ಸಖಿ ಕಾದಂಬರಿ; ಜೊತೆ ಜೊತೆಯಲಿ - ಭಾಗ ೧

ಕಾದಂಬರಿ; ಜೊತೆ ಜೊತೆಯಲಿ – ಭಾಗ ೧

-

ಜಾಹೀರಾತು

ಜಾಹೀರಾತು

ರಚನೆ: ಸ್ವಪ್ನ, ಎಮ್.ಕಾಮ್ ವಿದ್ಯಾರ್ಥಿನಿ, ಹಾವೇರಿ

ಟೈಮ್ 6 ಗಂಟೆ ಆಗೋಕೆ ಬಂತು ಸುನಿಧಿ, ಸಾಕ್ಷಿ, ಸಂದೀಪ್,ಅನೂಪ್ ಇನ್ನು ಕಾಲೇಜ್ ಗೇಟ್ ಹತ್ರಾನೇ ಕಾಯ್ತಾ ಇದಾರೆ.
ಸುನಿಧಿ: ಲೋ ಸಂದೀಪಾ ಇನ್ನು ಯಸ್ಟೊತ್ತು ಆಗತ್ತೊ….
ಸಂದೀಪ್:ತಡಿಯೆ ಸ್ವಲ್ಪಾ ಇವಾಗ ಆ ವಾಚ್ಮೆನ್ ಹೊರಗೆ ಬರ್ತಾನೆ……
ಅನೂಪ್:ಯಾಕ ಬೇಕು ನಿಮಗೆ ಇದೆಲ್ಲಾ ಸುಮ್ಮನೆ ಇರೋದು ಒಳ್ಳೆದಲ್ವಾ…????

ಸಾಕ್ಷಿ:ಹೌದು ಕಣೇ ಸುನಿಧಿ ಇನ್ನು ಏನು ಟೈಮ್ ಆಗಿಲ್ಲಾ ಇಲ್ಲಿಂದಾ ಬೇಗಾ ಹೋಗೋಣ ಬನ್ನಿ…..
ಸುನಿಧಿ:ಸಾಕು ಬಾಯಿ ಮುಚ್ಚತೀರ ಸ್ವಲ್ಪ…… ಏನ್ ಸತ್ಯ ಹರಿಚಂದ್ರಾ ಸತ್ತ ಮೇಲೆ ಅವನ ದೇಹನಾ ಇವರ ಮನೆ ಮುಂದೆನೆ ತಗೆದುಕೊಂಡು ಹೋಗಿದಾರೆ ಅನಸತ್ತೆ ಅದಿಕ್ಕೆ ನೀವ್ ಈ ಥರಾ ಆಡೋದು. ನೋಡಿ ನಿಮ್ಮಬ್ಬರ ಥರಾ honest ಆಗಿ ಇರೋಕೆ ನನಗಂತೂ ಬರಲ್ಲಾ ಆಯ್ತಾ ಎಂದು ಕೋಪ ಮಾಡ್ಕೊಂಡು ಸೈಡ್ ಗೆ ಹೋಗಿ ನಿಲ್ತಾಳೆ ಸುನಿಧಿ,
ಸಂದೀಪ್ ಲೇ ಸಾಕು ಮಾಡೇ ವಾಚುಮೆನ್ ಬಂದಾ plz ಸುಮ್ಮನಿರಿ ಅಂದಾಗ ಯಲ್ಲಾರು ಕೊಂಚ ಮೌನವಾಗಿ ಆ ವಾಚುಮೆನ್ ಬರೋದೇ ಕಾಯ್ದು ಅವನು ಇನ್ನೇನು ಆಫೀಸ್ ರೂಮ್ ಕೀ ಹಾಕಬೇಕು ಅನ್ನೋ ಟೈಮ್ ಗೆ ಸಂದೀಪ್ ಬಂದು ಅಂಕಲ್ ಇವತ್ತು ನಮ್ಮ್ ಅನೂಪ ನ ಬರ್ತ್ಡೇ ತಗೊಳ್ಳಿ ಸ್ವೀಟ್ ಎಂದಾಗ ಅನೂಪ ನಗುತ್ತಾ ಹೌದು ಹೌದು ಅಂಕಲ್ ಇವತ್ತು ನನ್ನ ಬರ್ತ್ಡೇ ತಗೊಳ್ಳಿ ಎಂದಾಗ
ಆ ವಾಚ್ಮೆನ್ ಎನ್ರೋ? ನನ್ನ ಹತ್ರಾ ನೇ ಮಂಗನ ಆಟ ಮಾಡತಿರಾ ಅವನ ಬರ್ತ್ಡೇ ಇದ್ದರೆ ನೀನು ಯಾಕೆ ಸ್ವೀಟ್ ಕೊಡತಿಯಾ??? ಅವನೇ ಕೊಡಬಹುದಲ್ವಾ ಎಂದಾಗ ಸುನಿಧಿ ಬಂದು ಅಯ್ಯೋ ಅಂಕಲ್ ನೀವ್ ನಮ್ಮನಾ 5 ಇಯರ್ ಇಂದ ನೋಡ್ತಾ ಇದ್ದೀರಾ ನಮ್ಮಲ್ಲಿ ಯಾರದೇ ಬರ್ತ್ಡೇ ಇದ್ರು ನಾವು ಎಲ್ಲರು ಸ್ವೀಟ್ ಕೊಡ್ತಿವಲ್ವಾ ಹೇಳೋ ಅನೂಪಾ ಅಂದಾಗ ಅನೂಪ್ ಹೌದು ಅಂಕಲ್ ಮೊನ್ನೆ ಸಂದೀಪನ ಬರ್ತ್ಡೇ ಇರುವಾಗಲು ಇವಳು ಇದೆ ಥರಾ ಆಡಲಿಲ್ವಾ?
ವಾಚ್ಮೆನ್ “ಹೊಯ್ ಸಮಾಧಾನ ಸಮಾಧಾನ ನಾನು ಕೇಳಿರೊ ಒಂದು ಸಣ್ಣ question ಗೆ ಇಂತಾ long answer ಬೇಕಾ….‌??? ಇದೆ ಥರಾ ಎಕ್ಸಾಮ್ ಲಿ ಕೇಳೋ questions ಗೆ answer ಮಾಡಿದ್ರೆ ಅಲ್ಲನೋಡಿ ಆ ಟಾಪ್ಪೆರ್ ಲಿಸ್ಟ್ ಲಿ ಸಾಕ್ಷಿ ಅನೂಪ್ ಹೆಸರು ಜೊತೆ ನಿಮ್ಮ್ ಹೆಸರು ಬರ್ತಿತ್ತು ಎಂದಾಗ ಸಂದೀಪ್ ಬಿಡಿ ಅಂಕಲ್ ಇವಾಗ ನೀವ್ ನಮ್ಮ್ ಜೊತೆ ಪಾರ್ಟಿ ಸೆಲೆಬ್ರೆಶನ್ ಗೆ ಬರ್ಬೇಕು ಅಂದಾಗ ನಾನು ಯಕಪ್ಪ ನೀವ್ ಹೋಗಿ ಅನ್ನೂಕು ಸಾಕ್ಷಿ plz ಅಂಕೆಲ್ ಬನ್ನಿ ಅಂತಾಳೆ ಹೌದು ಆ ವಾಚುಮೆನ್ ಗೆ ಸಾಕ್ಷಿ ನೋಡಿದ್ರೆ ಅವರ್ ಮಗಳ ತಾರಾ ಕಾಣತಾಳೆ ಅಂತಾ ಅವರ ಸೆಂಟಿಮೆಂಟ್ ಗೊತ್ತಿದ್ದ ಸುನಿಧಿ ಸಾಕ್ಷಿ ಬೇಡಾ ಅಂದ್ರು ಅವ್ಳ್ನ್ ಕರ್ಕೊಂಡು ಬಂದಿರ್ತಾಳೆ ಸಾಕ್ಷಿ ಕರದಿದಕ್ಕೆ ಅವರು ಬರ್ತಿನಮ್ಮ ಕೀ ಹಾಕಿ ಅನ್ನೋವಾಗ ಸುನಿಧಿ ಬಂದು ಅಯ್ಯೋ ಅಂಕಲ್ ಕೀ ಸಂದೀಪಾ ಹಾಕ್ತಾನೆ ನೀವ್ ಬನ್ನಿ ಅಂತಾಳೆ ಅವ್ಳ ಮಾತಿಗೆ ಸಾಕ್ಷಿ ಕೂಡ ಧ್ವನಿ ಕೊಡತಾಳೆ ಸರಿ ಕೀ ಹಾಕಿ ಅದನ್ನ ನನ್ನ ರೂಂ ಲಿ ಇಡು ಅಂತಾ ಸಂದೀಪ್ ಗೆ ಹೇಳಿ ಅವರು ಸುನಿಧಿ ಸಾಕ್ಷಿ ಅನೂಪ್ ಜೊತೆ ಹೋಗ್ತಾರೆ

