ಇಸ್ರೇಲ್: ಇಸ್ರೇಲ್ ಚುನಾವಣೆಯಲ್ಲಿ ದೀರ್ಘಕಾಲ ಅಧ್ಯಕ್ಷನಾಗಿ ಅಧಿಕಾರ ಅನುಭವಿಸಿದ್ದ ಬೆಂಜಮಿನ್ ನೆತನ್ಯುಹುಗೆ ಸೋಲಾಗಿದೆ. ಈತನ ಪಕ್ಷ 120 ಸ್ಥಾನಗಳಲ್ಲಿ 55 ಸ್ಥಾನ ಗೆದ್ದರೆ, 56 ಸೆಂಟರ್, ಲೆಫ್ಟ್ ಪಕ್ಷ ಗೆದ್ದಗೊಂಡಿದೆ.

ಈಗಾಗಲೇ ಸೆಂಟರ್-ಲೆಫ್ಟ್ ಪಕ್ಷ ನೆತನ್ಯುಹು ಮನೆ ಬಾಗಿಲು ಬಡಿದಿದ್ದು ಇಬ್ಬರು ಸೇರಿ ಸರಕಾರ ನಡೆಸುವ ಸಾಧ್ಯತೆಯಿದೆ. ಸೆಂಟರ್ ಲೆಫ್ಟ್ ಪಕ್ಷ ವನ್ನು ಮಾಜಿ ಮಿಲಿಟರಿ ಅಧಿಕಾರಿ ಬೆನ್ನಿ ಗಾಂಟ್ಸ್ ಮುನ್ನಡೆಸುತ್ತಿದ್ದಾರೆ.

ನೇತಾನ್ಯೂ ಪ್ರತಿನಿಧಿಸುವ ಲಿಕುಡ್ ಪಕ್ಷದ ವಕ್ತಾರನ ಪ್ರಕಾರ, ಈಗಾಗಲೇ ಸೆಂಟರ್ – ಲೆಫ್ಟ್ ಪಕ್ಷ ಪ್ರಧಾನ ಮಂತ್ರಿ ಕಚೇರಿಗೆ ಧಾವಿಸಿ ಮೈತ್ರಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಬಹುಮತ ಸಾಧಿಸಲು ಪಕ್ಷವೊಂದಕ್ಕೆ 61 ಸ್ಥಾನಗಳ ಅವಶ್ಯಕತೆಯಿದೆ. ಈಗಾಗಲೇ 90% ಫಲಿತಾಂಶ ಹೊರಬಿದ್ದಿದ್ದು ಬಹುಮತ ಬರುವುದು ಬಹುತೇಕ ಕಡಿಮೆ ಸಾಧ್ಯತೆಯಿರುವುದರಿಂದ ಮೈತ್ರಿ ಸಾಧ್ಯತೆ ಹೆಚ್ಚಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ನೇತಾನ್ಯೂಹು ಸೋಲು ಆತನಿಗೆ ಕಂಟಕವಾಗಲಿದ್ದು ಈಗಾಗಲೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಆತನಿಗೆ ವಿಚಾರಣೆಗೊಳಪಡಿಸುವ ಸಾಧ್ಯತೆಯಿದ್ದು ಸೋಲಿನಿಂದಾಗಿ ಸಂಸತ್ ರಕ್ಷಣೆ ಕೂಡ ಸಿಗದೆ ಪರದಾಡುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.