು ಮಧ್ಯಪ್ರದೇಶಕ್ಕೆ 56% ಮತ್ತು ಮಹಾರಾಷ್ಟ್ರ 27% ವಿದ್ಯುತ್ ಪಾಲು ಪಡೆದಿದ್ದಷ್ಟೆ ಬಂತು. ರೈತರಿಗೆ ಯಾವ ದೊಡ್ಡಮಟ್ಟದ ಪ್ರಯೋಜನ ಆಗಲಿಲ್ಲ.

2. 2003 ರಲ್ಲಿ ಮೋದಿ ಗುಜರಾತಿನ ಕಚ್ ಪ್ರದೇಶಕ್ಕೆ ಸರ್ದಾರ್ ಸರೋವರದಿಂದ ನೀರನ್ನು ಒದಗಿಸುತ್ತೇನೆ ಎಂದು ಹೇಳುತ್ತಲೇ ಬಂದಿದ್ದು ಈಗ ಆ ವ್ಯಾಪ್ತಿಯಲ್ಲಿ BSF ಸೈನಿಕರಿಗೆ ನೀರು ಒದಗಿಸುವುದನ್ನು ಸೇರಿಸಿಕೊಂಡಿದ್ದಾರೆ. ಕೊನೆಯ ಬಜೆಟ್ ನಲ್ಲಿ ಗುಜರಾತ್ ಸರ್ಕಾರವೂ 4 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುತ್ತದೆ ಎಂದು ಹೇಳಿದ್ಯಾವುದು ನೆರವೇರದೆ ಕೋಕೊಕೋಲಾ ಟಾಟಾ ನ್ಯಾನೋ ಕಾರ್ ಮತ್ತಿತರ ಕಾರ್ಪೊರೇಟ್ ಅದಾನಿ ಅಂಬಾನಿ ಕಂಪನಿಗಳಿಗೆ ಆರು ಕೈಗಾರಿಕಾ ಕೇಂದ್ರಗಳಿಗೆ ನೀರು ಸರಬರಾಜು ಮಾತ್ರ ಸರಾಗವಾಗಿ ನಡೆಯುತ್ತಿದೆ.

3.40,000 ಹೆಕ್ಟೇರ್ 13,835 ಹೆಕ್ಟೇರ್ ಕಾಡು ಸೇರಿದಂತೆ ಮುಳುಗಡೆಯಾಯಿತು. ನಂತರ ಸರ್ಕಾರ ಎಷ್ಟು ಎಕರೆ ಕಾಡು ಬೆಳೆಸಿದೆ? ಎಷ್ಟು ಜನರಿಗೆ ಪುನರ್ವಸತಿ ದೊರೆಯಿತು?

4.ಮಧ್ಯಪ್ರದೇಶ ಗುಜರಾತ್ ಮಹಾರಾಷ್ಟ್ರ 244 ಹಳ್ಳಿ ಮುಳುಗಿವೆ. ಯಾವ ರಾಜ್ಯವೂ ಜನರಿಗೆ ಸರಿಯಾದ ಪುನರ್ವಸತಿ ಕಲ್ಪಿಸಿಕೊಟ್ಟಿಲ್ಲ.. ಗುಜರಾತ್ ಮತ್ತು ಮಹಾರಾಷ್ಟದಲ್ಲಿ 15,000 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾದರೂ ಇನ್ನು ಅವರ ಕೃಷಿ ಭೂಮಿ ಪರಿಹಾರ ಮೂಲಸೌಕರ್ಯ ಸರಿಯಾಗಿ ದೊರೆತಿಲ್ಲ.

5.ಗುಜರಾತ್ ಸರ್ಕಾರ ನಿರ್ಮಿಸಿದ ಕಾಲುವೆಗಳು ಕಳಪೆಯಾಗಿದ್ದು ಇದರಿಂದ ರೈತರ ಹೊಲಗಳಿಗೆ ಮತ್ತು ಹಳ್ಳಿಗೆ ನೀರುನುಗ್ಗಿ ಬೆಳೆನಾಶ ಜನಜೀವನ ಅಸ್ತವ್ಯಸ್ಥ ಕೂಡ ಆಗಿತ್ತು. ಬೇಸಿಗೆಯ ಬೆಳೆಗಳಿಗೆ ನೀರು ಕೊಡಿ ಎಂದು ರೈತರು ಕೇಳಿದರೆ SSRCC ಚೇರ್ ಮನ್ ಎಸ್ ಎಸ್ ರಾಥೋರ್ ಬೇಸಿಗೆ ಬೆಳೆಗೆ ನೀರು ಕೊಡುತ್ತೇವೆ ಎಂದು ಸರ್ಕಾರ ಹೇಳಿಲ್ಲ ಎಂದು ಕೈಗಾರಿಕೆಗೆ ನೀರು ಹರಿಸಿದ್ದಾರೆ.