ಈ ಕಡೆ ಸಂದೀಪ್ ತಾನು ಆನ್ಕೊಂಡ ಹಾಗೆ ಎಲೆಕ್ಷನ್ ಬಾಕ್ಸ್ ನೇಮ್ ಚೇಂಜ್ ಮಾಡಿ ಕೀ ಹಾಕಿ ಅದನ್ನ ವಾಚುಮೆನ್ ಅಂಕಲ್ ರೂಂ ಲಿ ಸೇಫ್ ಆಗಿ ಇಡತಾನೆ ಬಂದು ಅವರ ಸುಳ್ಳು ಪಾರ್ಟಿ ಗೆ ಜಾಇನ್ ಆಗತ್ತಾನೆ ಸುನಿಧಿ ಏನ್ ಆಯ್ತು ಅಂತಾ ಕಣ್ಣಲ್ಲೇ ಸನ್ನೆ ಮಾಡಿ ಸಂದೀಪ್ ನ ಒಮ್ಮೆ ನೋಡಿದಾಗ ಸಂದೀಪ್ ನಾವ್ ಹೋದ ಮೇಲೆ ಕೆಲಸಾ ಸೆಕ್ಚ್ಎಸ್ಸ್ ಅನ್ನೋತರ ಕಾಲರ್ ಮೇಲೆ ಏರಿಸ್ತಾನೆ ಸುನಿಧಿ ಸಂದೀಪ್ ಸಾಕ್ಷಿ ಅನೂಪ್ ಮತ್ತೆ ಆ ವಾಚುಮೆನ್ ಯಲ್ಲಾ ಪಾರ್ಟಿ ಮುಗಿಸಿ ಆ ಹೋಟೆಲ್ ಇಂದ ಕಾಲ್ಕಿಳ್ತಾರೆ ಹೋಗೋವಾಗ ವಾಚುಮೆನ್ ನ ಕಾಲೇಜ್ ಹತ್ರ ಬಿಟ್ಟು ಇವರು ಮನೆ ಕಡೆ ಹೋಗ್ತಾ ಇರುವಾಗಾ
ಲೋ, ಅನೂಪಾ, ಸಂದೀಪ್, ಸಾಕ್ಷಿ ನಾಳೆ ನಡಿಯೋ ಎಲೆಕ್ಷನ್ ಲಿ ನಮ್ಮ್ ಕ್ಲಾಸ್ ಇಂದ ಸಾಕ್ಷಿ ನೇ ವಿನ್ ಆಗ್ಬೇಕು ಇಲ್ಲಾ ಅಂದ್ರೆ ಕಾಲೇಜ್ GS ಪೋಸ್ಟ್ ಅನ್ನಾಯವಾಗಿ ಆ BBA ದವರ ಪಾಲು ಆಗತ್ತೊ ಆಮೇಲೆ ಅವರ ಹೇಳಿದ್ ಥರಾ ನಾವ್ ಕೆಳ್ಕೊಂಡು ಇರ್ಬೇಕ್ ಆಗುತ್ತೆ ಯಾಪ್ಪಾ ನನ್ನ ಇಂದ ಆ imagenation ಕೂಡ ಮಾಡೋಕೆ ಆಗಲ್ಲಾ ಅಂತಾಳೆ…….
ಸಂದೀಪ್ “ಸಾಕು ಮುಚ್ಚೆ ಸ್ವಲ್ಪ ಬಾಯಿನ……. ನಾವೇ ಗೆಲ್ಲೋದು ಕಷ್ಟ ಪಟ್ಟು ಚೇಂಜ್ ಮಾಡಿಲ್ವಾ ಎಲೆಕ್ಷನ್ ಬಾಕ್ಸ್ ನಾ ಅನ್ನೋಕೆ” ಹಮ್ಮ್ ಪಕ್ಕಾ ನಾವೇ ವಿನ್ನರ್ ಆಗೋದು ಅಂತ ಅನೂಪ್ ಅಂದಾಗ ಸಾಕ್ಷಿ ಸುಮ್ಮನಿರೊದು ನೋಡಿ ,
ಸುನಿಧಿ “ಲೆ 4 ಕಣ್ಣು ಯಾಕೆ ಬೇಜಾರ್ ಆಗಿದಿಯಾ?” ಅಂತ ಕೆಳ್ತಾಳೆ ಅದಿಕ್ಕೆ ಪಾಪಾ ಆ ವಾಚುಮೆನ್ ಅಂಕಲ್ ನನ್ನ ಮೇಲೆ ಇಟ್ಟಿರೋ ನಂಬಿಕೆನ ಇವತ್ತು ಮಿಸ್ ಯೂಸ್ ಮಾಡಿಕೊಂಡೆ ಅನ್ಸತಿದೆ ಎಲ್ಲಾ ನಿಮ್ಮಿಂದಾನೆ ಅನ್ನೋ ಅವ್ಳ ಮಾತನ್ನ ಅರ್ಧದಲ್ಲೇ ನಿಲ್ಲಿಸಿದ ಸಂದೀಪ್ ನೋಡು ಸಾಕ್ಷಿ ನಾವ್ ಮಾಡಿದ್ದು ಹೊರಗಡೆ ಬರಲ್ಲಾ ಡೋಂಟ್ ವರಿ ಅನ್ನೋಕು ಸುನಿಧಿ “ಅಲ್ವೇ 3 ಇಯರ್ ಇಂದ ನಮ್ಮ್ b. com ನವರೆ GS ಆಗಿದ್ದಾರೆ ಅದು ಹೇಗೆ ಈ ಸಲ ಬೇರೆಯವರಿಗೆ ಬಿಟ್ಟು ಕೊಡೋದು ಕಷ್ಟಾ ಆಗಲ್ವಾ” ಅಂದಾಗ ಅನೂಪ್ ಕೂಡ ಹೋಗಲಿ ಬಿಡು ಸಾಕ್ಷಿ ಬೇಜಾರ್ ಆಗಬೆಡ ಇವಾಗಲೇ ತುಂಬಾ ಲೇಟ್ ಆಗಿದೆ ಬನ್ನಿ ಮನೆಗೆ ಹೋಗೋಣ ಅನ್ನೋ ಅನೂಪ್ ನ ಮಾತಿಗೆ ಎಲ್ಲರು ಅವರ ಅವರ ಮನೆ ದಾರಿ ಹಿಡಿತಾರೆ…….
***********

