ಹುಬ್ಬಳ್ಳಿ: ಜೆಡಿಎಸ್ ಬಿಜೆಪಿಗೆ ಸಪೋರ್ಟ್ ಮಾಡೋಲ್ಲ. ನನಗೆ ಜೆಡಿಎಸ್ ಬಗ್ಗೆ ಗೊತ್ತು ನಾನು ಜೆಡಿಎಸ್ ನಲ್ಲಿಯೇ ಇದ್ದು ಬಂದವನು ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, “ಬಿಜೆಪಿ 8 ಸ್ಥಾನ ಗೆಲ್ಲದೇ ಹೊದ್ರೆ ರಾಜೀನಾಮೆ ನೀಡಬೇಕು ಅಂತ ಒತ್ತಾಯಿಸಿದರು.ಇನ್ನು ಒಂದು ವೇಳೆ, ಬಿಜೆಪಿ ಸೋತು ಹೋದ್ರೆ ಜೆಡಿಎಸ್ ಎಂದಿಗೂ ಸಪೋರ್ಟ್ ಮಾಡಲ್ಲ.ಯಾಕೆಂದ್ರೆ ನನಗೆ ಜೆಡಿಎಸ್ ಬಗ್ಗೆ ಚೆನ್ನಾಗಿ ಗೊತ್ತಿದೆ.ನಾನು ಜೆಡಿಎಸ್ ನಲ್ಲೆ ಇದ್ದು ಬಂದವನು.ಅಂತ ಹೇಳಿದರು. ಇನ್ನು ಮಧ್ಯಂತರ ಚುನಾವಣೆ ಆದರೆ 100ಕ್ಕೆ 100 ರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ನಾನು ಸಿಎಂ ಆಗೋದು ಬಿಡೋದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ.