ಬೆಂಗಳೂರು:ಬಟ್ಟೆ ಅಂಗಡಿ ಮಾಲೀಕ ಜೈ ಕುಮಾರ್ ಅನ್ನು ಮಗಳೇ ಪ್ರಿಯಕರ ನ ಜೊತೆ ಸೇರಿ ಕೊಂಡು ಶೋಚಾಲಯ ದಲ್ಲಿ ಸುಟ್ಟು ಹಾಕಿದ್ದಳು.ಇದಕ್ಕೆ ಕಳೆದ ತಿಂಗಳು ಜೂಲೈ ನಲ್ಲೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.

ತನ್ನ ಮಗಳು ಆಕೆಯ ಸ್ನೇಹಿತ ಪ್ರವೀಣ್ ಜೊತೆ ಓಡಾಡುವುದು,ಟೆಲಿಫೋನ್ ನಲ್ಲಿ ಮಾತನಾಡುವುದು ಜೈಕುಮಾರ್ ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಆಕೆಯ ಮೊಬೈಲ್ ಕಸಿದುಕೊಂಡು ಬುದ್ದಿವಾದ ಹೇಳಿದ್ದರು.ಹಾಗೂ ಪ್ರವೀಣ್‍ನ ಜೊತೆ ಸ್ನೇಹ ಬಿಡುವಂತೆ ಹೇಳಿ ಮಗಳ ಮೇಲೆ ಎರಡು ಸಲ ಹಲ್ಲೆ ಮಾಡಿದ್ದರಂತೆ. ಎಲ್ಲೂ ಹೊರಹೋಗದಂತೆ ಮನೆಯಲ್ಲಿಯೇ ಕೂಡಿಹಾಕಿದ್ದರಂತೆ.

ಒಮ್ಮೆ ದಾರಿಯಲ್ಲಿ ಸಿಕ್ಕಿದ ಪ್ರವೀಣ್‍ನಿಗೆ ತನ್ನ ಮಗಳ ಸಹವಾಸಕ್ಕೆ ಬರಬೇಡ, ಬಂದರೆ ಪರಿಸ್ಥಿತಿ ಚೆನ್ನಾಗಿರುವುದಿಲ್ಲ ಎಂದು ಜೈಕುಮಾರ್ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.ಇದರಿಂದ ಪ್ರವೀನ್ ಗೆ ಕೂಡ ಸಿಟ್ಟು ಬಂದಿತ್ತು.

ಸಿಟ್ಟಿನಿಂದ ಇಬ್ಬರು ಜುಲೈ ತಿಂಗಳಲ್ಲೇ ಜೈ ಕುಮಾರ್ ಅನ್ನು ಕೊಲೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ತಾಯಿ, ತಮ್ಮ ಪಾಂಡಿಚೇರಿಗೆ ಹೋಗುವ ಸಮಯವನ್ನೇ ಕಾಯುತ್ತಿದ್ದ ಪುತ್ರಿ ಮತ್ತು ಆಕೆಯ ಸ್ನೇಹಿತ ಪ್ರವೀಣ್ ಇಬ್ಬರೂ ಸೇರಿ ಶನಿವಾರ ರಾತ್ರಿ ಜೈಕುಮಾರ್ ಅವರನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು.

ಹಾಲಿನಲ್ಲಿ ನಿದ್ರೆ ಮಾತ್ರೆಯನ್ನು ಬೆರೆಸಿ ಕೊಟ್ಟು ಚಾಕುವಿನಲ್ಲಿ ಇರಿದು ಕೊಲೆ ಮಾಡಿ ನಂತರ ಶವವನ್ನು ಮೂಟೆ ಕಟ್ಟಿ ಹೊರಗೆ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಬರಲು ಯೋಚಿಸಿದ್ದರು. ಎಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತೇವೆಯೋ ಎಂಬ ಭಯದಿಂದ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಾಟಕವಾಡಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.