ಬೆಳ್ಳೆಗೆ 9 ಗಂಟೆಗೆಲ್ಲಾ ರೆಡಿ ಆಗಿ ಸುನಿಧಿ ಅನೂಪ್ ಸಾಕ್ಷಿ ಸಂದೀಪ್ ಜೊತೆ ಕಾಲೇಜ್ ಗೆ ಬರ್ತಾಳೆ ಕಾಲೇಜ್ ಕನ್ನಡ ಲೆಕ್ಟುರೆರ್ “ಇನ್ನು ಕೆಲವೇ ಕ್ಷಣ ದಲ್ಲಿ ಎಲೆಕ್ಷನ್ ಸ್ಟಾರ್ಟ್ ಆಗತ್ತೆ ಪ್ರಿಯ ವಿದ್ಯಾರ್ಥಿ ಗಳೇ ನಿಮಗೆ ಯಾರು ಯೋಗ್ಯರು ಅನ್ನಿಸ್ತಾರೋ ಅವರಿಗೆ ವೋಟ್ ಮಾಡಿ” ಅಂತ ಹೇಳಿ ಎಲೆಕ್ಷನ್ ಬಾಕ್ಸ್ ನ ತಂದು ವಿದ್ಯಾರ್ಥಿಗಳ ಮುಂದೆ ಇಡ್ತಾರೆ ………
(ಹೌದು ಆ ಕಾಲೇಜ್ ನಲ್ಲಿ ಪ್ರತಿ ವರ್ಷ ಪ್ರತಿ ವಿಭಾಗದಲ್ಲೂ ಜಾಸ್ತಿ ಅಂಕ ತಗೆದು ಕೊಂಡ ವಿದ್ಯಾರ್ಥಿ ಗಳ ನಡುವಲ್ಲಿ ಎಲೆಕ್ಷನ್ ಮಾಡಿ ಅದರಲ್ಲಿ GS ಆಯ್ಕೆ ಪ್ರಕ್ರಿಯೆ ನಡಿಯೋದು b. com ಲಿ ಸಾಕ್ಷಿ 1st ಆದ್ರೆ ಅನೂಪ್ 2nd ಇರ್ತಾನೆ ಇವರು ಇಷ್ಟೊಂದು ತಲೆ ಕೆಡ್ಸ್ಕೊಲ್ಲೋಕೆ ಕಾರಣ b. com ಸೆಕ್ಷನ್ ಸ್ಟೂಡೆಂಟ್ BBA ಗೆ compare ಮಾಡಿದ್ರೆ ಕಡಿಮೆ ಸೊ ಅವರ ಕ್ಲಾಸ್ ವೋಟ್ ನ ನಮ್ಮ ಕಡೆ ಅಟ್ಟಾರಕ್ಟ್ ಮಾಡೋದು ಸಾಧ್ಯನೆ ಇಲ್ಲಾ ಅಂತಾ ಗೊತ್ತಿದ್ದ ಅವರು ಎಲೆಕ್ಷನ್ ಬಾಕ್ಸ್ ನ exchange ಮಾಡಿರ್ತಾರೆ)
ಸುನಿಧಿ ಸಂದೀಪ್ ಅನೂಪ್ ಸಾಕ್ಷಿ ಗೇಟ್ ಹತ್ರ ನಿಂತಿರ್ತಾರೆ…… ಸುನಿಧಿ “ಲೋ ಸಂದೀಪಾ ಪಕ್ಕಾ ನಾವೇ ಕಣೋ ವಿನ್ನರ್” ಅಂದ ಅವಳ ಮಾತಿಗೆ ಹಿಂದೆ ಇಂದ ಯಾರೋ ಹಾ……. ಪಕ್ಕಾ ನಮ್ಮ ಕ್ಲಾಸ್ ಗೆ GS ಪೋಸ್ಟ್ ಫಿಕ್ಸ್ ಅಂದ ಧ್ವನಿಯತ್ತ ಎಲ್ಲರು ಹಿಂದೆ ತಿರುಗಿ ನೋಡ್ತಾರೆ ನೋಡಿದ್ರೆ ಆಕಾಶ್……!!!!!!!

