ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

195

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.

ದಂಪತಿಗೆ ಸೇರಿದ ಸುಮಾರು 40 ಆಶ್ರಮಗಳ ಮೇಲೆ ದಾಳಿ ನಡೆಸಿರುವ ಐಟಿ ಇಲಾಖೆ ಸುಮಾರು ವಿದೇಶ ಕರೆನ್ಸಿ ಸೇರಿದಂತೆ ಸುಮಾರು 33 ಕೋಟಿ ರೂಪಾಯಿ ಹಣವನ್ನ ವಶಪಡಿಸಿಕೊಂಡಿದ್ದಾರೆ.

ಕಲ್ಕಿ ದಂಪತಿಗಳಿಗೆ ಸೇರಿದ ಒನ್​ನೆಸ್ ಯೂನಿವರ್ಸಿಟಿ, ಸ್ಪಿರಿಚುವಲ್ ಸ್ಕೂಲ್ ಮತ್ತು ಚಿತ್ತೂರ್​ನ ವರದೈಯ್ಯಪಲೆಮ್ ನಲ್ಲಿರುವ ಮುಖ್ಯ ಆಶ್ರಮದ ಮೇಲೆ ಬುಧವಾರ ಐಟಿ ಇಲಾಖೆ ದಾಳಿ ಮಾಡಿದೆ.

ಆಶ್ರಮದ ಒಳಗೆ ಕೆಲಸ ಮಾಡುವವರ ಮೊಬೈಲ್​ಗಳನ್ನ ಮತ್ತು ದಾಖಲೆಗಳನ್ನ ಸೀಜ್ ಮಾಡಿರುವ ಐಟಿ ಅಧಿಕಾರಿಗಳು ಹೊರದೇಶಗಳಿಂದ ಆಶ್ರಮಕ್ಕೆ ಬರುತ್ತಿದ್ದ ಅನುದಾನದ ದಾಖಲೆಗಳನ್ನೂ ಪರಿಶೀಲಿಸಿದ್ದಾರೆ.

ಕಲ್ಕಿ ದಂಪತಿ ಆಶ್ರಮವಷ್ಟೇ ಅಲ್ಲದೆ ಮಗ ಕೃಷ್ಣನಿಗೆ ಸೇರಿದ ಹೈದರಾಬಾದ್​ನ ಮನೆ ಮತ್ತು ಚೆನ್ನೈನ ಆಶ್ರಮಗಳಲ್ಲಿಯೂ ರೈಡ್ ನಡೆದಿದ್ದು ಇಂದು ಕೂಡ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

ಕೃಪೆ – ಆಲ್ ಇಂಡಿಯಾ ನ್ಯೂಸ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.