ನವದೆಹಲಿ: ಅತ್ಯಂತ ಅಗ್ಗವಾದ ದರದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಇಂಡಿಗೋ ವಿಮಾನ ಸಂಸ್ಥೆಯು ಅಹ್ಮದಬಾದಿನಿಂದ ಲಕ್ನೋ ಬರುತ್ತಿದ್ದ ವಿಮಾನದಲ್ಲಿ ಉಂಟಾದ ಇಂಜಿನ್ ವೈಫಲ್ಯದ ಕಾರಣ ತನ್ನ 47 ವಿಮಾನಗಳನ್ನು ರದ್ದು ಮಾಡಿದೆ. ಕೆಲವು ಸಮಯಗಳಿಂದ ಇಂಡಿಗೋ ವಿಮಾನದ ಇಂಜಿನಲ್ಲಿ ತೊಂದರೆ ಕಾಣಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಮುಂಬೈ,ಚೆನೈ,ಹೈದರಾಬಾದ್,ಬೆಂಗಳೂರು ಪಟ್ನಾಗಳ,ಗುವಾಹಟಿ ಸೇರಿದಂತೆ ಹಲವಾರು ಪ್ರದೇಶಗಳ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಈಗ ಇಂಡಿಗೊ ವಿಮಾನದಲ್ಲಿ ಕಾಣಿಸುತ್ತಿರುವ ಇಂಜಿನ್ ವೈಫಲ್ಯದ ಕಾರಣ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.