ಸಖಿ ಕಾದಂಬರಿ: ಜೊತೆ ಜೊತೆಯಲಿ - ಭಾಗ ೨

ಕಾದಂಬರಿ: ಜೊತೆ ಜೊತೆಯಲಿ – ಭಾಗ ೨

-

ಜಾಹೀರಾತು

ಜಾಹೀರಾತು

ರಚನೆ: ಸ್ವಪ್ನ ಹಾವೇರಿ

ಸುನಿಧಿ ಅನೂಪ್,ಸಾಕ್ಧಿ, ಆಕಾಶ್, ಸಂದೀಪ್ ಎಲ್ಲರನೊಮ್ಮೇ ದುರುಗುಟ್ಟಿ ನೋಡಿ ಯಾವನೋ ತಲೆ ಕೆಟ್ಟೋನು ಅಂತಾ ಕಾಣತ್ತೆ stupid ನನ್ನ ಮಗಾ ನನಗೆ ಕಾಯಿನ್ ಹಾಕತಾನೆ

ಸಂದೀಪ್ ‘ಹ್ಮ್ ಹ್ಮ್ಮ್ ಮೇಡಂ ಅವರಿಗೆ ನೋಟ್ ಬೇಕಿತ್ತಾ ಹೋಗಲಿ ಬಿಡು next ಟೈಮ್ ಕುರೋವಾಗ ಹೇಳು ಆಕಾಶ್ ಒಂದು ಬೋರ್ಡ್ ತಗೊಂಡು ಬಂದು ಕೊಡತಾನೆ ಇಲ್ಲಿ ಚಿಲ್ಲರೆ ಗೆ ಅವಕಾಶವಿಲ್ಲಾ ಅಂತ ಅವಾಗ ನೋಟ್ ನೇ ಬಿಳತ್ತೆ ಡೋಂಟ್ ವರಿ ಅಂತ ಸುನಿಧಿ ಮಾಡಕೊಂಡ ಅವಾಂತರಕ್ಕೆ ಅವಳನ್ನ ಕಾಲೇಳೆದು ಕೊಂಡು ಒಬ್ಬರನ್ನೊಬ್ಬರು ಛೇಡಿಸಿ ಕೊಳ್ಳುತ್ತಾ ತಮ್ಮ ತಮ್ಮ ಮನೆ ಸೇರಿ ಕೊಳ್ಳುತ್ತಾರೆ…….

ಮನೆಗೆ ಬಂದ ಸುನಿಧಿ ಯಾರ್ ಅವನು ನನಗೆ ಕಾಯಿನ್ ಹಾಕಿ ಹೋಗತಾನಲ್ಲಾ ಇರಲಿ ಲೈಫ್ ಲಿ ಒನ್ ಟೈಮ್ ಸಿಗಲಿ ಅವನು ಅವನ ಗ್ರಹಚಾರ ಬಿಡಸ್ತಿನಿ ಅಂತ ಮನಸಲ್ಲಿ ಅನ್ಕೊಂಡು ಮಲಗತಾಳೆ
************
ಬೆಳ್ಳಗ್ಗೆ ಸುಮಾರು 8ಗಂಟೆ ಕುಸುಮಾ ಸಾಕ್ಷಿ, ಸುನಿಧಿ, ಅನೂಪ್ ಗೆ ಟೀ ತೆಗೆದುಕೊಂಡು ಅವರ ರೂಂ ಗೆ ಬಂದು ಕೊಡುತ್ತಾ ಏಳಿ ಮಕ್ಕಳೇ ಆಗಲೇ 8 ಗಂಟೆ ಆಯ್ತು ಕಾಲೇಜ್ ಗೆ ಲೇಟ್ ಆಗತ್ತೆ ಅಂತ ಕೂಗಿದಾಗ

ಸಾಕ್ಷಿ ಅಯ್ಯೋ ಅಮ್ಮಾ ಆಗಲೇ 8 ಗಂಟೆ ನಾ ಕಾಲೇಜ್ ಗೆ ಲೇಟ್ ಆಗತ್ತೆ ಅಂತಾ ಗಡಿ ಬಿಡಿ ಇಂದ ಫ್ರೆಶ್ ಅಪ್ ಆಗೋಕೆ ಅಂತ ಹೋದವಳನ್ನ ಕುಸುಮಾ ತಡೆದು ನಿನ್ನ ತಂಗಿ ಜೂನಿಯರ್ ಕುಂಬಕರ್ಣಿ ನ ಎಬ್ಬಿಸು ನಾನು ಅನೂಪ್ ಗೆ ಟೀ ಕೊಟ್ಟು ಬರ್ತೀನಿ ಅಂತ ಕುಸುಮಾ ಅಲ್ಲಿಂದ ಹೊರಡುತ್ತಾರೆ…….
ಸಾಕ್ಷಿ ಸುನಿಧಿ ಸುನಿಧಿ ಅಂತ ಅವಳು ಹೊದ್ದಿರೊ ಬೆಡ್ ಶೀಟ್ ತೆಗೆದು ಅವಳನ್ನ ಎಬ್ಬಿಸೋಕೆ ಮುಂದಾಗುತ್ತಾಳೆ ಆದರೇ ಸುನಿಧಿ ಹೇಯ್ ಹೋಗೆ ನಾನು ಇವತ್ತು ಕಾಲೇಜ್ ಗೆ ಬರಲ್ಲಾ ಅಂತ ಮತ್ತೆ ಮುಸುಕು ಹಾಕಿ ಮಲಗುತ್ತಾಳೆ

