ನವದೆಹಲಿ : ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದು ಅದು ನಾಥೂರಾಮ್ ಗೋಡ್ಸೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಸನ್ ವಿರುದ್ಧ ದೆಹಲಿಯಾ ಪಟಿಯಾಲಾ ಮತ್ತು ಸುಪ್ರಿಂ ಕೋರ್ಟ್ ನಲ್ಲಿ ಎರಡು ಪ್ರಕರಣಗಳು ದಾಖಲಾಗಿದೆ.

ಕಳೆದ ಸೋಮವಾರ ಅರವಕ್ಕುರುಚ್ಚಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದ ಕಮಲ ಹಾಸನ್, “ಮುಸ್ಲಿಂ ಜನ ಹೆಚ್ಚಿರುವ ಕಾರಣ ನಾನು ಇದನ್ನು ಹೇಳುತ್ತಿಲ್ಲ. ಮಹಾತ್ಮಾ ಗಾಂಧಿಯ ಪ್ರತಿಮೆ ಮುಂದೆ ನಿಂತು ಈ ಹೇಳಿಕೆ ನೀಡುತ್ತಿದ್ದೇನೆ. ಸ್ವಾತಂತ್ರ್ಯ ಭಾರತದ ಮೊದಲ ಉಗ್ರ ಓರ್ವ ಹಿಂದೂ. ಆತನ ಹೆಸರು ನಾಥೂರಾಮ್ ವಿನಾಯಕ್ ಗೋಡ್ಸೆ” ಎಂದು ಹೇಳಿದ್ದರು.

ಈ ಹೇಳಿಕೆಯಿಂದಾಗಿ ಹಿಂದು ಧರ್ಮದ ಭಾವನೆಗೆ ದಕ್ಕೆಯಾಗಿದೆ ಎಂದು ಬಿಜೆಪಿ ವಕ್ತಾರ ಅಶ್ವಿನಿ ಉಪದ್ಯಾಯ ಸುಪ್ರೀಂ ಕೋರ್ಟ್ ನಲ್ಲಿ ಕಮಲ್ ಹಸನ್ ವಿರುದ್ಧ ಪ್ರಕರಣ ದಾಖಲಾಯಿಸಿದ್ದಾರೆ. ಕಮಲ್ ಹಸನ್ ಹಿಂದುಗಳ ಭಾವನೆಯ ಜೊತೆಗೆ ಆಟವಾಡುತ್ತಿದ್ದಾರೆ, ದೇಶದಲ್ಲಿ ಕೋಮುದ್ವೇಷವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.