(ಆಕಾಶ್ ಸಂದೀಪ್ ಸುನಿಧಿ ಅನೂಪ್ ಸಾಕ್ಷಿ ಬಾಲ್ಯದ ಗೆಳೆಯರು ಅವರು 1ನೇ ತರಗತಿ ಇಂದ b. com ಫೈನಲ್ ಇಯರ್ ವರೆಗೂ ಜೋತೆ ಗೆ ಓದಿರೋರು…..) ಆಕಾಶ್ ನ ನೋಡಿದ್ದೇ ಸಾಕ್ಷಿ ಆಕಾಶ್ ಹೇಗೆ ಇದೆ ನಿಮ್ಮ ಅಜ್ಜಿ ಹೆಲ್ತ್ ಈವಾಗ ಅನ್ನೋ ಅವಳ ಮಾತಿಗೆ ಪರವಾಗಿಲ್ಲಾ ಕಣೆ……ಇವಾಗ ಹುಷಾರ್ ಇದಾರೆ ನಾನು ನಿನ್ನೆ ನೇ ಬಂದೆ ಬರುವಾಗ ಸುನಿಧಿ ಹೇಳಿದ್ಲು ಇವತ್ತು ಎಲೆಕ್ಷನ್ ಅಂತ ನನ್ನ ತಲೆಲಿ ಒಂದು ಮಾಸ್ಟರ್ ಪ್ಲಾನ್ ಹೋಳಿತು, ಸೊ ನಿನ್ನೆ ಬರುವಾಗ ಕಾಲೇಜ್ ಹತ್ರ ಯಾರು ಇರಲಿಲ್ಲ ಬಂದು ನೋಡ್ತೀನಿ ಗೇಟ್ ಕೂಡ ಓಪನ್ ಆಗೇ ಇತ್ತು. ಸೊ…. ವಾಚ್ಮೆನ್ ಅಂಕಲ್ ನ ನೋಡೋಣ ಅಂತ ಅವರ್ ರೂಂ ಗೆ ಹೋದ್ರೆ ಅವರು ಕೂಡ ಇರಲಿಲ್ಲಾ ಹಾಗೆ ವಾಪಾಸ್ ಬರುವಾಗ ಆಫೀಸ್ ರೂಂ ಕೀ ಕಾಣತು ಹಾಗೆ ಅದನ್ನ ಅಬೆಸ್ ಮಾಡಿ ಎಲೆಕ್ಷನ್ ಬಾಕ್ಸ್ ನ exchange ಮಾಡಿದೆ ಕಣ್ರೋ…. ಅಂದಾಗ ಸಂದೀಪ್ ಅನೂಪ್ ಶಾಕ್ ಆಗಿ ಆಕಾಶ್ ನ ನೋಡತಾ ಇದ್ದರೆ ಸುನಿಧಿ, ಆಕಾಶನ ಬಿಟ್ಟರೆ ಯಾವಾದಾದ್ರು ದೊಡ್ಡ ಕಲ್ಲನ್ನ ಅವನ್ ತಲೆ ಮೇಲೆ ಎತ್ತಕೊ ಲೆವೆಲ್ ಗೆ ಕೋಪ ಮಾಡ್ಕೊಂಡು ಉರಿ ಕಣ್ಣಿನಿಂದ ಅವನ್ ನೋಡತಿರ್ತಾಳೆ…… ಸಾಕ್ಷಿ ಸುಮ್ಮನೆ ಮುಸಿ-ಮುಸಿ ನಗುತ್ತಾ ನಿಂತಿರ್ತಾಳೆ…… ಅವ್ರ ಆ ಬಿಹೆವಿಯರ್ ನೋಡಿ “ಯಾಕ್ರೋ ನಾನು ಮಾಡಿದ ಕೆಲಸದಿಂದ ನೀವ್ ನನ್ನ ಹೊಗಳ್ತಿರ ಅನ್ಕೊಂಡ್ರೇ ಏನ್ ಇದು” ಅನ್ನೋ ಅವನ ಮಾತಿಗೆ ಸುನಿಧಿ ಮಾತಿಗೆ ಇಳಿತಾಳೆ……..
***********

