ನವದೆಹಲಿ : ಜೆಟ್ ಏರ್ವೇಸ್ ನ ಉಪ ಮುಖ್ಯ ಕಾರ್ಯನಿರ್ವಾಹಕ ಮತ್ತು ಹಣಕಾಸು ಅಧಿಕಾರಿ ಅಮಿತ್ ಅಗರರ್ವಾಲ್ ವೈಯಕ್ತಿಕವಾಗಿ ನಿನ್ನೆ ದಿನ ಜೆಟ್ ಏರ್ವೇಸ್ ಸಂಸ್ಥಗೆ ರಾಜಿನಾಮೆ ನೀಡಿದ್ದಾರೆ.

ಜೆಟ್ ಏರ್ವೇಸ್ 1.2 ಶತಕೋಟಿ $ನಷ್ಟು ಸಾಲವನ್ನು ಕಟ್ಟಬೇಕಾಗಿದ್ದು, ಅದರ ಜೊತೆಗೆ ನಿನ್ನೆ ಜೆಟ್ ಏರ್ವೇಸ್ ಷೇರುಗಳು ಶೇ 12 ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕುಸಿದಿದೆ. ಪೂರೈಕೆದಾರರು, ಪೈಲಟ್ಗಳು ಮತ್ತು ತೈಲ ಕಂಪೆನಿಗಳಿಗೆ ಹಣ ನೀಡಬೇಕಿದೆ.ಇದರ ಸಾಲದಾತರು ಏರ್ಲೈನ್ನಲ್ಲಿ ನಿಯಂತ್ರಣದ ಪಾಲನ್ನು ತೆಗೆದುಕೊಂಡಿದ್ದಾರೆ ಮತ್ತು ಪ್ರಸ್ತುತ ತಮ್ಮ ಬಾಕಿಗಳನ್ನು ಮರುಪಡೆದುಕೊಳ್ಳಲು ಪಾಲನ್ನು ಮಾರಾಟ ಮಾಡುವಲ್ಲಿ ನಿರತರಾಗಿದ್ದಾರೆ.

ಅಮಿತ್ ಅಗರ್ ವಾಲ್  ಕಳೆದ 2015ರಿಂದ ಜೆಟ್ ಏರ್ವೇಸ್ ನಲ್ಲಿ ಮುಖ್ಉ ಹಣಕಾಸು ಅಧಿಕಾರಿಯಾಗಿ ಸೇರಿಕೊಂಡಿದ್ದರು. ಇದೀಗ ಜೆಟ್ ಏರ್ವೇಸ್ ಶೇರು ಮಾರುಕಟ್ಟೆಯಲ್ಲಿ 12.44 ರಷ್ಟು ಕುಸಿದಿದೆ ಕಾರಣದಿಂದಾಗಿ ರಾಜಿನಾಮೆ ನೀಡರಬಹುದು ಎಂದು ಊಹಿಸಲಾಗಿದೆ. ಅಮಿತ್ ಅಗರ್ವಾಲ್ ರವರ ರಾಜಿನಾಮೆಯ ನಂತರ ಆ ಹುದ್ದೆಗೆ ಜೆಟ್ ಏರ್ವೇಸ್ ಯಾರನ್ನು ನೇಮಿಸಿಲ್ಲ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬರಬೇಕಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.