ಬೆಂಗಳೂರು: ಚಂದ್ರಯಾನ 2 ಯಶಸ್ವಿಯಾಗುವ ನಿರೀಕ್ಷೆಯಲ್ಲಿ ಇಡೀ ದೇಶವೇ ಕುತೂಹಲದಿಂದ ನಿನ್ನೆ ರಾತ್ರಿ ಕಾದು ಕುಳಿತಿತ್ತು. ಆದರೆ, ಚಂದ್ರನ ಮೇಲೆ ಇಳಿಯಬೇಕಾಗಿದ್ದ ವಿಕ್ರಮ್ ಲ್ಯಾಂಡರ್ ಕೊನೇ ಕ್ಷಣದಲ್ಲಿ ಸಂವಹನ ಕಳೆದುಕೊಂಡಿತ್ತು. ಇದರಿಂದ ತಮ್ಮ ಪ್ರಯತ್ನ ವಿಫಲವಾಗಿದ್ದಕ್ಕೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಇಂದು ಕಣ್ಣೀರು ಹಾಕಿದ್ದಾರೆ.

ಚಂದ್ರಯಾನ 2 ವಿಕ್ರಮ್ ಲ್ಯಾಂಡಿಂಗ್ ವೀಕ್ಷಿಸಲು ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರು ಇಸ್ರೋ ಕೇಂದ್ರದಿಂದ ಯಲಹಂಕ ವಾಯುನೆಲೆ ಕೇಂದ್ರಕ್ಕೆ ತೆರಳಿದರು. ದೆಹಲಿಗೆ ಹೋಗಲು ಯಲಹಂಕ ವಾಯುನೆಲೆಗೆ ತೆರಳಿದ್ದ ನರೇಂದ್ರ ಮೋದಿ ನಿರ್ಗಮಿಸುವ ವೇಳೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಭಾವುಕರಾಗಿ ನಿಂತಿದ್ದರು. ತಮ್ಮ ಕನಸು ಈಡೇರದ ಕಾರಣ ಹತಾಶೆಯಿಂದ ನಿಂತಿದ್ದ ಶಿವನ್ ಅವರನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿ ಕೂಡ ಭಾವುಕರಾಗಿ ಶಿವನ್ ಅವರನ್ನು ತಬ್ಬಿ ಹಿಡಿದು ಸಾಂತ್ವನ ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.