ಸುನಿಧಿ: ಅಯ್ಯೋ ನಿನ್ನ ಯಾವ ದಡ್ಡನನ್ನ ಮಗ ಹೇಳ್ದ ನಿನ್ನಗೆ ಎಲೆಕ್ಷನ್ ಬಾಕ್ಸ್ ಚೇಂಜ್ ಮಾಡೋಕೆ ಅಂತ ಆಕಾಶ್ ಕೂದಲನ್ನ ಹಿಡಿದು ಸುನಿಧಿ ಕೂಗಾಡುತ್ತಾ ತನ್ನ ಕೋಪ ಹೊರಗೆ ಹಾಕ್ತಾ ಇದ್ದರೆ ಆಕಾಶ್ “ಅಯ್ಯೋ ಬಿಡೇ ಮರಾಯತ್ತಿ……. ಬಿಡೇ ನನ್ನ, ಕಪ್ಪೇರಾಣಿ ಯಾವಾಗಲು ವಟ ವಟ ಅನ್ಕೊಂಡು ಜಿವತಿನ್ನಬೆಡಾ ನಿಮ್ಮ್ ಅಕ್ಕ ಸಾಕ್ಷಿ ನೋಡಿ ಕಲ್ತಕೊ…..”

ಅವರ ಕೋಳಿ ಜಗಳನ ನೋಡತಿದ್ದ ಸಂದೀಪ್, ಅನೂಪ್, ಸಾಕ್ಷಿ ಬಂದು ಸುನಿಧಿ ಕೈ ಇಂದ ಆಕಾಶ್ ನಾ ಬಿಡಿಸಿ ಸಾಕ್ಷಿ ಸುನಿಧಿ ಗೆ “ಲೇ ಸಾಕು ಮಾಡು ನಿನ್ನ ಮಂಗನ ಆಟನ??? ಅತಿ ಆಯ್ತು ನಿಂದು ಅನೂಪ್, ಮನೆಗೆ ಹೋದಮೇಲೆ ಪಪ್ಪಾ ಹತ್ರ ಹೆಳೊಣಾ ಇದೆ ಇವಳಿಗೆ ಅವಾಗ”
ಸುನಿಧಿ ಕೋಪದಿಂದ ಹೋಗೆ ಹೆಳ್ಕೊ ಹೋಗು ನಾನು ಹೇಳ್ತಿನಿ………..

ಸಂದಿಪ್ “ಸಾಕ್ ಮಾಡತಿರಾ ಒಬ್ಬರು ಮುಗಸೊದ್ರೊಳಗೆ ಮತ್ತೊಬ್ಬರು ಸ್ಟಾರ್ಟ್ ಮಾಡಿರ್ತಿರಾ ಮುಂದೆ ಏನ್ ಮಾಡಬೇಕು ಅಂತ ನೋಡೋಣ” ಅಂದಾಗ ಆಕಾಶ್ “ಯಾಕ್ರೋ ಈ ಲೆವೆಲ್ ಗೆ ಚಿಂತೆ ಮಾಡತಿರ ಮತ್ತೆ ಎಲೆಕ್ಷನ್ ಬಾಕ್ಸ್ ನ ಚೇಂಜ್ ಮಾಡೋದು ಹೆಗಂದ್ರು ವೋಟ್ ವಾಲ್ಯೂಶೇನ್ ನಾಳೆ ಅಲ್ವಾ…?? ಇವತ್ತು ಮತ್ತೆ ಚೇಂಜ್ ಮಾಡೋಣ ಓಕೆ ನಾ…..????” ಎನ್ನುತ್ತಾನೆ……

ಅವನನ್ನೇ ಉರಿಗಣ್ಣಿನಿಂದ ನೋಡತಿದ್ದ ಸುನಿಧಿ “ಆಫೀಸ್ ರೂಂ ಕೀ ನ ಮತ್ತೆ ನಿಮ್ಮ್ ತಾತಾ ತಗೊಂಡ್ ಬರ್ತಾನಾ?” ಅಂದಿದ್ದಕ್ಕೆ ಸಂದೀಪ್ “ಅವರ್ ತಾತಾ ಯಾಕೆ ನಿಮ್ಮ ಅಕ್ಕ ಸಾಕ್ಷಿ ಇದಾಳಲ್ಲಾ”…… ಎನ್ನುತ್ತಾನೇ….
ಸಾಕ್ಷಿ ತನ್ನ ಕನ್ನಡಕ ಸರಿ ಮಾಡಿ ಕೊಳ್ಳುತ್ತಾ ಕೈ ಮುಗಿದು “ಅಪ್ಪಾ ಸಂದೀಪಾ ಏನ್ ಆದರು ಮಾಡಕೊಂಡು ಸಾಯ್ರಿ ಆದರೆ ನನ್ನ ಮಾತ್ರ ಇದರಲ್ಲಿ ತರಬೇಡಿ plz…….”
ಸಂದೀಪ್: “ಓಕೆ ಓಕೆ ಸಂಜೆ ಕಾಲೇಜ್ ಹತ್ರ ಬನ್ನಿ ಮಾತಾಡೋಣ ಇವಾಗ ಲೇಟ್ ಆಯ್ತು ಬನ್ನಿ ಮನೆಗೆ ಹೋಗೋಣ” ಅಂದ ಮಾತಿಗೆ ಎಲ್ಲರು ಮನೆ ಕಡೆ ಹೆಜ್ಜೆ ಹಾಕುತ್ತಾರೆ…..
*************

ಸಾಕ್ಷಿ ಸುನಿಧಿ ಇಬ್ಬರು ಅವಳಿ ಜವಳಿ ಮಕ್ಕಳು ಅನೂಪ್ ಅವರ ಸೋದರ ಅತ್ತೆ ಮಗ ಅನೂಪ್ ತಂದೆ ತಾಯಿ ಅವನಿಗೆ ಬುದ್ದಿ ಬರುವಮೊದಲೇ ಇಹಲೋಕ ತ್ಯಜಿಸಿದರು. ಅವಾಗಿಂದಲೂ ಮಂಜುನಾಥ್ ಮತ್ತು ಕುಸುಮ ದಂಪತಿಗಳು(ಸಾಕ್ಷಿ ಸುನಿಧಿ ಅಪ್ಪಾ ಅಮ್ಮ) ಅವನ್ನ ತಮ್ಮ ಸ್ವಂತ ಮಗನ ಥರ ಸಾಕಿರುತ್ತಾರೆ….