ಸಾಕ್ಷಿ ಅವಳು ಅಂದ ಮಾತಿಗೆ ಇವತ್ತು ಎನಾದ್ರು ಭಾನುವಾರ ನಾ ಓದದೇ ಇದ್ದರು ಒಂದು ದಿನಾನು ಕಾಲೇಜ್ ಮಿಸ್ ಮಾಡದೆ ಇರೋ ಇವಳು ಯಾಕೆ ಇವತ್ತು ಬರಲ್ಲಾ ಅಂತಿದಾಳೆ ಅಂತ ಅವಳ ಮೊಬೈಲ್ ತಗೆದು ಡೇಟ್ ನೊಡತಾಳೆ ಇಲ್ಲ ಇವತ್ತು ಸಂಡೇ ಅಲ್ಲಾ ಅಂತ ಕ್ಲಾರಿಟಿ ಮಾಡಕೊಂಡು ಮತ್ತೇ ಸುನಿಧಿ ನ ಎಬ್ಬಿ‌ಸೋಕೆ ಅಂತ ಸಾಕ್ಷಿ ಬರ್ತಾಳೆ

ಸಾಕ್ಷಿ: ಸುನಿಧಿ ಯಾಕೆ ಬರಲ್ಲಾ ಇವತ್ತು ಕಾಲೇಜ್ ಗೆ…..??
ಸುನಿಧಿ: ಹೇಯ್ ಹೋಗೆ ಇವತ್ತು ಎಲೆಕ್ಷನ್ ರಿಸಲ್ಟ್ ಅನನೌನ್ಸ್ ಮಾಡತ್ತಾರೆ ಆ BBA ಡಿಪಾರ್ಟ್ಮೆಂಟ್ ಅವರು ವಿನ್ ಆಗತಾರೆ ಆ ಖುಷಿ ನ ಸೆಲೆಬ್ರೆಟ್ ಮಾಡೋಕೆ ಬರ್ಬೆಕಾ ನಿನ್ ಹೋಗು ನಾನು ಬರಲ್ಲಾ ಆಯ್ತಾ ಅಂತ ಮತ್ತೆ ಮುಸುಗು ಹಾಕಿ ಮಲಗತಾಳೆ

ಸಾಕ್ಷಿ: ಲೇ ಸುನಿಧಿ ನಿನ್ ಬರ್ದೆ ಹೋದ್ರೆ ಕಾಲೇಜ್ ಗೆ ಹೋಗೋಕೆ ಮನಸ್ಸೇ ಬರಲ್ವೆ ಬಾರೆ
ಸುನಿಧಿ: ಅಮ್ಮಾ ತಾಯಿ ಅದೆಷ್ಟು ಸುಳ್ಳು ಹೆಳ್ತಿಯೆ ಮರಾಯತ್ತಿ ನನ್ನ ಬೆಳಗ್ಗೆ ಇಂದ ಸಂಜೆ ವರೆಗೂ ನೀವ ನಾಲ್ಕೂ ಜನ ಆದೇಷ್ಟು ಗೋಳು ಹೋಯ್ಕೊತಿರ ನೆನಪು ಮಾಡಕೊ ಇವಾಗ ನಾನು ಬರಲ್ಲಾ ಅಂದ್ರೆ ನಿನಗೆ ಬೇಜಾರ್ ಆಗತ್ತಾ……?????
ಸಾಕ್ಷಿ: ಮುಖ ಉದುಸ್ಕೊಂಡು ತಾನು ರೆಡಿ ಆಗೋಕೆ ಅಂತ ಬೆಡ್ ಇಂದ ಎದ್ದು ಹೊರಟೊಳನ್ನ ತಡೆದು
ಅಮ್ಮಾ ನನ್ನ ಮುದ್ದು ಅಕ್ಕನಿಗೆ ಅದೆಷ್ಟು ಬೇಗ ಕೋಪ ಬರತ್ತೆ…..!!!! ಅಂತ ಅವಳ ಕೆನ್ನೆ ಸವರಿ ಬರ್ತೀನಿ ಕಣೆ ಡೋಂಟ್ ವರಿ ನಿನಗೆ ಬೇಜಾರ್ ಆಗಬಾರದು ಅನ್ನೋದಕ್ಕಾದ್ರೂ ಬರ್ತೀನಿ ಆಯ್ತಾ ಅಂತ ಅವ್ಳಗಿಂತ ಮುಂಚೆ ನೇ ಟವಲ್ ತಗೊಂಡು ಸಾಕ್ಷಿ ಗೆ ಬೈ ಹೇಳಿ ಬಾತ್ ರೂಂ ಸೆರ್ಕೊತಾಳೆ

ಸಾಕ್ಷಿ: “ಲೇ ಕಪ್ಪೆರಾಣಿ ನೀರು ಸಿಕತ್ತು ಅಂತ ಅಲ್ಲೇ ಸೆಟ್ಲ್ ಆಗ್ಬೇಡಾ ಬೇಗ ಬಾ ನಾನು ರೆಡಿ ಆಗ್ಬೇಕು ಅಂತ ಕೂಗಿ ಹೇಳಿ ಒಳ್ಳೆ ಮಗು ಥರಾ ಆಡತಾಳೆ ಅಂತ ನಕ್ಕು ತಾನು ರೆಡಿ ಆಗೋಕೆ ಹೊಗ್ತಾಳೆ”

ಮಂಜುನಾಥ್ ಕುಸುಮಾ ಗೆ ಏನೆ ಟೈಮ್ 9 ಆಗೋಕೆ ಬಂತು ಎಲ್ಲಿ ನಿನ್ನ ಮಕ್ಕಳು ಅಂತ ಕುಸುಮಾ ನ ಕೇಳಿದಾಗ ಸುನಿಧಿ ಅಪ್ಪ ಅಂತ ಬಂದು ಡೈನಿಂಗ್ ಟೇಬಲ್ ಮೇಲೆ ಕೂತು ಅಮ್ಮ ಬಡಿಸಮ್ಮ ತಿಂಡಿ ನ ಲೇಟ್ ಆಗತ್ತೆ ಅಂತ ಅಮ್ಮ ನ ಮುಖ ನೋಡಿದಾಗ ಕುಸುಮಾ ಕಣ್ಣಲ್ಲೇ ಸಾಕ್ಷಿ ಅನೂಪ್ ಎಲ್ಲಿ ಅಂತ ಕೇಳಿದಾಗ ಸಾಕ್ಷಿ ತನಗೆ ಗೊತ್ತಿಲ್ಲಾ ಅನ್ನೋ ಥರ ತಲೆ ಆಡಿಸ್ತಾಳೆ

ಮಂಜುನಾಥ್ ಕುಸುಮಾ ನೀನು ಮಕ್ಕಳಿಗೆ ಶಿಸ್ತು ಕಲ್ಸಿಲ್ಲಾ ನಾನು ಬೈದು ಕಲ್ಸೋಕು ನೀನು ಅವರನ ವಹಿಸ್ಕೊಂಡು ಬರ್ತಿಯಾ ಅಂತ ಕುಸುಮಾ ನ ತರಾಟೆಗೆ ತಗೋತಿರೋದನ್ನ ದೂರದಿಂದ ನೋಡಿದ ಅನೂಪ್ ಸಾಕ್ಷಿ ಸುನಿಧಿ ನಮ್ಮ ಬಗ್ಗೆ ಅಪ್ಪನ ಹತ್ರ ಪಿನ್ ಮಾಡಿದ್ದಾಳೆ ಅಂತ ತಿಳ್ಕೊಳೋದು ಲೇಟ್ ಆಗಲ್ಲಾ (ಮಂಜುನಾಥ್ ಬ್ಯಾಂಕ್ ಮ್ಯಾನೇಜರ್ ಸ್ವಲ್ಪಾ ಶಿಸ್ತಿನ ವ್ಯಕ್ತಿ)
ಹೆದರಿಕೆ ಇಂದಾನೆ ಡೈನಿಂಗ್ ಟೇಬಲ್ ಗೆ ಬಂದ ಸಾಕ್ಷಿ ಅನೂಪ್ ನನ್ನು ಶಿಸ್ತಿನ ಬಗ್ಗೆ ಸ್ವಲ್ಪಾ ಬೈದು ಸುನಿಧಿ ನೋಡಿ ಕಲ್ಕೋಳಿ ಅಂತ ಅಂದಾಗ ಸಾಕ್ಷಿ ತಿಂಡಿ ನೆತ್ತಿಗೆ ಹತ್ತತ್ತೆ

ಸುನಿಧಿ ಪಪ್ಪಾ ನೀಟಾಗಿ ಇನ್ನೊಂದ್ ಸಲ ಸರಿಯಾಗಿ ಹೇಳಿ ಇವರಿಬ್ಬರು ತುಂಬಾ ಸೋಬೆರಿಗಳು ಬೇಗಾ ಎಳೊದೇ ಇಲ್ಲಾ ಅಂತಾಳೆ ಅಂದಾಗ ಅನೂಪ್ ಬಾ ಹೊರಗಡೆ ಇದೆ ನಿನಗೆ ಅನ್ನೋ ಥರ ಸನ್ನೆ ಮಾಡ್ತಾನೆ

ಮಂಜುನಾಥ್ ಸರಿ ಸರಿ ಬೇಗ ಬೇಗ ರೆಡಿ ಆಗಿ ಹೊರಡಿ ಅಂತ ಮಂಜುನಾಥ್ ತಮ್ಮ ಕೆಲಸಕ್ಕೆ ಹೋಗಲು ರೆಡಿ ಆಗ್ತಾರೆ

ಸುನಿಧಿ ಬಂದ ತಕ್ಷಣ ಅನೂಪ್ ಅವಳ ಕಿವಿ ಹಿಡಿದು ಹೇಯ್ ಬಾಯ್ಬಡಕಿ ಅತ್ತೆ ನಿನಗೆ ಸುನಿಧಿ ಅಂತ ಮುದ್ದಾದ ಹೆಸರು ಇಡೋದು ಬಿಟ್ಟು ಶಾಂತಮ್ಮಾ ಅಂತ ಇಡಬೆಕಿತ್ತು ಅವಾಗ್ಲಾದ್ರೂ ತೆಪ್ಪಗೆ ಇರತಿದ್ದೋ ಹೇಗೆ ಮಾವ ನ ಹತ್ರಾ ನಮಗೆ ಫಿಟ್ಟಿಂಗ್ ಇಡತಿಯ ಅಂತ ಕೆಳತಾ ಇದ್ದರೆ ಸುನಿಧಿ plz ಕಣೋ ತಪ್ಪಾಯ್ತು ಬಿಡೋ ಅಂತ ಅವನೆದ್ರು ಕಿವಿ ಹಿಡಿದು ಕೊಂಡು ನಿಲ್ಲತಾಳೆ

