ಉಡುಪಿ – ಇಲ್ಲಿನ ಮೂಡಬೆಟ್ಟುವಿನ ಅಂತರಾಷ್ರ್ಟೀಯ ಕ್ರೀಡಾ ಪಟು ಜ್ಯೋತಿಯವರು ರಸ್ತೆ ಅಪಘಾತದಲ್ಲಿ ಮರಣಹೊಂದಿದ್ದಾರೆ. ಸಹೋದರನೊಂದಿಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹಂಪನ್ನು ತಪ್ಪಿಸುವ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಜ್ಯೋತಿಯವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರವಾದ ಗಾಯವಾಗಿ ಕೆ ಎಂ ಸಿ ಮಣಿಪಾಲದಲ್ಲಿ ಚಿಕಿತ್ಸೆ ದಾಖಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.

ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯಿದ್ದ ಜ್ಯೋತಿ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಕ್ರೀಡೆಯಲ್ಲೇ ಹೆಚ್ಚಿನ ಒತ್ತು ನೀಡಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಪದಕಗಳನ್ನು ಮುಡಿಗೇರಿಸಿದ್ದರು. 2017 ರಲ್ಲಿ ಚೀನಾದಲ್ಲಿ ನಡೆದ ಏಷ್ಯಾನ್ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಹರ್ಡಲ್ಸ್ ಹಾಗೂ ರಿಲೇಯಲ್ಲಿ ಎರಡು ಪದಕಗಳನ್ನು ಗೆದ್ದಿದ್ದ ಜ್ಯೋತಿ, 2016 ರಲ್ಲಿ ಆಸ್ಟ್ರೇಲಿಯ ದಲ್ಲಿ ನಡೆದ ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದವರು.

ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಪದಕ ವಿಜೇತೆಯಾಗಿದ್ದ ಇವರು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಡೆದ ಹಲವು ಮ್ಯಾರಥಾನ್‌ನಲ್ಲಿಯೂ ಪ್ರಶಸ್ತಿ ಪಡೆದುಕೊಂಡಿದ್ದರು. ಇನ್ನು ಮುಂದಿನ ಸೆಪ್ಟಂಬರ್​ನಲ್ಲಿ ಸ್ಪೇನ್ ದೇಶದಲ್ಲಿ ನಡೆಯಲಿರುವ ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಸಿದ್ಧತೆಯಲ್ಲಿದ್ದ ಜ್ಯೋತಿ ಇಂದು ಅಕಾಲಿಕ ಮರಣವನ್ನಪ್ಪಿದ್ದಾರೆ.

ಇತ್ತೀಚಗಷ್ಟೆ ಅವರ ಸಾಧನೆಯಕುರಿತು ವಿಸೃತವಾದ ವರದಿಯನ್ನು ಪ್ರಕಟಿಸುವ ಬಗ್ಗೆ ಜ್ಯೋತಿಯವರ ಜೊತೆ ಮಾತುಕತೆ ನಡೆಸಿತ್ತು. ಕೋಸ್ಟಲ್ ಮಿರರ್ ಸುದ್ದಿವಾಹಿನಿಯೊಂದಿಗೆ ಆತ್ಮೀಯ ಸಂಭಂದವನ್ನು ಹೊಂದಿದ್ದ ಜ್ಯೋತಿಯವರ ಸಾವಿಗೆ ಕೋಸ್ಟಲ್ ಮಿರರ್ ತಂಡ ಸಂತಾಪ ಸೂಚಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.