ಮನೆಗೆ ಬಂದ ಮಕ್ಕಳನ್ನ ಊಟಕ್ಕೆ ಕರೀತಾರೆ ಕುಸುಮ. ಮಂಜುನಾಥ್ ಅನೂಪ್ ಸಾಕ್ಷಿ ಊಟ ಮಾಡ್ತಾ ಇದ್ದರೆ. ಸುನಿಧಿ ಮಾತ್ರ ಟೈಮ್ ಯಾವಾಗ್ 4:30 ಆಗತ್ತೊ ಅಂತ waite ಮಾಡತಾ ತನ್ನ ಊಟ ಮಾಡೋ ಶಾಸ್ತ್ರ ಮುಗಿಸಿ ತನ್ನ ರೂಂ ಒಳಗೆ ಹೋಗಿ ಆಕಾಶ್ ಗೆ ಫೋನ್ ಮಾಡುತ್ತಾಳೆ. ಆ ಕಡೆಯಿಂದ ಆಕಾಶ್ “ಏನೆ???? ಕಪ್ಪೆರಾಣಿ ಮನೆಗೆ ಬಂದ್ರು ನಿನ್ನ ಕಾಟ ತಪ್ಪಲ್ವಲ್ಲೆ” ಅಂದಾಗ ಸುನಿಧಿ “ಹ್ಮ್ಮ್ ತಪ್ಪುತ್ತೆ ನಿನ್ ಮಾಡಿದ ತಪ್ಪಿಗೆ ನೀನೇ ಹೋಗಿ ಅಂಕಲ್ ಹತ್ರ ಆಫೀಸ್ ರೂಂ ಕೀ ಇಸ್ಕೊಂಡು ಬಾಕ್ಸ್ exchange ಮಾಡಬೇಕು 4:30 ಗೆ ಸರಿಯಾಗಿ ನಮ್ಮ ಮನೆಗೆ ನೀನು ಸಂದೀಪ್ ಬನ್ನಿ” ಎಂದು ಹೇಳಿ ಅವನ ಉತ್ತರಕ್ಕೂ ಕಾಯದೆ ಫೋನ್ ಕಟ್ ಮಾಡುತ್ತಾಳೆ.

ಸಂಜೆ 4:30 ಯಾರೋ ಬಾಗಿಲು ಬಡಿದ ಸದ್ದಾಗಿ ಕುಸುಮಾ ಬಂದು ಬಾಗಿಲು ತಗೆದು ಹೋ “ಸಂದೀಪ್ ಆಕಾಶ್ ಬನ್ನಿ ಅಂತ ಅವರನ್ನ ಕರೆದು ಸಾಕ್ಷಿ ಸುನಿಧಿ ಅನೂಪ್ ನನ್ನ ಕರೆಯುತ್ತಾರೆ”. ಸುನಿಧಿ ಖುಷಿ ಇಂದ ಬಂದು ಅನೂಪ್ ನನ್ನ ಕರೆಯಲು ಅವನ ರೂಂಗೆ ಹೋದಳು. ಅನೂಪ್ “ಸಮಾಧಾನ ಸಮಾಧಾನ ಜೀವನದಲ್ಲಿ ಸ್ವಲ್ಪ ಸಮಾಧಾನ ಇರ್ಬೇಕು” ಎನ್ನುವ ಅವನ ಮಾತಿಗೆ ಸುನಿಧಿ “ಹೇಯ್ ನೀನು ಆ ಸಾಕ್ಷಿ ಥರಾ ಕುಯ್ಬೆಡ ಬೇಗ ಬಾ ಲೇಟ್ ಮಾಡಿದ್ರೆ ಸಂದೀಪ್ ಬೈತಾನೆ” ಎಂದು ಅವನನ್ನ ಮತ್ತೆ ಸಾಕ್ಷಿಯನ್ನ ಕರೆದುಕೊಂಡು ಕೆಳಗಡೆ ಬಂದಳು…. ಸಾಕ್ಷಿ ಸುನಿಧಿ ಅನೂಪ್ ಬಂದು ಸಂದೀಪ್ ಮತ್ತು ಆಕಾಶ್ ಎದುರು ಗಡೆ ಕುತರು………

ಸಂದೀಪ್ “ಬನ್ರೋ ಹೋಗೋಣ ಇಲ್ಲಿಂದ, ಕಾಲೇಜ್ ಗೆ ಹೋಗೋಕೆ 1/2 ಬೇಕು” ಅದಕ್ಕೆ ಪ್ರತಿಯಾಗಿ ಸುನಿಧಿ “ಹ್ಮ್ ಬನ್ನಿ ಹೋಗೋಣ” ಎಂದು ಹೊರಡಲು ಅನುವಾದಳು. ಕುಸುಮಾ “ಹೇಯ್ ಎಲ್ಲಿಗೆ ಹೊಗತಾ ಇದಿರಾ????? ಟೀ ಕುಡಿದು ಹೊಗಿವರಂತೆ” ಎಂದಾಗ ಸುನಿಧಿ “ಅಮ್ಮ ಒಳ್ಳೆ ಕೆಲಸಕ್ಕೆ ಹೋಗೋವಾಗ ಎಲ್ಲಿಗೆ ಅಂತ ಕೇಳಿ ಎಲ್ಲಾ ಹಾಳು ಮಾಡಬೆಡಮ್ಮಾ plz…..” ಎಂದು ಮುಖ ಕಿರಿದು ಮಾಡಿ ಕೇಳಿದಳು…..

