ಕನ್ನಡಿಗರು ದುಬೈ” ಪ್ರಿಶಿಯಸ್ ಪಾರ್ಟೀಸ್ ಇದರ ಸಹಯೋಗದೊಂದಿಗೆ ” ಅರ್ಪಿಸುವ “ಸಂಗೀತ ಸೌರಭ 2019” ಇದೇ ಮಾರ್ಚ್ 29ರಂದು ಸಂಜೆ 5:30ಕ್ಕೆ ಕ್ರೆಡೆನ್ಸ ಹೈ ಸ್ಕೂಲ್,ಅಲ್ ಕುಜ್ ,ದುಬೈ ನಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಸುಮಾರು 7000ಕ್ಕೂ ಹೆಚ್ಚಿನ ಕಾರ್ಯಕ್ರಮವನ್ನು ನಡೆಸಿಕೊಟ್ಟಂತಹ ಕನ್ನಡದ ಖ್ಯಾತ ಹಿನ್ನೆಲೆ ಗಾಯಕಿ ಯಾದ ಶ್ರೀಮತಿ ಸಂಗೀತ ಕಟ್ಟಿ ಮತ್ತು ತಂಡ ಹಾಗು ಸುಮಾರು 2500ಕ್ಕೂ ಹೆಚ್ಚಿನ ವೇದಿಕೆಯಲ್ಲಿ ಗುರಿತಿಸಿಕೊಂಡಂತಹ ಮಿಮಿಕ್ರಿ ಕಲಾವಿದರಾದ ರಮೇಶ್ ಬಾಬು ಮೈಸೂರ್ ರವರು ನಡೆಸಿಕೊಡಲಿದ್ದಾರೆ. ಪ್ರತಿ ವರ್ಷವೂ ಸಂಗೀತ ಸೌರಭ ಕಾರ್ಯಕ್ರಮ ಯುಎಇ ಅನಿವಾಸಿ ಕನ್ನಡಿಗರಿಗೆ ಒಳ್ಳೆಯ ಕಾರ್ಯಕ್ರಮದಿಂದ ಮನೋರಂಜಿಸುತ್ತ ಬಂದಿದೆ. ಈ ಬಾರಿಯೂ ಸಹ ಕಾರ್ಯಕ್ರಮದಲ್ಲಿ ಹೆಚಿನ್ನ ಮನೋರಂಜನೆಯೊಂದಿಗೆ ವಿಜೃಂಭಣೆಯಿಂದ ನಡೆಸಲಾಗುವುದೆಂದು ಕನ್ನಡಿಗರು ದುಬೈ ತಂಡದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ ರವರು ತಿಳಿಸಿದ್ದಾರೆ . ಸಂಗೀತ ಸೌರಭ 2019 ಕಾರ್ಯಕ್ರಮದ ಟಿಕೆಟ್ ದರವು ಕೇವಲ 30 ದಿರ್ಹಾಮ್ ಆಗಿರುತ್ತದೆ.

ಅನಿವಾಸಿ ಕನ್ನಡಿಗರು ಹೆಚ್ಚಿನ ಸಂಖೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಮಂತ್ರಣಿಸುತ್ತಿದ್ದೇವೆ ಎಂದು ಕನ್ನಡಿಗರು ದುಬೈ ತಂಡ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಈ ಸಮಯದಲ್ಲಿ ಮಾಜಿ ಅಧ್ಯಕ್ಷರುಗಳಾದ ಸಾಧನ್ ದಾಸ್ ,ವೀರೆಂದ್ರ ಬಾಬು ,ಉಮಾ ವಿದ್ಯಾದರ್ ,ಸಮಿತಿಯ ಮುಖ್ಯ ಕಾರ್ಯದರ್ಶಿಯಾದ ಚಂದ್ರಕಾಂತ್ ಗೌಡ ಮತ್ತು ಸದಸ್ಯರುಗಳಾದ ಅರುಣ್ ಕುಮಾರ್, ಮಲ್ಲಿಕಾರ್ಜುನ ಅಂಗಡಿ, ದೀಪಕ್ ಸೋಮಶೇಖರ್ , ವಿಜಯ ಶಿವರುದ್ರಪ್ಪ ,ಮಮತಾ, ರಫೀಕ್ ಅಲಿ, ಶ್ರೀನಿವಾಸ್ ಅರಸ್, ವೆಂಕಟರಮಣ ಕಾಮತ್,ವಿನೀತ್ ರಾಜ್ ,ಮಧು ಗೌಡ ಮುಂತಾದವರು ಹಾಜರಿದ್ದರು.

ಟಿಕೆಟ್ಗಳಿಗಾಗಿ ಈ ಕೆಳಗಿನ ಸಂಖೆಗಳಿಗೆ ಸಂಪರ್ಕಿಸಿ 0502433263, 0507576238, 0529929019, 0508892487, 0521128422, 0569916774, 0558223389, 0509520336, 0551576783, 0563481370, 0567012123, 0557334228, 0526451013, 0559460979, 0556215572.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.