ಭಾರತದ ಅರ್ಥಿಕತೆ ಪಾತಾಳಕ್ಕೆ ಜಾರುತ್ತಿದೆ; ಮಾಧ್ಯಮ ಪೀಟಿಲು ಬಾರಿಸುತ್ತಿದೆ!

949

ಭಾರತದಲ್ಲಿ ಹಿಂದೆಂದೂ ಕಂಡರಿಯದ ಮಟ್ಟಿಗೆ ಅರ್ಥಿಕ ಕುಸಿತ ತಲೆಯೆತ್ತಿದೆ. ಅವೈಜ್ಞಾನಿಕ ನೀತಿ, ದುರ್ಬಲ ಪ್ರಯೋಗಗಳು, ಅತ್ಯುತ್ತಮ ನೀತಿಯ ಅಸಮರ್ಪಕ ಜಾರಿಗಳು ಹೀಗೆ ಕೇಂದ್ರ ಸರಕಾರದ ವೈಫಲ್ಯಗಳು ದೊಡ್ಡ ಬಿರುಗಾಳಿಯಾಗಿ ದೇಶ ಅರ್ಥಿಕತೆಯ ಮೇಲೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರಿದೆ.

ಅದೆಷ್ಟೋ ಕೈಗಾರಿಕೆಗಳು ಮುಚ್ಚಿ ಹೋಗುತ್ತಿವೆ. ದಶಕಗಳಿಂದ ತಲೆಯೆತ್ತಿ ನಿಂತಿದ್ದ ಭಾರತದ ಅರ್ಥಿಕತೆಗೆ ಆಧಾರವಾಗಿದ್ದ ಕಾರ್ಖಾನೆಗಳು ಅರ್ಥಿಕ ದಿವಾಳಿತನಕ್ಕೆ ಒಳಗಾಗಿ ಬೀಗ ಜಡಿಯಲ್ಪಡುತ್ತಿದೆ. ಸಣ್ಣ ವ್ಯಾಪರಿಗಳು ನಲುಗಿ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ವ್ಯಾಪರ ಸ್ಥಗಿತ ವಾಗಿದೆ. ರೂಪಾಯಿ ಮೌಲ್ಯ ಕುಸಿತಗೊಂಡಿದೆ. ಬಿಜೆಪಿ ಸಂಸದರು ಒಮ್ಮೆ ಭಾಷಣದಲ್ಲಿ ಹೇಳಿರುವಂತೆ ‘ಒಂದು ರೂಪಾಯಿಗೆ ಹದಿನೈದು ಡಾಲರ್” ಬಿಡಿ ಇವತ್ತು ನಮ್ಮ ರೂಪಾಯಿ ಬಾಂಗ್ಲಾದೇಶದ ಕರೆನ್ಸಿ ಮೌಲ್ಯದ ಹತ್ತಿರ ಸುಳಿದಾಡುತ್ತಿದೆ. ಭೂತನ್ ಒಂದು ಕರೆನ್ಸಿಗೆ ನಮ್ಮ ಒಂದು ರೂಪಾಯಿ ಸಮಾನವಾಗಿದೆ.
ಇಷ್ಟೆಲ್ಲಾ ರಾದ್ಧಾಂತಗಳು ಸಂಭವಿಸಿದರೂ ನಮ್ಮ ಮಾಧ್ಯಮಗಳು ಮಾತ್ರ ಪಿಟೀಲು ಬಾರಿಸುವುದನ್ನು ನಿಲ್ಲಿಸಿಲ್ಲ. ದೇಶದ ಅರ್ಥಿಕ ಪರಿಸ್ಥಿತಿ ತೀರಾ ಹದೆಗಟ್ಟಿರುವಾಗಲೂ ಅದರ ಸುಧಾರಣೆಯ ಬಗ್ಗೆ ವಿಮರ್ಶಿಸಿ ಸರಕಾರವನ್ನು ಟೀಕಿಸುವುದನ್ನು ಬಿಟ್ಟು ಎಂಜಲು ನಾಯಿಗಳಂತೆ ಸರಕಾರದ ಬಗ್ಗೆ ಪೀಟಿಲು ಬಾರಿಸುತ್ತಿರುವುದು ಕಾಣಬಹುದಾಗಿದೆ.