ಸಾಕ್ಷಿ “ಎನ್ ಊರು ಉದ್ದಾರ ಮಾಡೋ ಕೆಲಸಕ್ಕೆ ಹೋಗತಾ ಇದಾಳ್ ನೋಡು? ಕೆಳ್ಬೇಡ ಅವಳ್ಗೆ ಎಲ್ಲಿಗೆ ಅಂತಾ” ಸಾಕ್ಷಿ ಪಿಸು ಮಾತನ್ನು ಆಲಿಸಿದ ಅನೂಪ್ ಮುಸಿ ಮುಸಿ ನಗೊಕೆ ಶುರು ಮಾಡತಾನೆ. ಅದನ್ನ ನೋಡಿದ ಸುನಿಧಿ “ಅನೂಪ್ ತೆಪ್ಪಗೆ ಇರತಿಯಾ ಸ್ವಲ್ಪ,” ಎಂದು ಮುಂದೆ ಮಾತನಾಡಲು ಹೋದ ಸುನಿಧಿಯನ್ನ ತಡೆದ ಕುಸುಮಾ “ಸ್ವಲ್ಪ ತಡಿರಿ ಟೀ ಮಾಡತಿನಿ ಕುಡಿದು ಹೊಗುವಿರಂತೆ” ಎನ್ನುತ್ತಾರೇ…….

ಟೀ ಕುಡಿದು ಹೋಗೋವರೆಗೂ ಅಮ್ಮ ಬಿಡಲ್ಲ ಅಂತ ಗೊತ್ತಿದ್ದ ಸುನಿಧಿ ಬೇಗ ಟೀ ತಗೋ ಬಾ ಮಾ ಹೋಗ್ಬೇಕು ಅಂದಾಗ ಕುಸುಮಾ ಅಡುಗೆ ಮನೆಗೆ ಹೋಗಿ ಸ್ವಲ್ಪ ಹೊತ್ತಿನ ನಂತರ ಟೀ ತಂದು ಕೊಟ್ಟತಾರೆ ಎಲ್ಲರೂ ಟೀ ಕುಡಿದು ಕಾಲೇಜ್ ಕಡೆ ಮುಖ ಮಾಡತಾರೆ.
**********

ಸಂಜೆ 5:30 ಕಾಲೇಜ್ ಲಿ ವಾಚುಮೆನ್ ಕೂಡ ಇರಲ್ಲಾ ಸುನಿಧಿ ಆಕಾಶ್ ಸಂದೀಪ್ ಕಾಲೇಜ್ ಎಲ್ಲಾ ಹುಡುಕತಾ ಇದ್ದರೆ ಸಾಕ್ಷಿ ಅನೂಪ್ ತಮಗೆ ಸಂಬಂಧ ಇಲ್ಲದೆ ಇರೋ ಥರಾ ಇರತಾರೆ. ತುಂಬಾ ಹುಡುಕಿದ ಮೇಲೆ ವಾಚುಮೆನ್ ಊರಿಗೆ ಹೋಗಿದ್ದಾನೆ ಕೀ ಪ್ರಿನ್ಸಿಪಾಲ್ ಹತ್ರ ಇದೆ ಅಂತ ತಿಳಿದು ಬಂದ ದಾರಿಗೆ ಸುಂಕ ಇಲ್ಲಾ ಎಂದು ಭಾವಿಸಿ…… ಎಲ್ಲರು ಮನೆಗೆ ವಾಪಸ್ ಬರ್ಬೆಕಾದ್ರೆ ದಾರೀಲಿ ಅನೂಪ್ “ಹೇಯ್ ಸಂದೀಪ್ ಸುನಿಧಿ ಎಲ್ಲೋ” ಅಂದಾಗ ಸಂದೀಪ್ “ಹೇಯ್ ಆ ಕಪ್ಪೆರಾಣಿ ಇಷ್ಟೋತ್ತು ನನ್ನ ಜೊತೆ ನೇ ಇದ್ದಳು ಎಲ್ಲಿ? ಅಂತ” ಎಲ್ಲರೂ ಹಿಂದೆ ಹುಡುಕೋಕೆ ಹೋದ್ರೆ ಸುನಿಧಿ ಅವರು ಹೋಗೋ ಕಾಲೇಜ್ ರೋಡ್ ಮೇಲೆ ಕುತಿರ್ತಾಳೆ. ಆಕಾಶ್: “ಹೇಯ್ ಅಲ್ಲನೋಡ್ರೋ……!! ಸುನಿಧಿ……..” ಅಂತ ಸಂದೀಪ್ ಗೆ ತೋರ್ಸಿದಾಗ ಅವ್ಳು ಇರೋ ಕಡೆ ಎಲ್ಲರೂ ಬರ್ತಾರೆ.
ಆಕಾಶ್ ಸುನಿಧಿಯ ಕೈ ಹಿಡಿದು ಗದರುತ್ತಾ “ಇದು ರೋಡ್ ಬಾ….. ನೊಡಿದೋರ್ ನಿನ್ನ ಹುಚ್ಚಿ ಅನ್ಕೋತಾರೆ ಬಾರೆ” ಅಂತಾ ಅವ್ಳ್ನ್ ಎಬ್ಬಿಸೋಕೆ ಬಂದ ಆಕಾಶ್ ನ ಕೈ ಕೊಸರಿ ಹೇಯ್ ಹೋಗು ನಾನೆಲ್ಲಿಗೂ ಬರಲ್ಲಾ ಅಂದ ಅವಳ ಮಾತಿಗೆ.