6. ಬನಸ್ಕಂತಾ ಜಿಲ್ಲೆಯಲ್ಲಿ ಆದ ಪ್ರವಾಹದಿಂದ ಅನೇಕ ಬುಡಕಟ್ಟು ಕುಟುಂಬ ನಾಶವಾದವು.ಭೂಮಿಗಾಗಿ ಅವರ ಹೋರಾಟ ಇಂದಿಗೂ ನಿಂತಿಲ್ಲ. ಪುನರ್ವಸತಿ ಭೂಮಿಗಗಾಗಿ ಹೋರಾಟ ಮಾಡುವವರನ್ನು ಗುಜರಾತ್ ಸರ್ಕಾರ ಮೊನ್ನೆ ಮೊನ್ನೆಯಷ್ಟೆ ಹತ್ತಿಕ್ಕಿದೆ.

7. ಮಧ್ಯಪ್ರದೇಶ ಪುನರ್ವಸತಿ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುತ್ , ಚರಂಡಿ, ಮೇವು, ಆಹಾರ ಪೂರೈಕೆ ಯಾವುದೂ ಇಲ್ಲ.

8. ಉದ್ಘಾಟನಾ ಭಾಷಣದಲ್ಲಿ ಎಷ್ಟೋ ಹೆಣ್ಣುಮಕ್ಕಳು ನೀರು ತರಲು ಕಿಲೋಮೀಟರ್ ದೂರ ಹೋಗುತ್ತಿದ್ದ ಕಾರಣ ಶಾಲೆಗೆ ಹೋಗುತ್ತಿರಲಿಲ್ಲ ಆ ಸಮಸ್ಯೆ ಇನ್ನಿಲ್ಲ. ಬದುಕಲು ಸರಿಯಾದ ಮನೆ ಭೂಮಿ ಮಾಡಲು ಉದ್ಯೋಗವಿಲ್ಲದ ಮೇಲೆ ಅಲ್ಲಿಯ ಹೆಣ್ಣುಮಕ್ಕಳಿಗೆಲ್ಲಿಯ ಶಿಕ್ಷಣ ?

9. ಮಧ್ಯಪ್ರದೇಶದಲ್ಲಿ ಸರಿಯಾಗಿ ಮಳೆಯಾಗದೆ ಡ್ಯಾಂ ನಲ್ಲಿ ನೀರು ಸಂಗ್ರಹವಾಗದೆ ಎತ್ತರ ಹೆಚ್ಚಿಸಿ ಆಗಿದ್ದೇನು ಬಂತು? ಉಳಿದ ನೀರು ರೈತರ ಹೊಲಕ್ಕೆ ನೀರು ಹಾಯದೆ ಕಾರ್ಪೊರೇಟ್ ಕಂಪನಿಗಳಿಗೆ ಹೋದರೆ ರೈತರ ಪಾಡು? ನಿರಾಶ್ರಿತರು? ಪರಿಸರ ನಾಶ?

10. ರೂ.2,989 ಕೋಟಿ ಹಣದಲ್ಲಿ ನಿರಾಶ್ರಿತರ ಏಳ್ಗೆಗೆ ಉಪಯೋಗಿಸಿದ್ದರೆ ಅದೆಷ್ಟು ಜೀವಗಳು ನೆಮ್ಮದಿ ನಿಟ್ಟುಸಿರು ಬಿಡುತ್ತಿದ್ದವೊ.

ಗಾಂಧಿ, ಬಸವಣ್ಣ, ಪಟೇಲ್, ಹನುಮಾನ್, ತಿರುವಳ್ಳವರ್, ಶಿವ ಲೆನಿನ್ ಅಂಬೇಡ್ಕರ್ ಯಾವುದೇ ನಟ ನಟಿ ಪ್ರತಿಮೆಯನ್ನು ಸರ್ಕಾರ ಕಟ್ಟಿಸುವುದು ಅಪ್ರಯೋಜಕ. ಅದರ ಬದಲು ಅವರ ಆದರ್ಶಗಳನ್ನು ಎಲ್ಲಾ ಭಾಷೆಗಳಲ್ಲೂ ಅಚ್ಚುಹಾಕಿಸಿ ಎಲ್ಲಾ ಶಾಲೆ ಕಾಲೇಜಿಗೆ ತಲುಪುವಂತೆ ಮಾಡಲಿ ಜನರಿಗೆ ಕಡಿಮೆ ಬೆಲೆಯಲ್ಲಿ ಪುಸ್ತಕ ಸಿಗವಂತೆ ಮಾಡಲಿ. ಅನ್ನ ವಸತಿ, ಕುಡಿಯುವ ನೀರಿನ ಮೂಲಸೌಕರ್ಯಗಳು ಜನರಿಗೆ ಸಿಕ್ಕಿಲ್ಲದ ಮೇಲೆ ಉಸಿರಿಲ್ಲದ ಪ್ರತಿಮೆಗಳು ಯಾವ ಪುರುಷಾರ್ಥಕ್ಕೆ?

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.