ಪ್ಯಾರೀಸ್: ಪ್ರತಿಷ್ಠಿತ ಇಂಟರ್ ನ್ಯಾಷನಲ್ ಮ್ಯಾನ್ ಬೂಕರ್ ಪ್ರಶಸ್ತಿ ಘೋಷಣೆಯಾಗಿದ್ದು ಒಮನ್ ದೇಶದ ಜೋಕಾ ಅಲ್ಹಾರ್ತಿ ಈ ಸಾಲಿನ ಪ್ರಶಸ್ತಿ ಗಳಿಸಿದ್ದಾರೆ. ಈ ಮೂಲಕ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಪ್ರಪ್ರಥಮ ಅರೆಬಿಕ್ ಲೇಖಕಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.

ಜೋಖಾ ಅವರ “ಸೆಲೆಸ್ಟಿಯನ್ ಬಾಡೀಸ್” ಎಂಬ ಕೃತಿಗೆ ಮ್ಯಾನ್ ಬೂಕರ್ ಪ್ರಶಸ್ತಿ ಲಭಿಸಿದೆ.”ಸೆಬೆಸ್ಟಿಯನ್ ಬಾಡೀಸ್” ಕಾದಂಬರಿಯು ಒಮನ್ ನ ವಸಾಹತುಷಾಹಿ ಪೂರ್ವದ ಇತಿಹಾಸವನ್ನಾಧರಿಸಿದ ಕಥೆಯನ್ನು ಹೊಂದಿದೆ.

ಎಡಿನ್ ಬರ್ಗ್ ವಿಶ್ವವಿದ್ಯಾನಿಕಯದಲ್ಲಿ ಶಾಸ್ತ್ರೀಯ ಅರೆಬಿಕ್ ಕವನಗಳ ಕುರಿತ ಸಂಶೋಧನೆ ಶಿಕ್ಷಣ ಪಡೆದ ಜೋಖಾ ಮಸ್ಕತ್ ನ ಮುಲ್ತಾನ್ ಖಾಬೂಸ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದುವರೆಗೆ ಅರೆಬಿಕ್ ಭಾಷೆಯಲ್ಲಿ ಮುರು ಕಾದಂಬರಿಗಳು ಹಾಗೂ ಒಂದು ಮಕ್ಕಳ ಕೃತಿಯನ್ನು ಲೇಖಕಿ ಪ್ರಕಟಿಸಿದ್ದಾರೆ.
ಮ್ಯಾನ್ ಬೂಕರ್ ಪ್ರಶಸ್ತಿ 50000 ಪೌಂಡ್ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿದ್ದು ನಗದು ಬಹುಮಾನದ ಮೊತ್ತವನ್ನು ಮೂಲ ಲೇಖಕರು ಹಾಗೂ ಅನುವಾದಕರಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.