ಅನೂಪ್ “ಸಾಕ್ಷಿ ಮಾವನಿಗೆ ಹೇಳೋಣ ನಡಿ ಅವಳನ್ನ ಮಾವಾನೆ ಕರ್ಕೊಂಡು ಬರಲಿ ಹೇಯ್ ಸಂದೀಪ್ ಆಕಾಶ್ ನಿಮಗೆ ಮತ್ತೆ ಹೆಳಬೆಕಾ….” ಅಂದಿದಕ್ಕೆ ಎಲ್ಲರೂ ಅಲ್ಲಿಂದ ಹೋಗೋಕೆ ತಯಾರಿ ಆಗತಾರೆ ಅಷ್ಟೋಳಗೆ ಯಾರೋ ಬೈಕ್ ಲಿ ಹೊಗೊವನು ಸುನಿಧಿ ಮುಂದೆ ಒಂದು ರೂಪಾಯಿ ಕಾಯಿನ್ ಹಾಕಿ ನಗುತ್ತಾ ಇನ್ನು ಸ್ವಲ್ಪ ಹೊತ್ತು ಇಲ್ಲೇ ಕೂತರೆ ಒನ್ ಮಂತ್ ಪ್ಯಾಕೆಟ್ ಮನಿ ಕಲೆಕ್ಷನ್ ಜೋರಾಗತ್ತೆ ಎಂದು ತನ್ನ ಬೈಕ್ ವೇಗವನ್ನ ಜಾಸ್ತಿ ಮಾಡಿದ….

ಆ ದುಡ್ಡು, ಅವನು ಆಡಿದ ಮಾತಿಗೆ ಸಿಟ್ಟಿನಿಂದ ಅವನ ಬೈಕ್ ಹಿಂದೆ ಓಡಿ ಸುಸ್ತಾಗಿ ಕೊನೆಗೆ ಅವನಿಗೆ ಸಿಕ್ಕಾಪಟ್ಟೆ ಬೈದುಕೊಳುತ್ತ, ಬಂದು ಸಾಕ್ಷಿ ಅನೂಪ್ ಸಂದೀಪ್ ಆಕಾಶ್ ಜೋತೆ ಆಗುತ್ತಾಳೆ. ಅವ್ಳ ನೋಡಿದ ನಾಲ್ಕು ಜನ ಮುಸಿ ಮುಸಿ ನಗೊಕೆ ಶುರುಮಾಡಿದರು………..

ನಿಮ್ಮ ಅನಿಸಿಕೆ ಮೇಲ್ ಮಾಡಿ: [email protected]

LEAVE A REPLY

Please enter your comment!
Please enter your name here

Latest news

ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ ; ವ್ಯಾಪಕ ವಿರೋಧ

ನವದೆಹಲಿ: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದರು. ಈ ಮಸೂದೆಯು ಸಂವಿಧಾನದ 14 ನೇ ವಿಧಿಯನ್ನು...

ಸಿದ್ಧರಾಮಯ್ಯ ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ರಾಜೀನಾಮೆ!

ಬೆಂಗಳೂರು :ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ...

ಹೂಡೆಯ ಸಾಲಿಹಾತ್ ಶಾಲೆ: ಉಡುಪಿ ಅಂತರ್ ಶಾಲಾ ಮಟ್ಟದ ವಿಜ್ಞಾನ ಮೇಳ

ತೋನ್ಸೆ - ಹೂಡೆಯ ಸಾಲಿಹಾತ್ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಎ.ಜೆ.ಅಕಾಡಮಿ ರಾಯಚೂರು ಹಾಗೂ ಸಾಲಿಹಾತ್ ಶಿಕ್ಷಣ ಸಂಸ್ಥೆ ಇವರುಗಳ ಜಂಟಿ ಆಶ್ರಯದಲ್ಲಿ ಉಡುಪಿ ಅಂತರ್ ಶಾಲಾ...

ಕೊನೆಗೂ ಗೆದ್ದ ರಿಜ್ವಾನ್ ಅರ್ಷದ್; ರೋಶನ್ ಬೇಗ್’ಗೆ ಮುಖಭಂಗ

ಬೆಂಗಳೂರು: ಈ ಬಾರಿ ಶಿವಾಜಿ ನಗರದ ಉಪ ಚುನಾವಣೆ ಬಹಳಷ್ಟು ಕುತೂಹಲ ಹುಟ್ಟಿಸಿತ್ತು. ರೋಶನ್ ಬೇಗ್ ರಿಜ್ವಾನ್ ಅರ್ಷದ್ ಅವರನ್ನು ಸೋಲಿಸುವ ಪಣ ತೊಟ್ಟಿದ್ದರು. ಇದೀಗ...
- Advertisement -

ಕಾಂಗ್ರೆಸ್ ನಾಯಕರೇ ಪಕ್ಷವನ್ನು ಕೆಳಗುರುಳಿಸಿದ್ದಾರೆ – ಜನಾರ್ದನ ಪೂಜಾರಿ

ಮಂಗಳೂರು: ಬಿಜೆಪಿಯ ಗೆಲುವಿನ ಬಗ್ಗೆ ಮೊದಲೇ ಗ್ರಹಿಸಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ್ ಪೂಜಾರಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಕರ್ನಾಟಕ ಉಪಚುನಾವಣೆ ಫಲಿತಾಂಶಗಳ ಕುರಿತು ಪತ್ರಿಕಾಗೋಷ್ಠಿಗಳನ್ನುದ್ದೇಶಿಸಿ...

ಅನರ್ಹರಿಗೆ ಜನ ಮತ; ಬಿಜೆಪಿ ಸರಕಾರ ಭದ್ರ

ಬೆಂಗಳೂರು: ಹದಿನೈದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ನಿರ್ವಹಣೆ ನೀಡಿದ್ದು ಹನ್ನೆರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you