ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಇಂದು ದೆಹಲಿಯ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿಯೇ ಉತ್ತರ ನೀಡಿದ ಐಶ್ವರ್ಯ ತಂದೆಯ ಫಾರ್ಮುಲಾ ಬಳಸಿದ್ದಾರೆ ಎಂದು ತಿಳಿದು ಬಂದಿದೆ.

ಡಿಕೆಶಿ ಪುತ್ರಿ ಐಶ್ವರ್ಯ ಇಡಿ ವಿಚಾರಣೆಯಲ್ಲಿ “ನನಗೆ ಗೊತ್ತಿರುವ ಮತ್ತು ನೆನಪಿನಲ್ಲಿರುವ ವಿಷಯಗಳನ್ನು ಮಾತ್ರ ಹೇಳುತ್ತೇನೆ. ನನಗೆ ತಿಳಿಯದಿರದ ಪ್ರಶ್ನೆಗಳಿಗೆ ದಾಖಲೆ ನೋಡಿ ಮತ್ತು ಚಾರ್ಟೆಡ್ ಅಕೌಂಟಂಟ್ ಬಳಿ ಕೇಳಿ ಹೇಳುತ್ತೇನೆ. ನನಗೆ ಗೊತ್ತಿಲ್ಲದೇ ಯಾವ ವ್ಯವಹಾರಗಳು ನಡೆದಿಲ್ಲ. ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ಇದೆ.ನನ್ನ ಎಲ್ಲ ವ್ಯವಹಾರಗಳಿಗೆ ತಂದೆಯ ಆರ್ಥಿಕ ನೆರವು ಇದೆ. ಎಲ್ಲ ವ್ಯವಹಾರಗಳನ್ನು ಘೋಷಿಸಿಕೊಂಡು ತೆರಿಗೆಯನ್ನು ಪಾವತಿಸಿದ್ದೇನೆ.ಎಂದು ಖಡಕ್ ಉತ್ತರ ನೀಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.