ಅನೂಪ್ ಸಾಕ್ಷಿ ನಡಿ ನಡಿ ಲೇಟ್ ಆಯ್ತು ಅಂತ ಸುನಿಧಿ ನ ಕರೆದು ಕೊಂಡು ದಾರೀಲಿ ಆಕಾಶ್ ಸಂದೀಪ್ ನ ಕರೆದು ಕೊಂಡು ಕಾಲೇಜ್ ದಾರಿ ಹಿಡಿತಾರೆ

ಬೆಳಗ್ಗೆ ಸುಮಾರು 10:30 ಕಾಲೇಜ್ ಮೈಕ್ ಇಂದ ಆ ಕಾಲೇಜ್ ನ ಕನ್ನಡ ಪ್ರಾಧ್ಯಾಪಕರು ಪ್ರಿಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಎಲ್ಲರು ಆಡಿಟೊರಿಯಂ ಗೆ ಬರಬೇಕಾಗಿ ವಿನಂತಿ ಅಂದಾಗ ಕೆಲವೇ ನಿಮಿಷದಲ್ಲಿ ಎಲ್ಲರೂ ಬಂದು ಅಲ್ಲಿ ಜಮಾಯಿಸ್ತಾರೆ

ಆ ಕಾಲೇಜ್ ನ ಕನ್ನಡ ಪ್ರಾಧ್ಯಾಪಕರು ಈ ಸಭೆಯ ಕೇಂದ್ರ ಬಿಂದುಗಳಾದ ಪ್ರೀಯ ವಿದ್ಯಾರ್ಥಿಗಳೇ ನಿನ್ನೆ ನಡೆದ ಮತದಾನದ ಪ್ರಕ್ರಿಯೆಯ ರಿಸಲ್ಟ್ ಅನನೌನ್ಸ್ ಮಾಡಬೇಕು ಅಂತ ಅವರ ಭಾಷಣ ಮುಗಿಸಿ ರಿಸಲ್ಟ್ ಶೀಟ್ ನ ಪ್ರಿನ್ಸಿಪಿಲ ಕೈ ಗೆ ಇಡತಾರೆ

ಪ್ರಿನ್ಸಿಪಿಲ ಈ ಚುನಾವಣೆ ಯಲ್ಲಿ 25 ಮತಗಳ ಅಂತರದಲ್ಲಿ BBA ಕಾಲೇಜ್ ನ ವಿದ್ಯಾರ್ಥಿ “ಸಮರ್ಥ್” ವಿನ್ ಆಗಿದ್ದಾರೆ ಅಂತ ಸಮರ್ಥ್ ನ ಸ್ಟೇಜ್ ಮೇಲೆ ಕರೀತಾರೆ ಇವಾಗ ಸಾಕ್ಷಿ, ಸಂದೀಪ್, ಅನೂಪ್, ಆಕಾಶ್,ಸುನಿಧಿ ಎಲ್ಲರ ಗಮನ ಆ “ಸಮರ್ಥ್ ಅನ್ನೋ ಹೆಸರಿನಕಡೆಗೆ

ಸುನಿಧಿ ಸ್ಟೇಜ್ ಕಡೆ ಬರುತ್ತಿರುವ ಸಮರ್ಥ್ ನೋಮ್ಮೆ ನೋಡಿ ಇವನು ಕಾಲೇಜ್ ಗೆ ಬರ್ತಾನೋ ಅಥವಾ ಯಾವದಾದ್ರು ಫ್ಯಾಷನ್ ಶೋ ಗೆ ಬರ್ತಿದಾನೊ ಈ ರೇಂಜ್ ಗೆ ರೆಡಿ ಆಗಿ ಬರ್ತನಲ್ಲಾ ಅಂತ ಮನಸಲ್ಲೇ ಅನ್ಕೊಂಡು ಸುಮ್ಮನೆ ಕುರುತ್ತಾಳೆ

ಆ ಕಾಲೇಜ್ ನ ಪ್ರಿನ್ಸಿಪಲ್: ಪ್ರತಿ ವಿಭಾಗದ CR ಗಳು ಮತ್ತು ಸ್ಪರ್ಧಿ ಗಳು ಬಂದು ನಿಮ್ಮ ಗೆಳೆಯನಿಗೆ ಶುಭಕೋರಿ ಅಂತ ಎಲ್ಲಾ ವಿಭಾಗದ CR ಮತ್ತು ಸ್ಪರ್ಧಿಗಳನ್ನು ಸ್ಟೇಜ್ ಮೇಲೆ ಕರೀತಾರೆ ಎಲ್ಲ ಕ್ಷಣ ಮಾತ್ರದಲ್ಲೆ ಸ್ಟೇಜ್ ಕಡೆ ಬರ್ತಾರೆ

((ಸಮರ್ಥ್ ರದ್ದು ಚಿಕ್ಕ ಕುಟುಂಬ ಸಮರ್ಥ್ ಅವರ ಅಣ್ಣಾ ಸುಶಾಂತ್ ಇಬ್ಬರು ತಾಯಿ ಇಲ್ಲದ ಮಕ್ಕಳು, ಅವ್ರ ತಂದೆ ವಿಶ್ವನಾಥ ಅಶ್ವಿಕಾ ಗಾರ್ಮೆಂಟ್ಸ್ ಅಂಡ್ ASJ ಕಂಪನಿ owner…..))

