ಸೀರತ್‌ ಅಭಿಯಾನ : ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

-

ಜಾಹೀರಾತು

ಜಾಹೀರಾತು

ಉಡುಪಿ : ಸೀರತ್ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಶಾಖೆಯ ವತಿಯಿಂದ ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಸಂದರ್ಶನವನ್ನು ಮಾಡುವುದರ ಜೊತೆಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಆಸ್ಪತ್ರೆಯ ಸರ್ಜನ್ ಡಾ. ಮಧುಸೂದನ್ ರೋಗಿಗಳಿಗೆ ಹಣ್ಣುಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಜಮಾಅತೆ ಇಸ್ಲಾಮೀ ಹಿಂದ್ ನ ಸಮಾಜ ಸೇವಾ ವಿಭಾಗದ ಸದಸ್ಯರಾದ ಅಬ್ದುಲ್ ಅಝೀಝ್ ಉದ್ಯಾವರ್ ಮಾತನಾಡಿ, ಪ್ರವಾದಿ ಮುಹಮ್ಮದ್ (ಸ) ಈ ಜಗತ್ತಿಗೆ ಬಂದು ಸಾವಿರದ ನಾಲ್ನೂರು ವರ್ಷಗಳು ಕಳೆದರೂ ಅವರು ಕಲಿಸಿ ಕೊಟ್ಟ ಸಂದೇಶ ಮಾತ್ರ ಇಂದಿಗೂ ಜೀವಂತವಾಗಿಯೇ ಉಳಿದಿದೆ ಅದರ ಒಂದು ಭಾಗ ಈ ರೋಗಿ ಸಂದರ್ಶನ ಎಂದು ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಶಾಖೆಯ ಕಾರ್ಯದರ್ಶಿ ನಿಸಾರ್ ಕಟಪಾಡಿ, ಸಮಾಜ ಸೇವಾ ಘಟಕದ ಇಸ್ಹಾಕ್ ಹೂಡೆ, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಅಧ್ಯಕ್ಷರಾದ ಶಾಹಿದಾ ರಿಯಾಝ್, ಕಾರ್ಯಕರ್ತರಾದ ಅಬ್ದುಲ್ ಅಝೀಜ್ ಆದಿಉಡುಪಿ, ರಿಯಾಜ್ ಅಹ್ಮದ್, ರಹೀಸ್, ಮೆಹರುನ್ನಿಸಾ ಮಣಿಪಾಲ್, ಫರ್ಹತ್ ದಾವೂದ್, ಮೆಹರುನ್ನಿಸಾ ಆದಿ ಉಡುಪಿ, ನೂರ್ ಜಹಾನ್, ಸಮೀನಾ ಶುಕೂರ್ , ಇಕ್ಬಾಲ್ ಮನ್ನ, ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ಶಾರೂಕ್ ತೀರ್ಥಹಳ್ಳಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest news

CAA:Amu ನಲ್ಲಿ‌ ಪೊಲೀಸರ ಗೂಂಡಾ ವರ್ತನೆ; ದ್ವಿಚಕ್ರ ವಾಹನ ನಾಶ ಮಾಡಿದ ಪೊಲೀಸರು!

ಉತ್ತರ ಪ್ರದೇಶ: ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಸಿಡಿಸಿದ ಪೊಲೀಸರು ನಂತರ ಸುಮ್ಮನಾಗದೆ ಪೊಲೀಸರು ವಿದ್ಯಾರ್ಥಿಗಳ ದ್ವಿಚಕ್ರ ವಾಹನಗಳನ್ನು ನಾಶ ಮಾಡುವ ದೃಶ್ಯ...

ನಾನು ಮತ್ತು ನನ್ನ ದೇಶ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳೊಂದಿಗಿದ್ದೇವೆ – ಇರ್ಫಾನ್ ಪಠಾಣ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವಿರುದ್ಧ ಪೊಲೀಸರು ದೌರ್ಜನ್ಯ ನಡೆಸಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಘಟನೆಯನ್ನು ಖಂಡಿಸಿ ಭಾರತೀಯ ಕ್ರಿಕೆಟ್...

ಟ್ವೀಟರ್ ಟ್ರೇಡಿಂಗ್: ಅಮಿತ್ ಶಾ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಇದೀಗ ಗೃಹ ಸಚಿವ ಅಮಿತ್ ಶಾ ರವರು ರಾಜೀನಾಮೆ ನೀಡಬೇಕೆಂದು ಟ್ವಿಟರ್ ಟ್ರೇಡಿಂಗ್ ಆಗುತ್ತಿದೆ. ಜಾಮಿಯಾ...

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಸಿಡಿದೆದ್ದ ಕನ್ನಡಿಗರು!

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್ ಬಳಿ ಭಾನುವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಜೊತೆ ಸೇರಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟಿಸಿದರು. ತ್ರಿವರ್ಣ...
- Advertisement -

CAA: ದಕ್ಷಿಣ ದೆಹಲಿಯಲ್ಲಿ ಬಸ್ಸಿಗೆ ಬೆಂಕಿ ಹಾಕಿದ್ದು ಪೊಲೀಸರೇ!

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ್ದು ಪೊಲೀಸರೆಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ವಿವಾದಾಸ್ಪದವಾಗಿ ಕ್ಯಾನ್ ಹಿಡಿದು ಬಸ್ ಬಳಿ ಹೋಗುವ...

CAA: ರಣರಂಗವಾದ ಜಾಮೀಯ ಮಿಲ್ಲಿಯಾ; ಪೊಲೀಸರಿಂದ ಮುಂದುವರಿದ ದೌರ್ಜನ್ಯ!

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯು ಭಾರತದಲ್ಲಿ ಅರಾಜಕತೆ ಉಂಟು ಮಾಡುತ್ತಿದ್ದು, ಎಲ್ಲೆಡೆಯೂ ಪ್ರತಿಭಟನೆಯ ಕಾವು ಜೋರಾಗಿದೆ. ಇಂದು ದಕ್ಷಿಣ ದೆಹಲಿಯ ಜಾಮಿಯಾ‌ ಮಿಲ್ಲಿಯಾ ಇಸ್ಲಾಮಿಯ ವಿದ್ಯಾರ್ಥಿಗಳು ಶಾಂತಿಯುತ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you