ಮತ್ತೊಂದು ಕಡೆ ಕಾಶ್ಮೀರದ ವಿಚಾರಗಳನ್ನು ವೈಭವೀಕರಿಸುತ್ತ, ಪಾಕಿಸ್ತಾನದ ಪ್ರಧಾನಿಯೊಬ್ಬ ನಡೆಸುವ ಮೀಟಿಂಗ್ ನಲ್ಲಿ ಚಾ ಮತ್ತು ಬಿಸ್ಕತ್ತು ಇಲ್ಲವೆಂದು ಕಾರ್ಯಕ್ರಮಗಳನ್ನು ನಡೆಸುತ್ತ ಸರಕಾರದ ವೈಫಲವ್ಯವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದೆ. ಆದರೂ ಕೆಲವೊಮ್ಮೆ ತನ್ನ ಜಾಹೀರಾತಿಗೆ ಗಣನೀಯವಾಗಿ ಅರ್ಥಿಕ ಹೊಡೆತ ಬೀಳುತ್ತಿರುವುದನ್ನು ಗಮನಿಸಿರುವ ಮಾಧ್ಯಮ “ಮುಳುಗುತ್ತಿರುವ ಭಾರತದ ಅರ್ಥಿಕತೆ” ಎಂದು ತಮಗರಿವಿಲ್ಲದೇ ಸರಕಾರದ ಬಗ್ಗೆ ಟೀಕಿಸಿದ ಕಾರ್ಯಕ್ರಮಗಳು ಕೂಡ ಬಂದದ್ದು ಇದೆ. ಇದರರ್ಥ ಮಾಧ್ಯಮ ಇಚ್ಚಿಸದಿದ್ದರೂ ಭಾರತದ ಅರ್ಥಿಕತೆಯ ಕುಸಿತ ಅವರನ್ನು ಬಾಧಿಸುತ್ತಿರುವುದು ಸುಳ್ಳಲ್ಲ.

ಇನ್ನು ಕೆಲವರು ಸರಕಾರದ ವೈಫಲ್ಯವನ್ನೇ ಸಾಧನೆಯೆಂದು ಬಿಂಬಿಸಲು ಹೊರಟಿದ್ದಾರೆ. ಈ ಹಿಂದಿನ ಪ್ರಧಾನಿಗಳು ಇದ್ರೆ ಏನು ಮಾಡುತ್ತಿದ್ದರು. ಹಾಗೆ ಹೀಗೆ ಎಂದು ಜನರ ದಾರಿ ತಪ್ಪಿಸುವಲ್ಲಿ ನಿರತರಾಗಿದ್ದಾರೆ. ಜನರು ಬಿಜೆಪಿಯನ್ನು ಅದಕ್ಕಿಂತ ಮುಖ್ಯವಾಗಿ ಮೋದಿಯನ್ನು ಸುಧಾರಿಸಲು ಆಯ್ಕೆ ಮಾಡಿದರೆ ವಿನಾ ಪೊಳ್ಳು ನೆಪವೊಡ್ಡಿ ಭವ್ಯ ಭಾರತವನ್ನು ಅರ್ಥಿಕ ನಷ್ಟದ ಸುಳಿಯಲ್ಲಿ ಸಿಲುಕಿಸಲು ಅಲ್ಲವೆಂಬ ಕನಿಷ್ಠ ಜ್ಞಾನ ಕೂಡ ಇವರಿಗಿಲ್ಲವೆಂಬುದು ಸ್ಪಷ್ಟವಾಗುತ್ತದೆ.

ಒಂದು ದೇಶದ ಪ್ರಜಾಪ್ರಭುತ್ವಕ್ಕೆ ಮಾಧ್ಯಮಗಳು ಬೆನ್ನೆಲುಬಾಗಿರುತ್ತದೆ. ಅದು ಸರಕಾರಗಳ ತಪ್ಪುಗಳನ್ನು ಜನರ ಮುಂದೆ ತಂದು ಸರಕಾರದ ಸರ್ವಾಧಿಕಾರ ಧೋರಣೆಗೆ ಬ್ರೇಕ್ ಹಾಕಿ ಪ್ರಜಾಪ್ರಭುತ್ವದ ರಕ್ಷಣೆಯೊಂದಿಗೆ ಜನರ ಹಿತಾಸಕ್ತಿ ಕಾಪಾಡುವುದು ಅದರ ಮುಖ್ಯ ಕರ್ತವ್ಯ. ಆದರೆ ಇಂದು ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳು ಸರಕಾರದ ಕಾವಲು ನಾಯಿಗಳಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಮಾಧ್ಯಮಗಳು ಭಾರತದ ಅರ್ಥಿಕ ಕುಸಿತ ಕಾಣುತ್ತಿದ್ದರೂ ಸರಕಾರದ ಸುಳ್ಳುಗಳನ್ನು ವೈಭವೀಕರಿಸಿ ದೇಶದ ಜನರ ಗಮನ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿರುವುದಾಗಿದೆ. ಮಾಧ್ಯಮಗಳ ಇದೇ ಚಾಳಿ ಮುಂದುವರಿದರೆ ದೇಶದ ಅರ್ಥಿಕ ಸಂಕಟಗಳು, ಸರಕಾರಗಳ ದಬ್ಬಾಳಿಕೆ ಮತ್ತಷ್ಟು ಹೆಚ್ಚಾಗಲಿದೆ ಕೊನೆಯಲ್ಲಿ ಈ ಮಾಧ್ಯಮಗಳ ಬುಡಕ್ಕೂ ಅದು ಕೊಳ್ಳಿಯಿಡಲಿದೆ ಎಂಬುದು ಮಾತ್ರ ಸತ್ಯ!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.