ಎಲ್ಲರೂ ಹೇಳ್ತಾರೆ ಲಕ್ಷ್ಮಿ ಮತ್ತು ಸರಸ್ವತಿ ಒಂದೇ ಕಡೆ ಇರಲ್ಲಾ ಅಂತ ಆದರೆ ಅದು ಸುಶಾಂತ್ ಮತ್ತು ಸಮರ್ಥ್ ವಿಷಯದಲ್ಲಿ ಸುಳ್ಳಾಗಿತ್ತು……. ಸಮರ್ಥ್ ಮತ್ತು ಸುಶಾಂತ್ ವಿರುದ್ಧ ಸ್ವಭಾವದರು ಸುಶಾಂತ್ ತುಂಬಾ ಸೈಲೆಂಟ್ ಮತ್ತು ಸಾಫ್ಟ್ ಇದ್ದರೆ ಸಮರ್ಥ್ ತುಂಬಾ ರಫ್ ಅವನು ದುಡ್ಡು ಇದ್ದರೆ ಸಾಕು ಜಗತ್ತೇ ತನ್ನ ಹಿಂದೆ ಇರತ್ತೆ ಅಂತ ನಂಬಿರ್ತಾನೆ ಆದರೆ ಸುಶಾಂತ್ ನಂಬಿಕೆ ಪ್ರೀತಿ ವಿಶ್ವಾಸ ಇದ್ದರೆ ಜೀವನದಲ್ಲಿ ನೆಮ್ಮದಿ, ಬರಿ ದುಡ್ಡೇ ಮುಖ್ಯಾ ಅಲ್ಲಾ ಅಂತ ಅನ್ಕೊಂಡಿರೋ ಸುಶಾಂತ್.
ಸುಶಾಂತ್ M. Com ಅದೇ ವರ್ಷ ಮುಗ್ಸಿರತಾನೆ ಅವರ ಅಪ್ಪಾ ಬಿಸಿನೆಸ್ ನೋಡಕೋ ಅಂತ ಎಷ್ಟೆ ಹೇಳಿದ್ರು ಪಪ್ಪಾ ನನಗೆ ಟೀಚಿಂಗ್ ಫೀಲ್ಡ್ ತುಂಬಾ ಇಷ್ಟ plz ಜಸ್ಟ್ 1ಇಯರ್ ಆದರು ಟೀಚಿಂಗ್ ಮಾಡತಿನಿ ಅಂತ ಅವರ ಅಪ್ಪನನ್ನು ಒಪ್ಪಿಸಿರ್ತಾನೆ ಹೀಗೆ ಯಾವದೇ ವಿಷಯದಲ್ಲೂ ಹೋಲಿಕೆ ನೇ ಇರದೇ ಇರೋ ಇವರು ಒಬ್ಬರಿಗೆ ಒಬ್ಬರು ಜೀವಾ ಅನ್ನೋ ಥರ ಇರತಾರೆ ಈ ಸಹೋದರರು))

BA, B. Com, BBA ಕ್ಲಾಸ್ CR ಎಲ್ಲರೂ ಅವನಿಗೆ ವಿಶ್ ಮಾಡೋಕೆ ಅಂತ ಸ್ಟೇಜ್ ಕಡೆ ಬರ್ತಿರ್ತಾರೆ ಹಾಗೆ ಸಾಕ್ಷಿ ಮತ್ತು ಅನೂಪ್ ಕೂಡ ಬರ್ತಾರೆ ಸ್ಟೇಜ್ ಕಡೆ ಹೋಗತಾ ಇರೋ ಸಾಕ್ಷಿ ನಾ ಸುನಿಧಿ ತಡೆದು ನಿನ್ನ ನಾಲ್ಕು ಕಣ್ಣಲ್ಲಿ ಎರಡು ಕಣ್ಣನಾ ನನ್ನ ಕೈ ಲಿ ಇಟ್ಟು ಸ್ಟೇಜ್ ಮೇಲೆ ಹೋಗು ನನ್ನ ಮುದ್ದು ಅಕ್ಕಾ ಕನ್ನಡಕ ಇಲ್ಲದೆ ತುಂಬಾ ಮುದ್ದಾಗಿ ಕಾಣ್ತಾಳೇ ಅಂತ ಸಾಕ್ಷಿ ಎಷ್ಟು ಬೇಡಾ ಅಂದ್ರು ಅವಳ ಕನ್ನಡವನ್ನ ತಾನು ಹಿಡಿದು ಸಾಕ್ಷಿ ನ ಸ್ಟೇಜ್ ಗೆ ಕಳಿಸಿ

ಸಂದೀಪ್ ಗೆ ಲೇ ಸಂದೀಪಾ ಆ ವಿನ್ನರ್ ಸಮರ್ಥ್ ನ ಎಲ್ಲೋ ನೋಡಿನೀ ಅಂದ ಅವಳ ಮಾತಿಗೆ ಸಂದೀಪ್ ನಗುತ್ತಾ ಲೇ ಸುನಿಧಿ ನಾವ್ ಇದೆ ಕಾಲೇಜ್ ಲಿ 1st ಇಯರ್ puc ಇಂದ B. com ಫೈನಲ್ ಇಯರ್ ವರೆಗೂ ಓದಿದಿವಿ ಮೇಬಿ ಇದೆ ಕಾಲೇಜ್ ಅಲ್ಲಿ ಯಾವಾಗ್ಲಾದ್ರೂ ನೊಡಿರ್ತಿಯಾ ಅಂದಿದ್ದಕ್ಕೆ ಅವನ ತಲೆ ಮೇಲೊಂದು ಮೊಟಕಿ “ಇವನಂದ್ರೆ ಇವನೇ ಅಲ್ಲಾ ಇವನ ಥರ ಹೋಲಿಕೆ ಇರೋ ಒಬ್ಬನ್ನ ನೊಡಿದಿನಿ ಬಟ್ ಯಾರು ಅಂತ ನೆನಪು ಆಗತಾ” ಇಲ್ಲಾ ಎಂದು ಬಾಯಲ್ಲಿ ಕೈ ಇಟ್ಟು ತಲೆ ಕರೆದು ಕೊಳ್ಳುತ್ತಾ ಯೋಚನೆ ಮಾಡುತ್ತಾ ಇರುತ್ತಾಳೆ.

ಇಲ್ಲಿ ಸ್ಟೇಜ್ ಮೇಲೆ ಹೋದ ಸಾಕ್ಷಿ ಮತ್ತು ಅನೂಪ್ ಸಮರ್ಥಗೆ ಶುಭಕೊರಲು ಮುಂದಾಗುತ್ತಾರೇ.
ಆದರೇ ಸಮರ್ಥ್ ಅವರನ್ನು ನೋಡಿಯೂ ನೋಡದಂತೆ ಹೋದ ಅವನ ಸ್ವಭಾವ ಸ್ವಲ್ಪ ವಿಚಿತ್ರ ಅನಿಸದೆ ಇರಲಿಲ್ಲ ಅವರಿಗೆ

ಈಗ ವಿನ್ನರ್ ಸ್ಪಿಚ್
ಸಮರ್ಥ್ ಮೈಕ್ ಹಿಡಿದು ‘”king is king always…….
thank you one and all to made my king ….. “‘ಅಂತ ಹೇಳಿ ಬರುತ್ತಾನೆ.

ಸುನಿಧಿ “ನೋಡ್ರೋ ಅವನ್ಗೆ ಎಷ್ಟೊಂದು ಕೊಬ್ಬಿದೆ? ಅಟ್ಲೇಲಿಸ್ಟ್ ಥ್ಯಾಂಕ್ಸ್ ಹೇಳೋ ಅವನ ಮುಖದಲ್ಲಿ ಸ್ವಲ್ಪಾನಾದ್ರು ಧನ್ಯತಾ ಭಾವನೆ ಇದಿಯಾ ನೋಡು ದುಡ್ಡಿದೆ ಅಂತ ಕೊಬ್ಬು ಅವನ ಮುಖದಲ್ಲೆ ಕಾಣತ್ತೆ” ಎಂದು ಸಂದೀಪನಿಗೆ ಹೇಳಿದಾಗ, ಸಂದೀಪ್ “ಹೋಗಲಿ ಬಿಡೇ ನಮಗೆ ಯಾಕೆ ಬೇಕು? ತೆಲೆ ಕೆಡಸ್ಕೊಳ್ಳೋ ವಿಷಯಕ್ಕೆ ತಲೆ ಕೆಡಸ್ಕೊ” ಎಂದು ಸುಮ್ಮನಾಗುತ್ತಾರೆ. ಅಸ್ಟೊತ್ತಿಗೆ ಸ್ಟೇಜ್ ಇಂದ ಕೆಳಗಡೆ ಬಂದ ಸಾಕ್ಷಿ “ಅನೂಪ್ ಕ್ಲಾಸ್ ಗೆ ಹೋಗೋಣ ಲೇಟ್ ಆಗತ್ತೆ” ಎಂದು ಕ್ಲಾಸ್ ಕಡೆ ಹೊರಡುತ್ತಾರೆ

ಇತ್ತ
ಸಮರ್ಥ್ ಫ್ರೆಂಡ್ ಕಿರಣ “ಮಗಾ ತ್ರೀ ಇಯರ್ ಆದಮೇಲೆ ನಮ್ಮ ಕ್ಲಾಸ್ ಗೆ GS ಪೋಸ್ಟ್ ಬಂದಿದೆ ಪಾರ್ಟಿ ಜೋರ್ ಬೇಕು” ಅಂದಾಗ ಸಮರ್ಥ್ ಜೋಶ್ ಇಂದ “ಇವತ್ತು ಇಡೀ ಕ್ಲಾಸ್ ಗೆ ಪಾರ್ಟಿ ಕೋಡಸ್ತಿನಿ ಕ್ಲಾಸ್ ಮುಗಿಲಿ” ಅಂತ ಹೇಳಿ ಕ್ಲಾಸ್ ಗೆ ಹೋಗ್ತಾನೆ.
**********

ಮದ್ಯಾಹ್ನ 2 ಗಂಟೆ ಕ್ಲಾಸ್ ಎಲ್ಲಾ ಮುಗಿಸಿಕೊಂಡು ಹೊರಗೆ ಹೋಗಬೇಕು ಅನ್ನುವಾಗ ಅನೂಪ್ ಆಕಾಶಗೆ “ಇವತ್ತು ಒನ್ ಟು ಫಿಫ್ಟಿ ಅಟ್ಟೆನಡೆನ್ಸ ನಂಬರ್ಸ್ಗೆ ಲೈಬ್ರರಿ ಬುಕ್ಸ್ ಪ್ರವಾಯಿಡ್ ಮಾಡತ್ತಾರೆ ಬರಲ್ವಾ”
ಆಕಾಶ್: ಹೋ ಶೀಟ್ ನನಗೆ ನೆನಪೇ ಇಲ್ಲಾ ನಡಿ ಸಂದೀಪ್ ಅಂತ ಅವನ್ನ ಕರೆದು ಸುನಿಧಿ ಮತ್ತೆ ಸಾಕ್ಷಿಗೆ “ನೀವು ಮನೆ ಕಡೆ ನಡೀರಿ ನಾವ್ ಬರೋದು ಲೇಟ್ ಆಗಬಹುದು” ಎಂದು ಅವರನ್ನ ಮನೆಗೆ ಹೋಗೋಕೆ ಹೇಳಿ ಇವರು ಲೈಬ್ರರಿ ಗೆ ಹೋಗ್ತಾರೆ.

