ವಿಕ್ರಮ್ ಲ್ಯಾಂಡರನ್ನು ಮತ್ತೊಮ್ಮೆ ಖಚಿತವಾಗಿ ಇಳಿಸುತ್ತೇವೆ – ಇಸ್ರೋ ಮುಖ್ಯಸ್ಥ ಕೆ.ಶಿವನ್

0
117

ದೆಹಲಿ : ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರನ್ನು ಮತ್ತೊಮ್ಮೆ ಖಚಿತವಾಗಿ ಇಳಿಸಲಾಗುವುದು ಎಂಬ ಸುಳಿವನ್ನು ಇಸ್ರೋ ಮುಖ್ಯಸ್ಥ ಕೆ.ಶಿವನ್ ನೀಡಿದ್ದಾರೆ. ದೆಹಲಿ ಐಐಟಿಯ 50ನೇ ನಾಕ್ವೊಕೇಷನ್ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡ ನಂತರ ಸುದ್ದಿಗಾರ ಜತೆ ಮಾತನಾಡಿದಾಗ ಈ ಸುಳಿವು ನೀಡಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರನ್ನು ಮತ್ತೊಮ್ಮೆ ಇಳಿಸುವ ಪ್ರಯತ್ನವನ್ನು ಇಸ್ರೋ ಮಾಡಲಿದೆಯೇ  ಎಂದು ಪ್ರಶ್ನೆಗೆ ಉತ್ತರಿಸಿದ ಕೆ.ಶಿವನ್ವಿ ಕ್ರಮ್ ಲ್ಯಾಂಡರನ್ನು ಲ್ಯಾಂಡಿಂಗ್ ಮಾಡುವ ವಿಚಾರದಲ್ಲಿ ಟೆಕ್ನಾಲಜಿ  ಬಳಕೆಯನ್ನು ಇನ್ನಷ್ಟು ಹರಿತಗೊಳಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಕೆಲಸವನ್ನು ನಾವು ಮುಂದುವರಿಸಿದ್ದೇವೆ. ಹೀಗಾಗಿ ಖಚಿತವಾಗಿ ಮುಂದಿನ ಪ್ರಯತ್ನದಲ್ಲಿ ಯಶಸ್ಸುಗಳಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here