ಇತ್ತ ಸಮರ್ಥ್ ತನ್ನ ಕ್ಲಾಸ್ ಫ್ರೆಂಡ್ಸ್ ಜೊತೆ ಪಾರ್ಟಿ ಗೆ ಹೋರಟವನು ಸಾಕ್ಷಿ ಕಣ್ಣಿಗೆ ಬಿದ್ದ,

ತಕ್ಷಣ ಸಾಕ್ಷಿ ಸುನಿಧಿಗೆ “ಹೇಯ್ ಬಾರೆ ನಮ್ಮ ಕಾಲೇಜ್ GS ಗೆ congratulation ಹೇಳಿ ಬರೋಣ” ಅಂಥಾ ಸಾಕ್ಷಿ ಸುನಿಧಿಯನ್ನ ಕರಿತಾಳೆ….
ಸುನಿಧಿ ಹಣೆ ಉಜ್ಜುತ್ತಾ “ಹೇಯ್ ಲೂಸು ಬೆಳ್ಳಿಗ್ಗೆ ತಾನೇ ಹೇಳದಲ್ಲೆ” ಎಂದಳು ಸಾಕ್ಷಿಯನ್ನ ನೋಡುತ್ತಾ….
ಸಾಕ್ಷಿ “ಅವನು ಬೆಳಗ್ಗೆ ಸರಿ ರೆಸ್ಪೋನ್ಸ್ ಮಾಡಲಿಲ್ಲಾ ಸೊ……..”
ಸುನಿಧಿ: ಸೊ ವಾಟ್……???? congratulation ಹೇಳೋದು ಅಷ್ಟೊಂದು ಇಂಪಾರ್ಟನ್ಟ್ ನಾ…….?
ಸಾಕ್ಷಿ: ನೀನು ಇವಾಗ ಭರ್ತಿಯೋ ಇಲ್ಲೋ ಅಷ್ಟು ಹೇಳು ಸಾಕು ನಿನ್ ಬರ್ದೆ ಹೋದ್ರೆ ನಾನೊಬ್ಬಳೇ ಹೋಗ್ತೀನಿ
ಸುನಿಧಿ: ಬೇಡವೆ ಅವನು ಮಾತಾಡೋ ಸ್ಟೈಲ್ ನೋಡಿದ್ರೆ ತಿಳಿಯುತ್ತೆ ಅವನಿಗೆ ಸಿಕ್ಕಾಪಟ್ಟೆ ಕೊಬ್ಬಿದೆ ಅಂತ
ಸಾಕ್ಷಿ: ಓಕೆ ನಿನ್ ಬರಲ್ವಾ ನಾನು ಹೋಗತೀನಿ ಅಂತ ಸುನಿಧಿ ಮುಂದೆ ಮಾತಾಡೋ ಮೊದಲೇ ಅವಳು ಸಮರ್ಥ್ ಇರೋ ಕಡೆ ಹೋಗಿರುತ್ತಾಳೆ….

ಸಾಕ್ಧಿ: ಹಾಯ್…….
ಸಮರ್ಥ್: who are you……?????
ಸಾಕ್ಷಿ: ನಾನು ಸಾಕ್ಷಿ ಅಂತ B. com ಫೈನಲ್ ಇಯರ್
ಸಮರ್ಥ್: so what…..????
ಸಾಕ್ಷಿ: ನಥಿಂಗ್ ಕಂಗ್ರಾಟ್ಸ್
ಸಮರ್ಥ್: ನಿರ್ಲಕ್ಷ್ಯದ ನಗೆ ಒಂದನ್ನ ಬಿರಿ ಎನು ನನ್ನ ಜೊತೆ ಮಾತಾಡಬೇಕು ನನ್ನ ಫ್ರೆಂಡ್ ಶಿಪ್ ಮಾಡಬೇಕು ಅಂತ ಕ್ರೇಜ್ ಏನು…..? ನಿನ್ನ ಅಂತ middle class ಹುಡುಗೀರು ನಮ್ಮ ಅಂತ ರಿಚ್ ಪೀಪಲ್ ನ ಬುಟ್ಟಿಗೆ ಹಾಕೊಂಡು ಲೈಫ್ ಅಲ್ಲಿ ವೆಲ್ ಸೆಟ್ಟೆಲಡ್ ಆಗಬಹುದಲ್ವ ಅಂತ ತಾನೇ ನಿಮ್ಮ ಅಂತ middle class ಹುಡುಗೀರ ಮೆಂಟಾಲಿಟಿ ನನ್ನ ಜೊತೆ ಮಾತಾಡೋಕೂ ಯೋಗ್ಯತೆ ಬೇಕು ಅಂದಾಗ ಸಾಕ್ಷಿ ಸಾರೀ ಅಂತ ಅಳುತ್ತ ಸುನಿಧಿ ಇರೋ ಕಡೆ ಬರುತ್ತಾಳೆ

ಸಾಕ್ಷಿ ಅಳುತ್ತಾ ಹೂಗುತ್ತಿರೋದನ್ನ ನೋಡುತ್ತಿದ್ದ ಕಿರಣ್
ಕಿರಣ್: ಸಮರ್ಥ್ ನಿನಗೆ ತಲೆ ಸರಿ ಇದ್ದೀಯ??? ಪಾಪ ಅವರು ಏನ್ ಅಂದ್ರೋ ಜಸ್ಟ್ ಒಂದು ಕಂಗ್ರಾಟ್ಸ್ ಹೇಳೋಕೆ ಬಂದ್ರು ಅಷ್ಟೇ ಪಾಪ ಕಣೋ ಅವರು ಕಿರಣ್ ಮಾತನ್ನು ಕೇಳತ್ತಿದ್ದ ಸಮರ್ಥ್ ಹೇಯ್ ಶೇಟ್ ಆಫ್ ಯುವರ್ ಮೌಥ್ ಇನ್ತೋರ ಬಗ್ಗೆ ನನಗೆ ಚೆನ್ನಾಗಿ ಗೊತ್ತು ನೀನು ಸುಮ್ಮನೆ ಇವರ ಬಗ್ಗೆ ಮಾತಾಡಿ ನನ್ನ ಟೈಮ್ ಅಂಡ್ ಮೂಡ್ ವೆಸ್ಟ್ ಮಾಡಬೇಡ got it……!!!! ಲೆಟ್ಸ್ ಗೋ….. ಅಂತ ಮುಂದೆ ನಡಿತಾನೆ

ಸಾಕ್ಷಿ ಅಳು ಮುಖ ನೋಡಿದ ಸುನಿಧಿ ಯಾಕೆ ಏನಾಯ್ತು ಅಂತ ಕೇಳಿದಾಗ ಸಾಕ್ಷಿ ನಡೆದ ವಿಷಯನ ಸುನಿಧಿ ಹತ್ರಾ ಹೇಳಿ ಅಳುತ್ತಾ ನಿಂತಿದ್ದಳು……..!!!!!!

ಮುಂದುವರೆಯುತ್ತದೆ………..

LEAVE A REPLY

Please enter your comment!
Please enter your name here

Latest news

ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ ; ವ್ಯಾಪಕ ವಿರೋಧ

ನವದೆಹಲಿ: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದರು. ಈ ಮಸೂದೆಯು ಸಂವಿಧಾನದ 14 ನೇ ವಿಧಿಯನ್ನು...

ಸಿದ್ಧರಾಮಯ್ಯ ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ರಾಜೀನಾಮೆ!

ಬೆಂಗಳೂರು :ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ...

ಹೂಡೆಯ ಸಾಲಿಹಾತ್ ಶಾಲೆ: ಉಡುಪಿ ಅಂತರ್ ಶಾಲಾ ಮಟ್ಟದ ವಿಜ್ಞಾನ ಮೇಳ

ತೋನ್ಸೆ - ಹೂಡೆಯ ಸಾಲಿಹಾತ್ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಎ.ಜೆ.ಅಕಾಡಮಿ ರಾಯಚೂರು ಹಾಗೂ ಸಾಲಿಹಾತ್ ಶಿಕ್ಷಣ ಸಂಸ್ಥೆ ಇವರುಗಳ ಜಂಟಿ ಆಶ್ರಯದಲ್ಲಿ ಉಡುಪಿ ಅಂತರ್ ಶಾಲಾ...

ಕೊನೆಗೂ ಗೆದ್ದ ರಿಜ್ವಾನ್ ಅರ್ಷದ್; ರೋಶನ್ ಬೇಗ್’ಗೆ ಮುಖಭಂಗ

ಬೆಂಗಳೂರು: ಈ ಬಾರಿ ಶಿವಾಜಿ ನಗರದ ಉಪ ಚುನಾವಣೆ ಬಹಳಷ್ಟು ಕುತೂಹಲ ಹುಟ್ಟಿಸಿತ್ತು. ರೋಶನ್ ಬೇಗ್ ರಿಜ್ವಾನ್ ಅರ್ಷದ್ ಅವರನ್ನು ಸೋಲಿಸುವ ಪಣ ತೊಟ್ಟಿದ್ದರು. ಇದೀಗ...
- Advertisement -

ಕಾಂಗ್ರೆಸ್ ನಾಯಕರೇ ಪಕ್ಷವನ್ನು ಕೆಳಗುರುಳಿಸಿದ್ದಾರೆ – ಜನಾರ್ದನ ಪೂಜಾರಿ

ಮಂಗಳೂರು: ಬಿಜೆಪಿಯ ಗೆಲುವಿನ ಬಗ್ಗೆ ಮೊದಲೇ ಗ್ರಹಿಸಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ್ ಪೂಜಾರಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಕರ್ನಾಟಕ ಉಪಚುನಾವಣೆ ಫಲಿತಾಂಶಗಳ ಕುರಿತು ಪತ್ರಿಕಾಗೋಷ್ಠಿಗಳನ್ನುದ್ದೇಶಿಸಿ...

ಅನರ್ಹರಿಗೆ ಜನ ಮತ; ಬಿಜೆಪಿ ಸರಕಾರ ಭದ್ರ

ಬೆಂಗಳೂರು: ಹದಿನೈದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ನಿರ್ವಹಣೆ ನೀಡಿದ್ದು ಹನ್ನೆರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you